ಪುಟಾಣಿಗಳು (ಚಿಕ್ಕ ಮಕ್ಕಳು) ಏನು ಮಾಡಿದ್ರೂ ಕೂಡ ಚಂದನೇ. ಮುದ್ದು ಮಕ್ಕಳು ಮನೆಯ ಸಾಕು ಪ್ರಾಣಿಗಳ ಜೊತೆ ತುಂಟಾಟ ಆಡುವುದನ್ನು ನೋಡುವಾಗ ಖುಷಿಯಾಗುತ್ತದೆ. ತನ್ನ ಮೇಲೆ ಪ್ರೀತಿ ಕಾಳಜಿ ತೋರುವ ಮುದ್ದು ಮನಸ್ಸಿನ ಮಕ್ಕಳಿಗೆ ಕಾವಲಾಗಿ ನಿಲ್ಲುತ್ತವೆ. ಈ ದೃಶ್ಯ ನೋಡಿದರಂತೂ ಮುಗ್ಧ ಮನಸ್ಸುಗಳ ಶುದ್ಧ ಪ್ರೀತಿಗೆ ನೀವು ಕರಗುವುದು ಖಂಡಿತ. ಪುಟಾಣಿಗಳಿಬ್ಬರೂ ಎತ್ತಿನ ಕಾಲು ಒತ್ತಿ ಸೇವೆ ಮಾಡುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಮುದ್ದು ಮಕ್ಕಳು ಮೂಕ ಪ್ರಾಣಿಗಳ ಮೇಲೆ ಪ್ರೀತಿ ತೋರುವ ರೀತಿಯನ್ನು ಮೆಚ್ಚಿದ್ದಾರೆ.
ಹಳ್ಳಿಕಾರ್2022 ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಪುಟಾಣಿಗಳಿಬ್ಬರೂ ಎತ್ತಿನ ಪಕ್ಕದಲ್ಲಿ ಕುಳಿತಿದ್ದು, ಎತ್ತಿನ ಕಾಲುಗಳನ್ನು ಒತ್ತಿ ಸೇವೆ ಮಾಡುವಾಗ ನೀವು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಶಾಲೆ ಬಿಟ್ಟೊಡನೆ ಪುಸ್ತಕವನ್ನು ಚರಂಡಿಗೆ ಎಸೆದು ಹೋದ ಪುಟಾಣಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಸೇರಿದ್ದು, ಒಬ್ಬ ಬಳಕೆದಾರ, ಈ ಸನ್ನಿವೇಶ ನೋಡಿ ನನ್ನ ಕಣ್ಣಂಚಲಿ ನೀರು ತುಂಬಿದೆ. ಎಂತ ನಿಷ್ಕಲ್ಮಶವಾದ ಪ್ರೀತಿ. ಈ ಮುಗ್ಧ ಮಕ್ಕಳು ಮತ್ತೆ ಬಸವಣ್ಣನ ಪ್ರೀತಿ ಬಾಂಧವ್ಯಗಳು ಹೇಳಲು ಎರಡು ಪದಗಳು ಸಾಲದು. ಈ ಸನ್ನಿವೇಶದ ಕ್ಷಣಗಳಿಗೆ ನಾನು ಎಂದೆಂದಿಗೂ ಚಿರಋಣಿ ಎಂದು ಕಾಮೆಂಟ್ ಮಾಡಿದ್ದೇನೆ. ಮತ್ತೊಬ್ಬರು, ಬಸವನ ಸೇವೆ ಮಾಡಿದ ಮುದ್ದು ಪುಟಾಣಿಗಳಿಗೆ ನನ್ನ ನಮಸ್ಕಾರಗಳು. ಮತ್ತೊಬ್ಬರು, ಆಹಾ ಎಷ್ಟು ಸೊಗಸಾಗಿದೆ ಈ ದೃಶ್ಯ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 11:32 am, ಗುರುವಾರ, 26 ಫೆಬ್ರವರಿ 26