ಬೆಂಗಳೂರು, ಫೆಬ್ರವರಿ 26: ಉದ್ಯೋಗ (ಕೆಲಸ) ಎಲ್ಲರಿಗೂ ಅತ್ಯವಶ್ಯಕ. ಕೈಯಲ್ಲಿ ಕೆಲಸವಿದ್ದರೆ ಮಾತ್ರ ಅಗತ್ಯಗಳನ್ನು ಪೂರೈಸಲು ಸಾಧ್ಯ. ಆದರೆ ಎರಡು ಉದ್ಯೋಗ ಅವಕಾಶಗಳು ಬಂದಾಗ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲ ಮೂಡುತ್ತದೆ. ಇದೀಗ 27 ವರ್ಷದ ಬೆಂಗಳೂರಿನ (ಬೆಂಗಳೂರು) ಟೆಕ್ಕಿಗೆ ಇದೇ ರೀತಿ ಆಗಿದ್ದು, ಹೀಗಾಗಿ ಅವರು ನೆಟ್ಟಿಗರ ಸಲಹೆ ಕೇಳಿದ್ದಾರೆ. 38 ಲಕ್ಷ ರೂ ಆಫರ್‌ನೊಂದಿಗೆ ಭಾರತದಲ್ಲಿಯೇ ಇರಬೇಕೇ ಅಥವಾ ತಿಂಗಳಿಗೆ ಸರಿಸುಮಾರು 5.19 ಲಕ್ಷ ರೂ ಸಂಬಳಕ್ಕೆ ದುಬೈಗೆ ಹೋಗಬೇಕು ಎಂದು ಕೇಳಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್ ಮಾಡಿ ಸಲಹೆ ನೀಡಿದ್ದಾರೆ.
ದುಬೈ ಸೆಂಟ್ರಲ್ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ಗೆ ಬೆಂಗಳೂರಿನಲ್ಲಿ 38 ಲಕ್ಷ ರೂ ಹಾಗೂ ದುಬೈನಲ್ಲಿ ತಿಂಗಳಿಗೆ 5 ಲಕ್ಷ ರೂ – ದುಬೈ ಯೋಗ್ಯವಾಗಿದೆಯೇ?’ ಎಂಬ ಶೀರ್ಷಿಕೆ ನೀಡಲಾಗಿದೆ. ಎರಡು ಕೊಡುಗೆಗಳಿವೆ. ಒಂದು ಬ್ರ್ಯಾಂಡೆಡ್ ಮತ್ತು ದೀರ್ಘಾವಧಿಯ ಭಾರತದ ಬೆಳವಣಿಗೆಯುಳ್ಳ “ದೊಡ್ಡ ಬ್ಯಾಂಕ್” ಮತ್ತು ಇನ್ನೊಂದು ಉದ್ಯೋಗಾವಕಾಶ ದುಬೈನಲ್ಲಿ. ಎರಡು ಕೆಲಸವು ಉತ್ತಮ ಕ್ಲೈಂಟ್‌ಗಳು, ಅತ್ಯುತ್ತಮ ಪ್ರಯೋಜನಗಳಿಂದ ಕೂಡಿದೆ ಎಂದು ಬರೆದಿದ್ದಾರೆ.
ರೆಡ್ಡಿಟ್ ಪೋಸ್ಟ್ ಇಲ್ಲಿದೆ

ಒಬ್ಬ ವ್ಯಕ್ತಿಗೆ ತಿಂಗಳಿಗೆ 21,000 ಇಡಿ ಒಂದು ಉತ್ತಮ ಸಂಬಳವೆಂದು ಪರಿಗಣಿಸಲಾಗಿದೆ. ಈ ಸಂಬಳದಲ್ಲಿ ಯಾವ ರೀತಿ ಜೀವನಶೈಲಿಯನ್ನು ನಿರೀಕ್ಷಿಸಬಹುದು. ಎಷ್ಟು ಹಣ ಉಳಿಸಬಹುದು ಎಂದು ಕೇಳಬಹುದು. ಈ ಬೆಂಗಳೂರಿನಿಂದ ಸ್ಥಳಾಂತರಗೊಳ್ಳುವುದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಒಳ್ಳೆಯದು. ದುಬೈ ಟ್ಯಾಗ್‌ಗಾಗಿ ವಿದೇಶಕ್ಕೆ ಸ್ಥಳಾಂತರಗೊಳ್ಳಲು ಬಯಸುವುದಿಲ್ಲ ಎಂದು ಹೇಳುವುದನ್ನು ಗಮನಿಸಬಹುದು.
ಇದನ್ನೂ ಓದಿ: 2.9 ಕೋಟಿ ರೂ ಸಂಬಳದ ಉದ್ಯೋಗ ತೊರೆದು ಅಮೆರಿಕದಿಂದ ಭಾರತಕ್ಕೆ ಬರಲು ನಿರ್ಧರಿಸಿದ ಅನಿವಾಸಿ ಭಾರತೀಯ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಸೇರಿಸಿದ್ದು, ಒಬ್ಬ ಬಳಕೆದಾರ ನಿಮಗೆ ಯಾವುದು ಸರಿ ಎನಿಸುತ್ತದೆ ಅದನ್ನು ಮಾಡಿ ಎಂದು ಹೇಳಿದ್ದಾರೆ. ಯಾರಾದರೂ ನಿಮ್ಮ ಉತ್ತಮ ಕೌಶಲ್ಯವನ್ನು ಹೊಂದಿದ್ದರೆ ಸಾಕಷ್ಟು ಅನುಭವವನ್ನು ಪಡೆಯಲು, ಈ ರಿಸ್ಕ್ ತೆಗೆದುಕೊಳ್ಳುತ್ತದೆ. ಕನಿಷ್ಠ 1 ವರ್ಷಕ್ಕೆ ದುಬೈಗೆ ಬಂದು ಜೀವನ ನಡೆಸಿ. ನಿಮಗೆ ಯಾವ ಆಯ್ಕೆ ಒಳ್ಳೆಯದು ಎಂದು ನೋಡಿ ಎಂದು ಕಾಮೆಂಟ್ ನಲ್ಲಿ ಸಲಹೆ ನೀಡಿದ್ದಾರೆ. ಮತ್ತೊಬ್ಬರು, ನೀವು ಒಂಟಿಯಾಗಿದ್ದರೆ, ದುಬೈಗೆ ತೆರಳುವುದು ಉತ್ತಮ ಆಯ್ಕೆ. ಖರ್ಚುಗಳನ್ನು ಕಳೆದು ತಿಂಗಳಿಗೆ 3 ಲಕ್ಷ ರೂ ಉಳಿಸಬಹುದು. ಕೆಲ ವರ್ಷಗಳ ಕಾಲ ದುಬೈನಲ್ಲಿ ಉಳಿದು ಆ ಬಳಿಕ ಹಿಂತಿರುಗಲು ಯೋಜಿಸಿ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ