ಹಾಸನದಲ್ಲಿ ಜೀತ ಪದ್ಧತಿ ಇನ್ನೂ ಜೀವಂತ: ಪೊಲೀಸರಿಂದ 18 ಕಾರ್ಮಿಕರ ರಕ್ಷಣೆ

ಹಾಸನದಲ್ಲಿ ಜೀತ ಪದ್ಧತಿ ಇನ್ನೂ ಜೀವಂತ: ಪೊಲೀಸರಿಂದ 18 ಕಾರ್ಮಿಕರ ರಕ್ಷಣೆ


ಹಾಸನ, ಫೆಬ್ರವರಿ 26: ರಾಜ್ಯದಲ್ಲಿ ಇನ್ನೂ ಅನಿಷ್ಟ ಜೀತ ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ಹಾಸನದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಹಳೇ ಹೋಬಳಿಯ ಚಟ್ನಹಳ್ಳಿ ಗ್ರಾಮದಲ್ಲಿ ಕೂಡಿಹಾಕಲಾಗಿದ್ದ 18ಕ್ಕೂ ಹೆಚ್ಚು ಕಾರ್ಮಿಕರನ್ನು ರಕ್ಷಿಸಿದ್ದಾರೆ. ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಶುಂಠಿ ಕೆಲಸಕ್ಕೆಂದು ಕರೆತರಲಾಗಿದ್ದ ಈ ಕಾರ್ಮಿಕರನ್ನು, ಮಾಲೀಕ ನಾಗರಾಜ್ ಎಂಬಾತ ಕೂಡಿಹಾಕಿ ದುಡಿಸಿಕೊಳ್ಳುತ್ತಿದ್ದ. ಇವರಿಗೆ ಯಾವುದೇ ಹಣ ನೀಡದೆ, ಕೆಲಸ ಮುಗಿದ ನಂತರ ಒಂದೇ ಜಾಗದಲ್ಲಿ ಲಾಕ್ ಮಾಡಿಲ್ಲ. ಹೊರಗೆ ಹೋಗಲು ಯಾವುದೇ ಅವಕಾಶವಿರಲಿಲ್ಲ. ಪೊಲೀಸರು ದಾಳಿ ನಡೆಸಿದಾಗ, ಆರೋಪಿ ನಾಗರಾಜ್ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಬಲೆ ಬೀಸಿದೆ, ರಕ್ಷಿಸಲ್ಪಟ್ಟ ಕಾರ್ಮಿಕರು ತಾವು ಅನುಭವಿಸಿದ ಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *