ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಇನ್ನು ಮುಂದೆ ತೆಲಂಗಾಣದ ಸೊಸೆ. ವಿಜಯ್ ದೇವರಕೊಂಡ ಅವರೊಟ್ಟಿಗೆ ಮದುವೆ ಆಗುತ್ತಿರುವ ರಶ್ಮಿಕಾ ತೆಲುಗು ಮನೆ ಸೇರುತ್ತಿದ್ದಾರೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ರಾಜಸ್ಥಾನದ ಉದಯಪುರದ ಅದ್ಧೂರಿ ಅರಮನೆಯಂಥಹ ರೆಸಾರ್ಟ್‌ನಲ್ಲಿ ನಡೆಯುತ್ತಿದೆ. ಈ ಮದುವೆಯಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬದ ಸದಸ್ಯರು, ಅತ್ಯಾಪ್ತ ಗೆಳೆಯರು ಮಾತ್ರ ಭಾಗವಹಿಸಿದ್ದಾರೆ. ಎರಡೂ ಕುಟುಂಬದವರು ಪರಸ್ಪರ ಆಟವಾಡಿದ್ದಾರೆ. ಮೆಹಂದಿ, ಹಳದಿ, ಸಂಗೀತ ಕಾರ್ಯಕ್ರಮಗಳನ್ನು ನಿರ್ವಹಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ಎಂಜಾಯ್‌ಮೆಂಟ್‌ಗಳ ಮಧ್ಯೆ ರಶ್ಮಿಕಾಗೆ ವಿಜಯ್ ತಾಯಿ ಅತ್ಯಂತ ಅಮೂಲ್ಯವಾದ ಉಡುಗೊರೆಗಳನ್ನು ನೀಡಿದ್ದಾರೆ. ಉಡುಗೊರೆ ಪಡೆದ ರಶ್ಮಿಕಾ ಭಾವುಕ.
ರಶ್ಮಿಕಾ ಮಂದಣ್ಣ ಅವರಿಗೆ ವಿಜಯ್ ದೇವರಕೊಂಡ ಅವರ ತಾಯಿ, ತಮ್ಮ ಕುಟುಂಬದ ತಲೆಮಾರುಗಳಿಂದಲೂ ಬಳುವಳಿಯಾಗಿ ಬಂದಿರುವ ಚಿನ್ನದ ಬಳೆಗಳನ್ನು ಘೋಷಿಸಿದ್ದಾರೆ. ಈ ಬಳೆಗಳು ಕೆಲವು ತಲೆಮಾರುಗಳಿಂದಲೂ ಕುಟುಂಬದ ಸೊಸೆಯಾಗಿ ಬಂದವರಿಗೆ ಕೊಡಲಾಗುತ್ತಿದೆಯಂತೆ. ಅದೇ ಇದೀಗ ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ದೇವರಕೊಂಡ ತಮ್ಮ ಕುಟುಂಬದ ದೊಡ್ಡ ಸೊಸೆ ಆಗುತ್ತಿರುವ ರಶ್ಮಿಕಾ ಮಂದಣ್ಣಗೆ ಉಡುಗೊರೆಯಾಗಿ ನೀಡಿದ್ದಾರೆ.
ಸಂಗೀತ್ ಕಾರ್ಯಕ್ರಮದಲ್ಲಿ ಮಾಧವಿ ಅವರು ಸೊಸೆಗೆ ಬಳೆಗಳನ್ನು ಉಡುಗೊರೆಯಾಗಿ ನೀಡಿದ್ದು, ಹಲವು ತಲೆಮಾರುಗಳನ್ನು ಕಂಡಿರುವ, ದೇವರಕೊಂಡ ಕುಟುಂಬದ ಐತಿಹಾಸಿಕ ಮೌಲ್ಯವನ್ನು ಒಳಗೊಂಡಿರುವ ಸುಂದರ, ಅತ್ಯಂತ ಅಮೂಲ್ಯವೂ ಅಪರೂಪವೂ ಆಗಿರುವ ಬಳೆಗಳನ್ನು ಪಡೆದು ರಶ್ಮಿಕಾ ಅವರು ಭಾವುಕರಾಗಿ, ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆಗೆ ತೆರಳಿದ ಆಶಿಕಾ ರಂಗನಾಥ್
ಅಂದಹಾಗೆ ವಿಜಯ್ ಅವರ ಪರವಾಗಿ ರಶ್ಮಿಕಾಗೆ ಹೊಸಬರೇನೂ ಅಲ್ಲ. ಕಳೆದ ಕೆಲ ವರ್ಷಗಳಿಂದ ಸಹ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಅವರ ಕುಟುಂಬದ ನಡುವೆ ಬಹಳ ಆತ್ಮೀಯತೆ ಇದೆ. ಕೆಲ ವರ್ಷಗಳಿಂದಲೂ ಎಲ್ಲ ಹಬ್ಬಗಳನ್ನು ರಶ್ಮಿಕಾ, ವಿಜಯ್ ದೇವರಕೊಂಡ ಮನೆಯಲ್ಲಿಯೇ ಆಚರಿಸುತ್ತಿದ್ದರು. ವಿಜಯ್ ಅವರ ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ರಶ್ಮಿಕಾಗೆ ಆಹ್ವಾನ ಇದ್ದೇ ಇರುತ್ತಿತ್ತು. ಕಳೆದ ವರ್ಷ ವಿಜಯ್ ತಾಯಿಯ ಹುಟ್ಟುಹಬ್ಬಕ್ಕೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದರು. ವಿಜಯ್ ಅವರ ಪೋಷಕರೊಡನೆ ರಶ್ಮಿಕಾಗೆ ಬಹಳ ಆತ್ಮೀಯತೆ ಇದೆ. ಇದು ಮುಂದಿನ ಅವರ ದಾಂಪತ್ಯಕ್ಕೂ ಸಹಕಾರಿ ಆಗಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ