ನವದೆಹಲಿ, ಫೆಬ್ರುವರಿ 26: ಸ್ವಿಟ್ಜರ್ಲ್ಯಾಂಡ್ನ ಜಿನಿವಾದಲ್ಲಿ ನಡೆಯುತ್ತಿರುವ 61ನೇ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಸಭೆಯಲ್ಲಿ (UNHRC) ಮಾನವ ಹಕ್ಕು ವಿಚಾರ ಕೆಡಗಿದ ಪಾಕಿಸ್ತಾನಕ್ಕೆ ಭಾರತ ಝಾಡಿಸಿದೆ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಜನರ ಮೇಲೆ ಭಾರತ ಸರ್ಕಾರ ದೌರ್ಜನ್ಯ ಎಸಗುತ್ತಿದೆ. ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಎಂಬ ಪಾಕಿಸ್ತಾನದ ಆರೋಪಗಳಿಗೆ ಭಾರತ ತಿರುಗೇಟು ಕೊಟ್ಟಿದೆ. ಆರ್ಥಿಕ ಕುಸಿತ ಹೊಂದಿರುವ ಪಾಕಿಸ್ತಾನವು, ಅಭಿವೃದ್ಧಿ ಹೊಂದುತ್ತಿರುವ ಕಾಶ್ಮೀರದ ಬಗ್ಗೆ ಮಾತನಾಡುವ ದಾರ್ಷ್ಟ್ಯತನ ತೋರಿದೆ ಎಂದು ಭಾರತ ಕಿಡಿಕಾರಿದೆ.
ಪಾಕಿಸ್ತಾನ ಐಎಂಎಫ್‌ನಲ್ಲಿ ಕೇಳುತ್ತಿರುವ ಸಾಲದ ಹಣಕ್ಕಿಂತ ಎರಡು ಪಟ್ಟು ಹೆಚ್ಚಿದೆ ಬಜೆಟ್ ಮತ್ತು ಕಾಶ್ಮೀರದ ಅಭಿವೃದ್ಧಿ ಎಂದು ವಿಶ್ವಸಂಸ್ಥೆಯ ಮಾನವ ಮಂಡಳಿ ಸಭೆಯಲ್ಲಿ ಭಾರತ ಹೇಳಿದೆ. ಈ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿರುವ ಅನುಪಮಾ ಸಿಂಗ್ ಅವರು, ಪಾಕಿಸ್ತಾನದ ಸುಳ್ಳುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: 1917ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟಿದ್ದ 35,000 ರೂ ಸಾಲ ವಾಪಸ್ ಕೇಳಲಿರುವ ಭಾರತೀಯ ಕುಟುಂಬ; ಈಗದರ ಮೌಲ್ಯ ಎಷ್ಟಿರಬಹುದು?
ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಆರೋಪಗಳಿಗೆ ಬೆಂಬಲ ನೀಡಿದ ಇಸ್ಲಾಮಿಕ್ ಸಹಕಾರ ಸಂಘಟನೆಯನ್ನೂ (ಒಐಸಿ) ಅನುಪಮಾ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ಸದಸ್ಯ ದೇಶಕ್ಕಾಗಿ ಈ ಸಂಘಟನೆಯು ಇಕೋ ಚೇಂಬರ್‌ನಂತೆ ಕೆಲಸ ಮಾಡುತ್ತಿದೆ ಎಂದು ಒಐಸಿಯನ್ನು ಟೀಕಿಸಿದ್ದಾರೆ.
ಅಕ್ರಮವಾಗಿ ವಶಪಡಿಸಿಕೊಂಡಿರುವುದು ಪಾಕಿಸ್ತಾನವೇ
‘ಜಮ್ಮು ಮತ್ತು ಕಾಶ್ಮೀರವು ಹಿಂದೆಯೂ, ಮುಂದೆಯೂ ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ. 1947ರಲ್ಲಿ ಭಾರತದಲ್ಲಿ ಅದರ ಸೇರ್ಪಡೆ ಸಂಪೂರ್ಣ ಕಾನೂನು ಬದ್ಧವಾಗಿಯೇ ಇತ್ತು. ಒಂದೇ ಸಮಸ್ಯೆ ಎಂದರೆ ಭಾರತದ ಭೂಭಾಗಗಳನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿರುವುದು’ ಎಂದು ಹೇಳಿರುವ ಅನುಪಮಾ ಸಿಂಗ್ ಅವರು, ಈ ಭೂಭಾಗಗಳನ್ನು ಬಿಟ್ಟುಕೊಡುವಂತೆ ಕಾಣುತ್ತಿದ್ದಾರೆ. ಅನುಪಮಾ ಸಿಂಗ್ ಅವರು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಗ್ಗಿಟ್ ಬಾಲ್ಟಿಸ್ತಾನ್ ಪ್ರದೇಶಗಳನ್ನು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕ್ಯಾಷ್ ಪೆಮೆಂಟ್ ಹಿಡಿದು ವಿತ್ತರಾಯಲ್ ವರೆಗೆ, ಆದಾಯ ತೆರಿಗೆ ಇಲಾಖೆಯಿಂದ ತಪ್ಪಿಸಿಕೊಳ್ಳಲಾಗದ 16 ಹಣಕಾಸು ವಹಿವಾಟುಗಳು…
ವೀಡಿಯೊ | ಸ್ವಿಟ್ಜರ್ಲೆಂಡ್: ಯುಎನ್ ಮಾನವ ಹಕ್ಕುಗಳ ಮಂಡಳಿಯ 55 ನೇ ನಿಯಮಿತ ಅಧಿವೇಶನದ ಉನ್ನತ ಮಟ್ಟದ ವಿಭಾಗದಲ್ಲಿ, ಜಿನೀವಾದಲ್ಲಿ ಮೊದಲ ಕಾರ್ಯದರ್ಶಿ ಅನುಪಮಾ ಸಿಂಗ್, “ಭಾರತವು ಉನ್ನತ ಮಟ್ಟದ ವಿಭಾಗದಲ್ಲಿ ಮಾಡಿದ ಉಲ್ಲೇಖಗಳಿಗೆ ಪ್ರತಿಕ್ರಿಯೆಯಾಗಿ ತನ್ನ ಪ್ರತ್ಯುತ್ತರದ ಹಕ್ಕನ್ನು ಚಲಾಯಿಸಲು ಒತ್ತಾಯಿಸಲ್ಪಟ್ಟಿದೆ… pic.twitter.com/uHOrmIEf4g
— ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (@PTI_News) ಫೆಬ್ರವರಿ 26, 2026
ಕನಸಿನ ಲೋಕದಲ್ಲಿದೆ ಪಾಕಿಸ್ತಾನ
ಕಣಿವೆ ರಾಜ್ಯವು ಅಭಿವೃದ್ಧಿವಂಚಿತವಾಗಿದೆ ಎಂಬ ಪಾಕಿಸ್ತಾನದ ಆರೋಪಕ್ಕೆ ಯುಎನ್‌ಎಚ್‌ಆರ್‌ಸಿ ಸಭೆಯಲ್ಲಿ ಭಾರತ ಕಟುವಾಗಿ ಪ್ರತ್ಯುತ್ತರ ನೀಡಿದೆ. ಕಾಶ್ಮೀರದಲ್ಲಿ ವಿಶ್ವದ ಎತ್ತರದ ಸೇತುವೆ ಎನಿಸಿದ ಚೆನಾಬ್ ಬ್ರಿಡ್ಜ್ನ ಅತಿಯನ್ನು ಅನುಪಮಾ ಸಿಂಗ್ ಉಲ್ಲೇಖಿಸಿದ್ದಾರೆ. ‘ಚೆನಾಬ್ ರೈಲ್ ಬ್ರಿಡ್ಜ್ ಸುಳ್ಳು ಎನ್ನುವುದಾದರೆ ಪಾಕಿಸ್ತಾನ ಯಾವುದೋ ಭ್ರಮೆಯಲ್ಲಿರಬಹುದು, ಅಥವಾ ಲಾ ಲಾ ಲ್ಯಾಂಡ್‌ನಲ್ಲಿ (ಕನಸಿನ ಲೋಕ) ವಾಸಿಸುತ್ತಿರಬಹುದು’ ಎಂದು ಸಿಂಗ್ ತಿವಿದಿದ್ದಾರೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ