Headlines

ಎಂಟು ವಾರಗಳ ವರೆಗೆ ಒಟಿಟಿಯಲ್ಲಿ ಬಿಡುಗಡೆ ಇಲ್ಲ: ಟಾಲಿವುಡ್ ಮಹತ್ವದ ನಿರ್ಧಾರ

ಎಂಟು ವಾರಗಳ ವರೆಗೆ ಒಟಿಟಿಯಲ್ಲಿ ಬಿಡುಗಡೆ ಇಲ್ಲ: ಟಾಲಿವುಡ್ ಮಹತ್ವದ ನಿರ್ಧಾರ


ಚಿತ್ರಮಂದಿರಕ್ಕೆ (ಥಿಯೇಟರ್) ಜನ ಬರುತ್ತಿಲ್ಲ, ಸಿನಿಮಾಗಳ ಬಜೆಟ್ ಆಗುತ್ತಿದೆ, ನಿರ್ಮಾಪಕರು ನಷ್ಟವಾಗಿದ್ದಾರೆ ಎಂಬ ದೂರುಗಳು ಎಲ್ಲ ಚಿತ್ರರಂಗದಿಂದಲೂ ಕೇಳಿ ಬರುತ್ತಿವೆ. ಪೈರಸಿ, ಸಿನಿಮಾಗಳನ್ನು ಪರೋಕ್ಷವಾಗಿ ಕಾಡಿದರೆ ಒಟಿಟಿಗಳು ನೇರವಾಗಿ ಜನರ ಚಿತ್ರಮಂದಿರಕ್ಕೆ ಬರದಂತೆ ತಡೆಯುತ್ತಿದ್ದಾರೆ ಎಂದು ವಿತರಕರು ಕೆಲ ನಿರ್ಮಾಪಕರು ಆರೋಪಿಸುತ್ತಲೇ ಬಂದಿದ್ದಾರೆ. ಸ್ಟಾರ್ ನಟರ ಸಿನಿಮಾಗಳು ಸಹ ಬಿಡುಗಡೆಯಾದ ತಿಂಗಳಿಗೆ ಮುಂಚೆಯೇ ಒಟಿಗೆ ಬರುವ ಮೂಲಕ ಚಿತ್ರಮಂದಿರಗಳು ಆದ, ವಿತರಕರು ನಷ್ಟ ಹೊಂದಿದ ಉದಾಹರಣೆಗಳಿವೆ, ಇದೇ ಕಾರಣಕ್ಕೆ ಇದೀಗ ನೆರೆಯ ತೆಲುಗು ಚಿತ್ರರಂಗದ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಇನ್ನು ಮುಂದೆ ನಿರ್ಮಾಣ ಆಗುವ ಯಾವುದೇ ತೆಲುಗು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಆದ ಎಂಟು ವಾರಗಳ ಬಳಿಕವಷ್ಟೇ ಒಟಿನಲ್ಲಿ ಬಿಡುಗಡೆ ಆಗಬೇಕು ಎಂಬ ಶಿಸ್ತಿನ ಶರತ್ತನ್ನು ತೆಲುಗು ಸಿನಿಮಾ ಚೇಂಬರ್, ನಿರ್ಮಾಪಕರ ಸಂಘ ವಹಿಸಿದೆ. ಸುಮಾರು 40 ಮಂದಿ ಸಿನಿಮಾ ವಿತರಕರು, ಪ್ರದರ್ಶಕರು ಮತ್ತು ನಿರ್ಮಾಪಕರು ಸಭೆ ನಡೆಸಿ ಸಿನಿಮಾಗಳ ಒಟಿ ಬಿಡುಗಡೆ ಮೇಲೆ ನಿಯಂತ್ರಣ ಹೇರುವ ನಿರ್ಧಾರ ತೆಗೆದುಕೊಂಡಿದ್ದಾರೆ.

ತೆಲುಗು ಫಿಲಂ ಚೇಂಬರ್‌ನ ಎಕ್ಸಿಕ್ಯೂಟಿವ್ ಸಮಿತಿಯ ಮುಂದೆ ನಿರ್ಧಾರವನ್ನು ಪ್ರಕಟಿಸಲಾಗಿದೆ, ಕಮಿಟಿಯಲ್ಲಿರುವ ನಿರ್ಮಾಪಕರು ಸಹ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ, ಇನ್ನು ಮುಂದೆ ನಿರ್ಮಾಣ ಆಗುವ ತೆಲುಗು ಸಿನಿಮಾಗಳು ಕಡ್ಡಾಯವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು ಎಂಟು ವಾರಗಳ ನಂತರವೇ ಒಟಿಟಿಯಲ್ಲಿ ಬಿಡುಗಡೆ ಆಗಬೇಕು ಎಂದು ಆದೇಶಿಸಿದೆ. ಈ ಸಭೆಯಲ್ಲಿ ತೆಲುಗು ಚಿತ್ರರಂಗದ ಪ್ರಮುಖ ನಿರ್ಮಾಪಕರಾದ ದಿಲ್ ರಾಜು, ಸುರೇಶ್ ಬಾಬು, ಸುನಿಲ್ ನಾರಂಗ್, ಠಾಗೂರ್ ಮಧು ಈ ಭಾಗಿ ಆಗಿದ್ದರು.

ಇದನ್ನೂ ಓದಿ:ಧುರಂಧರ್ 2 Vs ಟಾಕ್ಸಿಕ್: 10 ಕೋಟಿ ಮಂದಿ ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ

ನಿರ್ಮಾಣ ಆಗಿರುವ ಸಿನಿಮಾಗಳು, ಈಗ ಶೇಕಡ 60ರಷ್ಟು ಚಿತ್ರೀಕರಣ ಪೂರೈಸಿರುವ ಸಿನಿಮಾಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಆದರೆ ಈ ಮುಂದೆ ನಿರ್ಮಾಣವಾಗುವ ತೆಲುಗು ಸಿನಿಮಾಗಳಿಗೆ ಈ ನಿಯಮ ಅನ್ವಯಿಸಲಿದೆ. ಈ ನಿಯಮ ಜಾರಿಯಲ್ಲಿದೆ. ತಮಿಳುನಾಡಿನಲ್ಲಿ ನಾಲ್ಕು ವಾರಗಳ ನಿಯಮವಿದೆ ಕೆಲವು ಸಿನಿಮಾಗಳು ಈ ನಿಯಮವನ್ನು ಮುರಿದ ಉದಾಹರಣೆಯೂ ಇದೆ. ಮಲಯಾಳಂ ಚಿತ್ರರಂಗದಲ್ಲಿ ಆರು ವಾರಗಳ ಬಳಿಕವಷ್ಟೆ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿಲ್ಲ. ಕನ್ನಡದಲ್ಲಿ ನಿರ್ದಿಷ್ಟ ನಿಯಮ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *