How to clean gas burner at home: ನಿಮ್ಮ ಮನೆಯ ಗ್ಯಾಸ್ ಸ್ಟೌವ್ ಉರಿ ನಿಧಾನವಾಗಿದೆಯೇ? ಅಡುಗೆ ಮಾಡಲು ಮೊದಲಿನಿಗಿಂತ ಹೆಚ್ಚು ಸಮಯ ತಗುಲುತ್ತಿದೆಯೇ?. ಹಾಗಾದ್ರೆ ನಿಮ್ಮ ಗ್ಯಾಸ್ ಕೂಡ ವೇಸ್ಟ್ ಆಗುತ್ತೆ. ಆದ್ದರಿಂದ ನಿಮ್ಮ ಹಳೆಯ ಬರ್ನರ್ ಹೊಸದರಂತೆ ಹೊಳೆಯುವಂತೆ ಮಾಡಲು ಇಲ್ಲಿದೆ ಅದ್ಭುತ ಟ್ರಿಕ್ಸ್.

ಗ್ಯಾಸ್ ಬರ್ನರ್‌ನ ಸಣ್ಣ ಸಣ್ಣ ರಂಧ್ರಗಳಲ್ಲಿ ಎಣ್ಣೆ, ಮಸಾಲೆ, ಹಿಟ್ಟಿನಂತಹ ಹಲವು ವಸ್ತುಗಳು ತುಂಬಿಕೊಳ್ಳುತ್ತವೆ. ಬರ್ನರ್‌ನಲ್ಲಿ ಏನಾದರೂ ತುಂಬಿಕೊಂಡಾಗ ಅದು ನಿಧಾನವಾಗಿ ಉರಿಯಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ಅಡುಗೆ ಮಾಡಲು ಅಥವಾ ಆಹಾರ ಬೇಯಲು ಹೆಚ್ಚು ಸಮಯ ತಗುಲುತ್ತದೆ. ಇದರಿಂದ ಗ್ಯಾಸ್ ಕೂಡ ಹೆಚ್ಚು ವ್ಯರ್ಥವಾಗುತ್ತದೆ. ಇದರರ್ಥ ಗ್ಯಾಸ್ ಬರ್ನರ್ ಕೊಳೆಯಾಗಿದೆ ಎಂದರ್ಥ.

ಗ್ಯಾಸ್ ಬರ್ನರ್‌ನ ರಂಧ್ರಗಳಲ್ಲಿ ತುಂಬಿರುವ ಕೊಳೆಯನ್ನು ಸಾಮಾನ್ಯ ರೀತಿಯಲ್ಲಿ ಸ್ವಚ್ಛಗೊಳಿಸಿದರೂ ಅವು ಸರಿಯಾಗಿ ಕ್ಲೀನ್ ಆಗಲ್ಲ. ಆದ್ದರಿಂದ ಇವುಗಳನ್ನು ಸ್ವಚ್ಛಗೊಳಿಸಲು ನಮ್ಮ ಬಳಿ ಒಂದು ‘ಕಿಚನ್ ಟ್ರಿಕ್’ ಇದೆ. ಈ ಟಿಪ್ ಬರ್ನರ್ ಅನ್ನು ಕೆಲವೇ ನಿಮಿಷಗಳಲ್ಲಿ ಹೊಳೆಯುವಂತೆ ಮಾಡುತ್ತದೆ.

ಗ್ಯಾಸ್ ಬರ್ನರ್ ಸ್ವಚ್ಛಗೊಳಿಸಲು ಮನೆಯಲ್ಲಿರುವ ಪದಾರ್ಥಗಳು ಸಾಕು.ಅಷ್ಟೇ ಅಲ್ಲ, ಇವುಗಳನ್ನು ಸ್ವಚ್ಛಗೊಳಿಸಲು ನೀವು ಹೆಚ್ಚು ಶ್ರಮ ಪಡಬೇಕಾಗಿಲ್ಲ.

1 ಗ್ಲಾಸ್ ಬಿಸಿ ನೀರು1 ಪ್ಯಾಕೆಟ್ ಇನೋ (Eno)ಟೂತ್ ಬ್ರಷ್ಉಪ್ಪುಲಿಂಬೆ ರಸಪಾತ್ರೆ ತೊಳೆಯುವ ಸೋಪು (Dish soap)

ಗ್ಯಾಸ್ ಬರ್ನರ್ ಸ್ವಚ್ಛಗೊಳಿಸಲು ಒಂದು ಗ್ಲಾಸ್ ನೀರನ್ನು ಬಿಸಿ ಮಾಡಿ ಒಂದು ದೊಡ್ಡ ಬೌಲ್‌ಗೆ ಹಾಕಿ. ಈಗ ಇದರಲ್ಲಿ ನಿಂಬೆ ರಸ ಹಾಕಿ ಮತ್ತು ಬರ್ನರ್ ಅನ್ನು ಈ ನೀರಿನಲ್ಲಿ ಮುಳುಗಿಸಿ. ಈಗ ಈ ನೀರಿಗೆ ಇನೋ ಹಾಕಿ. ನೆನಪಿರಲಿ, ನೀವು ಇನೋವನ್ನು ನೀರಿಗೆ ನಿಧಾನವಾಗಿ ಹಾಕಬೇಕು. ಇದರ ನಂತರ ಬರ್ನರ್ ಅನ್ನು 15 ನಿಮಿಷಗಳ ಕಾಲ ಈ ನೀರಿನಲ್ಲಿ ನೆನೆಯಲು ಬಿಡಿ.

ನೀರು ತಣ್ಣಗಾದ ನಂತರ ಬರ್ನರ್ ಅನ್ನು ಹೊರತೆಗೆಯಿರಿ ಮತ್ತು ಹಳೆಯ ಟೂತ್ ಬ್ರಷ್ ಮೇಲೆ ಸೋಪು ಹಚ್ಚಿ ಬರ್ನರ್ ಅನ್ನು ಉಜ್ಜಿ ಸ್ವಚ್ಛಗೊಳಿಸಿ. ನಿಧಾನವಾಗಿ ಬರ್ನರ್ ಮೇಲೆ ಜಮೆಯಾದ ಕಾರ್ಬನ್ ಹೊರಬರುತ್ತದೆ. ಒಂದು ವೇಳೆ ಬರ್ನರ್ ಮೇಲೆ ಹಠಮಾರಿ ಕಲೆಗಳಿದ್ದು ಅವು ಹೋಗದಿದ್ದರೆ, ನೀವು ಉಪ್ಪು ಹಚ್ಚಿ ಅದನ್ನು ಉಜ್ಜಿರಿ. ನಿಂಬೆ ಹಣ್ಣಿನ ಸಿಪ್ಪೆಯಿಂದಲೂ ಉಜ್ಜಿ ಇದನ್ನು ಸ್ವಚ್ಛಗೊಳಿಸಬಹುದು. ನಿಮ್ಮ ಬರ್ನರ್ ಹೊಸದರಂತೆ ಹೊಳೆಯುತ್ತದೆ.

ಈ ವಿಧಾನವನ್ನು ತಿಂಗಳಿಗೊಮ್ಮೆ ಮಾಡುವುದರಿಂದ ನಿಮ್ಮ ಗ್ಯಾಸ್ ಸ್ಟೌವ್ ದೀರ್ಘಕಾಲ ಬಾಳಿಕೆ ಬರುತ್ತದೆ ಮತ್ತು ಇಂಧನ ಉಳಿತಾಯವಾಗುತ್ತದೆ.

Source link