ಲಕ್ಷ ಲಕ್ಷ ಸಾಲ ಮಾಡಿ ತೀರಿಸಲಾಗದೆ 120 ಅಡಿ ಹೈಟೆನ್ಶನ್ ಟವರ್ ಏರಿದ ಭೂಪ! ಆಮೇಲೇನಾಯ್ತು? ಇಲ್ಲಿದೆ ನೋಡಿ

ಲಕ್ಷ ಲಕ್ಷ ಸಾಲ ಮಾಡಿ ತೀರಿಸಲಾಗದೆ 120 ಅಡಿ ಹೈಟೆನ್ಶನ್ ಟವರ್ ಏರಿದ ಭೂಪ! ಆಮೇಲೇನಾಯ್ತು? ಇಲ್ಲಿದೆ ನೋಡಿ


ತುಮಕೂರು, ಫೆಬ್ರವರಿ 26: ರೂಪಾಯಿ ರೂಪಾಯಿ ಕೈಸಾಲ ಮಾಡಿ ಮರುಪಾವತಿಸಲು ಆಗದೆ ಸಂಕಷ್ಟಕ್ಕೊಳಗಾದ ವ್ಯಕ್ತಿ 400 ಕೆವಿ ಹೈಟೆನ್ಶನ್ ವಿದ್ಯುತ್ ಟವರ್ ಏರಿ ಹುಚ್ಚಾಟ ಮೆರೆದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಿಕೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಗೋಪಾಲ ಎಂಬಾತ ಬಿಕೆಹಳ್ಳಿ–ದಳವೆಹಳ್ಳಿ ರಸ್ತೆಯ ನಡುವೆ ಇರುವ ಸುಮಾರು 120 ಅಡಿ ಎತ್ತರದ ಹೈಟೆನ್ಶನ್ ಟವರ್ ಏರಿ ಕುಳಿತಿದ್ದಾನೆ. ಸಾಲದ ಒತ್ತಡದಿಂದ ಬೇಸತ್ತು ಈ ದುಸ್ಸಾಹಸಕ್ಕೆ ಕೈಹಾಕಿದ್ದಾನೆ ಎಂದು ಸ್ಥಳೀಯರು.

ಘಟನೆ ಕುರಿತು ಮಾಹಿತಿ ತಿಳಿದ ತಿರುಮಣಿ ತಕ್ಷಣ ಸ್ಥಳಕ್ಕೆ ಧಾವಿಸಿ, ಗೋಪಾಲನನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದೆ. ಹಲವು ಗಂಟೆಗಳ ಮಾತುಕತೆ ಬಳಿಕ ಗೋಪಾಲ ಸಮಾಧಾನಗೊಂಡರೂ, ಅಷ್ಟು ಎತ್ತರದಿಂದ ಸುರಕ್ಷಿತವಾಗಿ ಕೆಳಗಿಳಿಯುವುದು ಕಷ್ಟಕರವಾಗಿತ್ತು. ನಂತರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಹಗ್ಗ, ಹಾರ್ನೆಸ್ ಬೆಲ್ಟ್, ಲ್ಯಾಡರ್ ಸೇರಿದಂತೆ ಅಗತ್ಯ ರಕ್ಷಣಾ ಉಪಕರಣಗಳನ್ನು ಬಳಸಿ ಎಚ್ಚರಿಕೆಯಿಂದ ಗೋಪಾಲನನ್ನು ಕೆಳಗಿಳಿಸಿದರು.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *