ಬ್ರೇಕ್ ಫೇಲ್​ ಆಗಿ ರಸ್ತೆಯಲ್ಲಿ ಅಡ್ಡಾದಿಡ್ಡಿ ನುಗ್ಗಿದ ಲಾರಿ: ಸಿಕ್ಕ ಸಿಕ್ಕ ವಾಹನಕ್ಕೆಲ್ಲ ಡಿಕ್ಕಿ

ಬ್ರೇಕ್ ಫೇಲ್​ ಆಗಿ ರಸ್ತೆಯಲ್ಲಿ ಅಡ್ಡಾದಿಡ್ಡಿ ನುಗ್ಗಿದ ಲಾರಿ: ಸಿಕ್ಕ ಸಿಕ್ಕ ವಾಹನಕ್ಕೆಲ್ಲ ಡಿಕ್ಕಿ


ದೇವನಹಳ್ಳಿ, ಫೆಬ್ರವರಿ 26: ಬ್ರೇಕ್ ಫೇಲ್ ಆದ ಪರಿಣಾಮ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನುಗ್ಗಿದ ಲಾರಿಯೊಂದು ಸಿಕ್ಕಿ ಸಿಕ್ಕ ವಾಹನಗಳಿಗೆ ಗುದ್ದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬಾಗಲೂರಿನಲ್ಲಿ ನಡೆದಿದೆ. ಎದುರು ಬರುತ್ತಿದ್ದ ಕಾರುಗಳು, ದ್ವಿಚಕ್ರ ವಾಹನಗಳು ಸೇರಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಲಾರಿ ನಿಂತಿದ್ದು, ಘಟನೆಯ ದೃಶ್ಯ ಕಾರೊಂದರ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಾರಿ ನುಗ್ಗಿದ ರಭಸಕ್ಕೆ ಎರಡು ಕಾರುಗಳು, 3 ಬೈಕ್‌ಗಳು ಜಖಂ ಆಗಿದ್ದು, ವಾಹನಗಳಲ್ಲಿ ಎಲ್ಲರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಮಾನಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಲೋಡ್ ತುಂಬಿಕೊಂಡು ಬರುತ್ತಿದ್ದಾಗ ಏಕಾಏಕಿ ಲಾರಿಯ ಬ್ರೇಕ್ ಫೇಲ್ ಆಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಬಗ್ಗೆ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *