ಮಳೆರಾಜೇಂದ್ರಸ್ವಾಮಿ ರಥೋತ್ಸವ: ತೇರು ಎಳೆದ ಸಹಸ್ರಾರು ಭಕ್ತರು; ವಿಡಿಯೋ ನೋಡಿ

ಮಳೆರಾಜೇಂದ್ರಸ್ವಾಮಿ ರಥೋತ್ಸವ: ತೇರು ಎಳೆದ ಸಹಸ್ರಾರು ಭಕ್ತರು; ವಿಡಿಯೋ ನೋಡಿ


ಬಾಗಲಕೋಟೆ, ಫೆಬ್ರವರಿ 25: ಜಿಲ್ಲೆಯ ಹೊಸಮುರನಾಳ ಗ್ರಾಮದಲ್ಲಿ ಮಳೆರಾಜೇಂದ್ರಸ್ವಾಮಿ ರಥೋತ್ಸವವು ಅದ್ದೂರಿಯಾಗಿ ನೆರವೇರಿತು. ಈ ಭವ್ಯ ಕಾರ್ಯಕ್ರಮಕ್ಕೆ ಭಕ್ತರು ಸಾಕ್ಷಿಯಾದರು. ಭಾವೈಕ್ಯತೆಗೆ ಹೆಸರಾದ ಈ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಉತ್ಸಾಹದಿಂದ ತೇರನ್ನು ಎಳೆದರು. ಪಲ್ಲಕ್ಕಿ ಮೆರವಣಿಗೆ, ಮಹಿಳೆಯರಿಂದ ಆರತಿ ಸೇವೆ ಮತ್ತು ಕುದುರೆ ಮೇಲೆ ಆದಿತ್ಯನಾಥ ಸ್ವಾಮೀಜಿ ಅವರ ಮೆರವಣಿಗೆಯು ಪ್ರಮುಖ ಆಕರ್ಷಣೆಯಾಗಿತ್ತು. ಹೊಸಮುರನಾಳ ಗ್ರಾಮದಾದ್ಯಂತ ಸಂಭ್ರಮದ ವಾತಾವರಣ ನೆಲೆಸಿತ್ತು. ಭಕ್ತರು ಶ್ರೀ ಮಳೆರಾಜೇಂದ್ರಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *