ಬೆಂಗಳೂರು, (ಫೆಬ್ರವರಿ 26): ರೌಡಿಶೀಟರ್ ಪವನ್ ಕುಮಾರ್ ಅವರನ್ನು (ರೌಡಿ ಶೀಟರ್ ಪವನ್ ಕುಮಾರ್) ಆತನ ತಾಯಿಯ ಕಣ್ಣೆದುರೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು (ಬೆಂಗಳೂರು) ನಗರದ ಥಣಿಸಂದ್ರ ವ್ಯಾಪ್ತಿಯ ಅಮರಜ್ಯೋತಿ ಲೇಔಟ್‌ನಲ್ಲಿ ನಡೆದಿದೆ. ಡಿಜೆ ಹಳ್ಳಿಯ ಕಪಿಲ್ ಕೊಲೆಯಲ್ಲಿ ಭಾಗವಹಿಸಿದ್ದ ಪವನ್ ಕುಮಾರ್ ಎಂಬಾತನನ್ನೇ ಆತನ ತಾಯಿಯ ಎದುರೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮೂರು ವರ್ಷಗಳ ಹಿಂದಿನ ಕಪಿಲ ಎಂಬಾತನ ಕೊಲೆಗೆ ಸೇಡಿಗಾಗಿ ನಡೆದ ರಿವೇಂಜ್ ಮರ್ಡರ್ ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೂರು ಬೈಕ್‌ಗಳಲ್ಲಿ ಹೆಲ್ಮೆಟ್ ಧರಿಸಿ ಬಂದಿದ್ದ ಆರು ಮಂದಿ ದುಷ್ಕರ್ಮಿಗಳು, ಪವನ್ ಕುಮಾರ್ ಮನೆ ಬಳಿ ದಾಳಿ ನಡೆಸಿದ್ದಾರೆ. ಪವನ್ ಮನೆಗೆ ಬಂದು ನಿಂತ ಕ್ಷಣದಲ್ಲೇ, ಆತನ ಹೆತ್ತ ತಾಯಿಯ ಕಣ್ಣೆದುರಿನಲ್ಲೇ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇನ್ನು ಹೆತ್ತ ಮಗನನ್ನು ರಕ್ಷಿಸಲು ತಾಯಿ ಮುಂದಾಗಿದ್ದರೂ ಪ್ರಯೋಜನವಾಗಲಿಲ್ಲ.
ಇದನ್ನೂ ಓದಿ: ಅನೈತಿಕ ಸಂಬಂಧ ಗುಟ್ಟು ರಟ್ಟು: ಒಂದೇ ಅವಾಜ್‌ಗೆ ಯುವಕ ದುರಂತ ಸಾವು, ಆಗಿದ್ದೇನು?
ರಿವೇಂಜ್ ಗೆ ನಡೀತಾ ಪವನ್ ಮರ್ಡರ್?
ಕಳೆದ ಮೂರು ವರ್ಷದ ಹಿಂದೆ ಡಿಜೆ ಹಳ್ಳಿಯ ಕಪಿಲ ಎಂಬಾತನ ಕೊಲೆ ನಡೆದಿತ್ತು. ಜುಲೈ 11 ,2023 ರಲ್ಲಿ ಕಪಿಲ ಎಂಬಾತನನ್ನು ಡಿಜೆ ಹಳ್ಳಿ ಬಳಿ ಕೊಲ್ಲಲಾಯಿತು. ಅದೇ ಕೇಸ್ ನಲ್ಲಿ ಮೃತ ಪವನ್ ಕುಮಾರ್ A5 ಆರೋಪಿ ಆಗಿದ್ದ. ಕಪಿಲನ ಕೊಲೆ ಮಾಡಿದರೂ ಮುಖ ತೋರಿಸದೆ ಹೆಲ್ಮೆಟ್ ಹಾಕಿಕೊಂಡು ಬಂದು 6 ಜನ ಕೊಚ್ಚಿ ಕೊಲೆ ಮಾಡಿದ್ದಾರೆ.ಅದೇ ಮಾದರಿಯಲ್ಲಿ ಬಂದು ಪವನ್ ಕುಮಾರ್ ಕೊಚ್ಚಿ ಕೊಲೆ ಮಾಡಿದ್ದಾರೆ. ಕಪಿಲನ ತಮ್ಮ ಪ್ರೇಮ್ ಸೇರಿದಂತೆ ಹಲವರ ಮೇಲೆ ಅನುಮಾನವಿದ್ದು,ಪ್ರೇಮ್ ಫಾಲೋ ಮಾಡ್ತಿದ್ದಾನೆ ಎಂದು ತಾಯಿ ಬಳಿ ಪವನ್ ಹೇಳಿಕೊಂಡಿದ್ದಾರೆ. ಹೀಗಾಗಿ ರಿವೆಂಜ್ ಗಾಗಿ ಅದೇ ಮಾದರಿಯಲ್ಲಿ ಪವನ್ ಕುಮಾರ್ ಕೊಲೆ ನಡೆದಿದೆ ಎಂಬ ಅನುಮಾನ ಬಲವಾಗಿದೆ.
ಈಶಾನ್ಯ ವಿಭಾಗ ಡಿಸಿಪಿ ಹೇಳಿದ್ದೇನು?
ಇನ್ನು ಪವನ್ ಹತ್ಯೆ ಪ್ರಕರಣದ ಬಗ್ಗೆ ಈಶಾನ್ಯ ವಿಭಾಗದ ಡಿಸಿಪಿ ಮಿಥನ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಪವನ್ ಎಂಬಾತನನ್ನ ಆತನ ಮನೆಗೆ ಬರುವಾಗ ಫಾಲೋ ಮಾಡಿದ್ದಾರೆ. ಒಟ್ಟು ಐದು ಜನ ಫಾಲೋ ಮಾಡ್ಕೊಂಡು ಬಂದಿದ್ದರು. ಮನೆ ಬಳಿ ಆತ ಗಾಡಿ ನಿಲ್ಲಿಸಿದ್ದರಿಂದ ಹಿಂದೆಯೇ ಅಟ್ಯಾಕ್ ಮಾಡಿದ್ದಾನೆ. ಕೊಲೆ ಮಾಡಿದವರ ಗುರುತು ಪತ್ತೆ. ಹಳೇ ದ್ವೇಷಕ್ಕೆ ಕೊಲೆ ಆಗಿದೆ ಎಂದು ಈಗಲೇ ಹೇಳೋದು ಸರಿಯಲ್ಲ. ಆರೋಪಿಗೆ ಅಪರಾಧ ಹಿನ್ನೆಲೆ ಇತ್ತು. ಸದ್ಯ ಆರೋಪಿಗಳನ್ನು ಹುಡುಕಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು.
ರಂದು ಪ್ರಕಟಿಸಲಾಗಿದೆ – 3:17 pm, ಗುರುವಾರ, 26 ಫೆಬ್ರವರಿ 26