ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (ರಾಜೇಂದ್ರ ಸಿಂಗ್ ಬಾಬು) ಅವರು ‘ವೀರ ಕಂಬಳ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಈ ಸಿನಿಮಾ ಕಂಬಳ ಕ್ರೀಡೆಯ ಕುರಿತಾದ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಆದಿತ್ಯ ಸೇರಿದಂತೆ ನಟಿಸಿದ್ದಾರೆ. ಸಿನಿಮಾದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸಹ ನಟಿಸಿದ್ದಾರೆ. ಈ ಬಗ್ಗೆ TV9 ಜೊತೆಗೆ ಮಾತನಾಡುತ್ತಿರುವ ರಾಜೇಂದ್ರ ಸಿಂಗ್ ಬಾಬು, ‘ಕ್ಲೈಮ್ಯಾಕ್ಸ್‌ನಲ್ಲಿ ಸಂದೇಶ ನೀಡುವ ಪಾತ್ರವೊಂದು ಬೇಕಿತ್ತು, ನಾನು ತುಂಬಾ ಘನವಾದ ಪಾತ್ರವನ್ನು ಮಾಡಬೇಕಿತ್ತು, ನನಗೆ ಹೆಗ್ಗಡೆ ಅವರ ಚಿಕ್ಕದ್ದಿನಿಂದ ಪರಿಚಯ, ಕ್ರಿಕೆಟ್ ಆಡಿದ್ದೇನೆ, ನಾನು ಕೇಳಿದೆ ಅವರೂ ಸಹ ಒಪ್ಪಿಕೊಂಡರು. ಆದರೆ ಕೆಲ ತಿಂಗಳ ಹಿಂದೆ ಕರೆ ಮಾಡಿ, ಹೆಗ್ಗಡೆ ಅವರು ನಟಿಸಿರುವ ಸೀನ್ ಅನ್ನು ತೆಗೆದು ಹಾಕಬೇಕು ಎಂದು ಬೆದರಿಕೆ ಹಾಕಿದರು. ಆದರೆ ನಾನು ಯಾವುದಕ್ಕೂ ಮಣಿಯಲಿಲ್ಲ’ ರಾಜೇಂದ್ರ ಸಿಂಗ್ ಬಾಬು ಹೇಳುವುದೇನು? ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 11:44 am, ಗುರುವಾರ, 26 ಫೆಬ್ರವರಿ 26