‘ಧುರಂಧರ್ 2’ ಸಿನಿಮಾ ನೋಡಲು ದುಬೈನಿಂದ ಭಾರತಕ್ಕೆ ಬರಲಿರುವ ಪ್ರೇಕ್ಷಕರು

‘ಧುರಂಧರ್ 2’ ಸಿನಿಮಾ ನೋಡಲು ದುಬೈನಿಂದ ಭಾರತಕ್ಕೆ ಬರಲಿರುವ ಪ್ರೇಕ್ಷಕರು


ರಣವೀರ್ ಸಿಂಗ್ ನಟನೆಯ ‘ಧುರಂಧರ’ ಸಿನಿಮಾ ಕಳೆದ ವರ್ಷ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಈಗ ಆ ಚಿತ್ರದ ಸೀಕ್ವೆಲ್ ಸಿದ್ಧವಾಗಿದೆ. ಮಾರ್ಚ್ 19 ರಂದು ‘ಧುರಂಧರ 2’ (ಧುರಂಧರ 2) ಸಿನಿಮಾ ರಿಲೀಸ್ ಆಗಲಿದೆ. ಆದರೆ ಕೆಲವು ದೇಶಗಳಲ್ಲಿ ಈ ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಮಿಡಲ್ ಈಸ್ಟ್ ದೇಶಗಳಲ್ಲಿ ಈ ಸಿನಿಮಾದ ಬಿಡುಗಡೆಗೆ ನಿಷೇಧ ಹೇರಲಾಗಿದೆ. ಆದರೂ ನೋಡಲು ಕ್ರೇಜ್ ಕಡಿಮೆ ಆಗಿಲ್ಲ. ಅನೇಕರು ದುಬೈನಿಂದ ಭಾರತಕ್ಕೆ ಬಂದು ಸಿನಿಮಾ ನೋಡಲಿದ್ದಾರೆ ಎಂದು ಚಿತ್ರದ ನಟ ಆರ್. ಮಾಧವನ್ (ಆರ್. ಮಾಧವನ್) ಅವರು ಹೇಳಿದ್ದಾರೆ.

‘ಧುರಂಧರ 2’ ಸಿನಿಮಾದಲ್ಲಿ ಆರ್. ಮಾಧವನ್ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಸಿನಿಮಾ ಬಗ್ಗೆ ಜನರಿಗೆ ಇರುವ ಕ್ರೇಜ್ ಎಂಥಾದ್ದು ಎಂದು ಅವರು ವಿವರಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಕೆಲವು ದೇಶಗಳಲ್ಲಿ ಬ್ಯಾನ್ ಆಗಿದ್ದರೂ ಕೂಡ ಪ್ರದರ್ಶನಕ್ರೇಜ್ ಕಡಿಮೆ ಆಗಿಲ್ಲ ಎಂದು ಆರ್. ಮಾಧವನ್ ಹೇಳಿದ್ದಾರೆ.

‘ಅದು ಒಳ್ಳೆಯ ಕಂಟೆಂಟ್ನ ಶಕ್ತಿ. ದುಬೈನಲ್ಲಿ ಇರುವವರು ಮಾರ್ಚ್ 19 ರ ಆಸುಪಾಸಿನಲ್ಲಿ ತಮ್ಮ ಬಿಸ್ನೆಸ್ ಮೀಟಿಂಗ್ ಪ್ಲ್ಯಾನ್ ಮಾಡಿಕೊಂಡು ಭಾರತಕ್ಕೆ ಬರಲಿದ್ದಾರೆ. ಮೀಟಿಂಗ್‌ನಲ್ಲಿ ಭಾಗವಹಿಸುವುದರ ಜೊತೆಗೆ ‘ಧುರಂಧರ 2′ ಸಿನಿಮಾವನ್ನು ಕೂಡ ಅವರು ನೋಡಬಹುದು. ಏಕೆಂದರೆ ಈ ಸಿನಿಮಾ ದುಬೈನಲ್ಲಿ ರಿಲೀಸ್ ಆಗುತ್ತಿಲ್ಲ’ ಎಂದು ಆರ್. ಮಾಧವನ್.

ಪಾಕಿಸ್ತಾನ, ದುಬೈ ಮುಂತಾದ ಕಡೆಗಳಲ್ಲಿ ‘ಧುರಂಧರ’ ಸಿನಿಮಾ ರಿಲೀಸ್ ಆಗಿರಲಿಲ್ಲ. ಆದರೆ ಪೈರಸಿ ಕಾಪಿ ಮೂಲಕ ಅಲ್ಲಿನ ಕೋಟ್ಯಂತರ ಜನರ ಸಿನಿಮಾ ನೋಡಿದರು. ಬಳಿಕ ಒಟಿಟಿಯಲ್ಲಿ ಕೂಡ ಸಿನಿಮಾವನ್ನು ವೀಕ್ಷಿಸಿದರು. ಮೊದಲ ಪಾರ್ಟ್ ಸೂಪರ್ ಹಿಟ್ ಆಗಿದ್ದು ಸೀಕ್ವೆಲ್ ಮೇಲೆ ಭಾರಿ ನಿರೀಕ್ಷೆ ಮನೆ ಮಾಡಿದೆ.

ಇದನ್ನೂ ಓದಿ: ಕೆಟ್ಟ ವಿಮರ್ಶೆಗೆ ತಿರುಗೇಟು: ಪ್ರಶಸ್ತಿ ತಿರಸ್ಕರಿಸಿ ಮುಖಭಂಗ ಮಾಡಿದ ‘ಧುರಂಧರ’ ಚಿತ್ರತಂಡ

ಆರ್. ಮಾಧವನ್, ಸಾರಾ ಅರ್ಜುನ್, ರಣವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಮ್‌ಪಾಲ್ ಮುಂತಾದವರು ‘ಧುರಂಧರ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಆದಿತ್ಯ ಧಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮಾರ್ಚ್ 19ರಂದು ‘ಧುರಂಧರ 2’ ಎದುರು ಕನ್ನಡದ ‘ಟಾಕ್ಸಿಕ್’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಆದ್ದರಿಂದ ಪೈಪೋಟಿ ಹೆಚ್ಚಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *