Bhargavi LLB: ಇನ್ನೇನು ಭಾರ್ಗವಿ LLB ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಭಾರ್ಗವಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ಭಾರ್ಗವಿಯ ರೌದ್ರ ರೂಪ ಕಂಡು ವೀಕ್ಷಕರು ಚಪ್ಪಾಳೆ ತಟ್ಟಿದ್ರೆ, ಇನ್ನೂ ಕೆಲವರು, ದಯವಿಟ್ಟು ಸೀರಿಯಲ್ ಹೆಸರು ಬದಲಾಯಿರಿ ಎಂದಿದ್ದಾರೆ.

ಭಾರ್ಗವಿ LLB ಧಾರಾವಾಹಿಯ ಹೊಸ ಪ್ರೊಮೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸಖತ್ ಸೌಂಡ್ ಮಾಡುತ್ತಿದೆ. ಅಷ್ಟಕ್ಕೂ ಸೀರಿಯಲ್ ನ ಹೊಸ ಪ್ರೊಮೋದಲ್ಲಿ ಭಾರ್ಗವಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ಭಾರ್ಗವಿಯ ಈ ಲುಕ್ ಸಂಚಲನ ಮೂಡಿಸಿದೆ. ಅಷ್ಟಕ್ಕೂ ಧಾರಾವಾಹಿಯಲ್ಲಿ ಏನಾಗ್ತಿದೆ?

ಸದ್ಯ ರಿಲೀಸ್ ಆಗಿರುವ ಪ್ರೊಮೋದಲ್ಲಿ ಮತ್ತೆ ಆಕ್ಷನ್ ಕ್ವೀನ್ ಭಾರ್ಗವಿಯನ್ನು ಕಾಣಬಹುದು. ದುಷ್ಟರನ್ನು ಮಟ್ಟ ಹಾಕೋದಕ್ಕೆ ಮತ್ತೆ ಫೀಲ್ಡಿಗೆ ಇಳಿದ ಭಾರ್ಗವಿ, ಕಾಳಿ ದೇವಿಯ ಮುಂದೆ ರೌಡಿಗಳ ಜೊತೆಗೆ ಹೊಡೆದಾಡುವ ದೃಶ್ಯ ಪ್ರಸಾರವಾಗಿದೆ.

ದುಷ್ಟರನ್ನು ಮಟ್ಟಹಾಕೋದಕ್ಕೆ ಕಪ್ಪು ಕೋಟ್ ಧರಿಸಲೇ ಬೇಕು ಅಂತ ಇಲ್ಲ, ಪ್ರಪಂಚವನ್ನೇ ಎದುರಿಸುವ ಗುಂಡಿಗೆ ಇದ್ರೆ ಸಾಕು ಎನ್ನುವ ಟ್ಯಾಗ್ ಲೈನ್ ಜೊತೆ ಕೆಂಪು ಸೀರೆಯುಟ್ಟು, ಕೇವಲ ಕಣ್ಣು ಮಾತ್ರ ಕಾಣುವಂತೆ ಮುಖ ಮುಚ್ಚಿ, ರೌಡಿಗಳ ಜೊತೆ ಹೊದೆದಾಡುವ ಭಾರ್ಗವಿಯ ಹೊಸ ಅವತಾರ ಹೊಸ ಅಧ್ಯಯನದ ಮುನ್ಸೂಚನೆ ನೀಡಿದೆ.

ಸಹನಾ ಎನ್ನುವ ಮಗುವನ್ನು ಗಂಗಾ ಬಳಿ ಬಿಟ್ಟು ಬರುವಂತೆ ಅರ್ಜುನ್ ತಂಗಿಯ ಮಾವ, ಪೊಲಿಟೀಶನ್ ರೌಡಿಗಳಿಗೆ ವಾರ್ನ್ ಮಾಡುತ್ತಾರೆ. ರೌಡಿಗಳು ಆ ಕೆಲಸ ಮಾಡಲು ಹೊರಟಾಗ, ಕಾಳಿ ದೇವಿಯ ವಿಗ್ರಹದ ಬಳಿ, ಥೇಟ್ ಕಾಳಿ ದೇವಿಯಂತೆ ಎದುರಾಗುವ ಭಾರ್ಗವಿ, ರೌಡಿಗಳನ್ನು ಮಟ್ಟ ಹಾಕಿದ್ದಾಳೆ. ಆದರೆ ಇದರ ಕಥೆ ಏನು ಅನ್ನೋದು ಇನ್ನಷ್ಟೇ ರಿಲೀವ್ ಆಗಬೇಕಿದೆ.

ಅಪ್ಪನನ್ನು ವಕೀಲನಾಗಿ ಮತ್ತೆ ನೋಡಿ, ಜೆಪಿ ಪಾಟೀಲ್ ಎದುರು ಕೇಸ್ ಗೆದ್ದು ಹೊರಬರುತ್ತಿದ್ದಾಗಲೇ ಭಾರ್ಗವಿ ತಂದೆ ರವೀಂದ್ರ ಭಟ್ಕಳ್ ಆಕ್ಸಿಡೆಂಟ್ ಆಗಿ ತೀರಿಕೊಳ್ಳುತ್ತಾರೆ. ಈ ಆಘಾತದಿಂದ ಹೊರಬರಲು ಸಾಧ್ಯವಾಗದೇ ವಕೀಲ ವೃತ್ತಿಯಿಂದಲೇ ಗಂಡನಿಗೆ ಸಾವು ಬಂದಿದೆ ಎಂದು ಭಾರ್ಗವಿ ಅಮ್ಮ, ಇನ್ನು ಮುಂದೆ ನೀನು ವಕೀಲ ವೃತ್ತಿ ಮಾಡಬಾರದು ಎಂದು ಚಿತೆಯ ಎದುರೇ ಮಾತು ತೆಗೆದುಕೊಳ್ಳುತ್ತಾಳೆ. ಅಮ್ಮ ಹೇಳುವವರೆಗೆ ಮತ್ತೆ ಕೋಟ್ ಧರಿಸೋದಿಲ್ಲ ಎಂದು ಭಾರ್ಗವಿಯೂ ಶಪತ ಮಾಡುತ್ತಾಳೆ.

ಈಗಾಗಲೇ ಭಾರ್ಗವಿ ವಕೀಲ ವೃತ್ತಿ ಬಿಟ್ಟಾಗಿದೆ, ಇದೀಗ ಹೊಸ ಅವತಾರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಆದಷ್ಟು ಬೇಗ ಸೀರಿಯಲ್ ಹೆಸರು ಬದಲಾಯಿಸಿ ಎಂದಿದ್ದಾರೆ ವೀಕ್ಷಕರು. ಭಾರ್ಗವಿ LLB ಎನ್ನುವ ಹೆಸರಿಗೆ ತಕ್ಕಂತೆ ಈಗ ಭಾರ್ಗವಿ ವಕೀಲೆ ಅಲ್ಲ, ಅದರ ಬದಲಾಗಿ ಭಾರ್ಗವಿಯ ಅವತಾರಗಳು ಅಂತ ಇಡಿ ಎಂದು ವೀಕ್ಷಕರು ಕಾಮೆಂಟ್ ಮಾಡಿ ಸಲಹೆ ನೀಡಿದ್ದಾರೆ.

Source link
Bhargavi LLB: ಸೀರಿಯಲ್ ಮುಗಿಯಲಿದೆ ಎನ್ನುವಷ್ಟರಲ್ಲಿ ಹೊಸ ಅವತಾರದಲ್ಲಿ ಬಂದ ಭಾರ್ಗವಿ!