Headlines

ಉಡುಪಿ: ಕರಾವಳಿಯಲ್ಲಿ ಉಪ್ಪು ನೀರು ತಡೆಯುವ ಕಿಂಡಿ ಅಣೆಕಟ್ಟು ನಿರ್ವಹಣೆಯೇ ಸವಾಲು

ಉಡುಪಿ: ಕರಾವಳಿಯಲ್ಲಿ ಉಪ್ಪು ನೀರು ತಡೆಯುವ ಕಿಂಡಿ ಅಣೆಕಟ್ಟು ನಿರ್ವಹಣೆಯೇ ಸವಾಲು


ಉಡುಪಿ, ಫೆಬ್ರವರಿ 26: ಕರಾವಳಿ ಜಿಲ್ಲೆ ಉಡುಪಿಯಲ್ಲಿ (ಉಡುಪಿ) ಈ ಬಾರಿ ಅತೀ ಹೆಚ್ಚು ಮಳೆಯಾಗಿದೆ. ಕುಡಿಯುವ ನೀರು (ನೀರು) ಸಮಸ್ಯೆ ಎದುರಾಗುವುದಿಲ್ಲ ಅಂದುಕೊಂಡ್ರೆ ಅದು ಹುಸಿಯಾಗಿದೆ. ಹಲವು ಕಡೆ ನೀರಿನ ಸಮಸ್ಯೆ ಆರಂಭವಾಗಿದೆ. ಸರಿಯಾದ ನೀರಿನ ನಿರ್ವಹಣೆ ಇಲ್ಲದೆ ಇರುವುದೇ ಸಮಸ್ಯೆಗೆ ಮೂಲ ಕಾರಣ. 600 ಕಿಂಡಿ ಅಣೆಕಟ್ಟುಗಳಲ್ಲಿ ಸಿಹಿ ನೀರಿನ ಮೂಲವಾಗಿ ಉಳಿದಿಲ್ಲ.

600ಕ್ಕೂ ಹೆಚ್ಚು ಕಡೆಗಳಲ್ಲಿ ಕಿಂಡಿ ಅಣೆಕಟ್ಟು

ಕರಾವಳಿಯಲ್ಲಿ ನದಿಗಳು ಸಮುದ್ರ ತೀರದಲ್ಲಿ ಹರಿಯುವುದರಿಂದ ಉಪ್ಪು ನೀರಿನ ಸಮಸ್ಯೆ ಹೆಚ್ಚು. 600ಕ್ಕೂ ಹೆಚ್ಚು ಕಡೆಗಳಲ್ಲಿ ಕಿಂಡಿ ಅಣೆಕಟ್ಟುಗಳನ್ನು ಮಾಡಲಾಗಿದೆ. ಆದರೆ ಈ ಪುಟ್ಟ ಅಣೆಕಟ್ಟುಗಳ ನಿರ್ವಹಣೆ ನಿಜಕ್ಕೂ ಸವಾಲಾಗಿದೆ. ಮರದ ಹಲಗೆಗಳನ್ನು ಹಾಕಿ ನೀರಿನ ಹರಿವು ತಡೆಯುವ ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಆಧುನಿಕ ತಂತ್ರಜ್ಞಾನ ಕಿಂಡಿ ಅಣೆಕಟ್ಟುಗಳಿಗೆ ಅಳವಡಿಸಲಾಗಿದೆ.

ಇದನ್ನೂ ಓದಿ: ಹೀಗೆ ಕಲುಷಿತಗೊಂಡರೆ ಸೌಪರ್ಣಿಕಾ ನದಿ ಉಳಿಯುತ್ತಾ? ಸಮಗ್ರ ವರದಿ ಸಲ್ಲಿಸುವಂತೆ ಹಸಿರು ನ್ಯಾಯಮಂಡಳಿ ಆದೇಶ

ಕರಾವಳಿಯಲ್ಲಿ ಕಿಂಡಿ ಅಣೆಕಟ್ಟುಗಳ ಅಧ್ವಾನ, ಉಪ್ಪು ನೀರು ತಡೆಯುವ ಕಿಂಡಿ ಅಣೆಕಟ್ಟು ನಿರ್ವಹಣೆಯೇ ಸವಾಲು. ಮಳೆಗಾಲ ಮುಗಿಯುತ್ತಿದ್ದಂತೆ ಅಣೆಕಟ್ಟಿಗೆ ಹಲಗೆ ಹಾಕುವ ಪರಿಶ್ರಮ ಸಕಾಲದಲ್ಲಿ ಹಲಗೆ ಹಾಕದಿದ್ದರೆ ನೀರಿನ ಸಮಸ್ಯೆ ಶುರುವಾಗುತ್ತದೆ. ಕಡಲಿಗೆ ಹೊಂದಿಕೊಂಡಿರುವ ನದಿಗಳಲ್ಲಿ ನೀರಿನ ಹರಿವು ಉಪ್ಪು ನೀರು ತಡೆಗೆ ಕಿಂಡಿ ಅಣೆಕಟ್ಟು ಅನಿವಾರ್ಯ ಮಳೆಗಾಲ ಆರಂಭವಾಗಿ ಪಶ್ಚಿಮ ಹಲಗೆ ತೆಗೆಯಬೇಕು ಇಲ್ಲದಿದ್ದರೆ ಮತ್ತೊಂದು ಸಮಸ್ಯೆ ಶುರುವಾಗುತ್ತದೆ.

ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಸವಾಲು

600 ಕಿಂಡಿ ಅಣೆಕಟ್ಟುಗಳು ಜಿಲ್ಲೆಯಲ್ಲಿ ಅದರ ನಿರ್ವಹಣೆ ಸವಾಲಾಗಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ನಿರ್ವಹಣೆ ಮಾಡುವುದು ಕಷ್ಟಸಾಧ್ಯ. ಕಿಂಡಿ ಅಣೆಕಟ್ಟುಗಳಲ್ಲಿ ಮರದ ಹಲಗೆ ಜೋಡಿಸಿ ಮಣ್ಣು ಕಟ್ಟುವ ಕಾರಣಕ್ಕೆ ಸಿಹಿನೀರಿಗೆ ಉಪ್ಪು ನೀರು ಮಿಶ್ರಿತವಾಗಿ ಕುಡಿಯಲು, ಕೃಷಿಗೆ ಯೋಗ್ಯವಲ್ಲದ ನೀರಾಗಿ ಪರಿವರ್ತನೆ ಆಗುತ್ತೆ. 600 ಕಿಂಡಿ ಅಣೆಕಟ್ಟು 420 ಫೈಬರ್ ಅಳವಡಿಕೆ ಅಣೆಕಟ್ಟುಗಳು ಅದ್ರೂ 240 ಕಿಂಡಿ ಅಣೆಕಟ್ಟು ಸಮುದ್ರ ಹತ್ತಿರವಿರುವ ಅಣೆಕಟ್ಟು ಸಾಂಪ್ರದಾಯಿಕ ಕ್ರಮದಲ್ಲಿ ಮರದ ಹಲಗೆ ಜೋಡಿಸಿ ನಿರ್ಮಾಣ ಮಾಡಲಾಗುತ್ತಿದೆ. ಯಾವುದೇ ಉಪ್ಪು ನೀರು ಮಿಶ್ರಣಗೊಂಡು ನೀರು ಬಳಕೆಗೆ ಇಲ್ಲದೆ, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ.

ಇದನ್ನೂ ಓದಿ: Bengaluru Air Quality: ಬೆಂಗಳೂರಿನ ಗಾಳಿಯ ಮಟ್ಟ ಕಳಪೆ, ಮಂಗಳೂರು, ಉಡುಪಿ ಅತ್ಯಂತ ಉತ್ತಮ

ಅಧುನಿಕ ಕಿಂಡಿ ಅಣೆಕಟ್ಟುಗಳಿಗೆ ಅಳವಡಿಸಬೇಕು. ಸಣ್ಣ ನೀರಾವರಿ ಇಲಾಖೆ ಹೊರತಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಣೆಕಟ್ಟು ನಿರ್ವಹಣೆ ಸಮಿತಿ ರಚನೆ ಮಾಡಬೇಕು. ಅಣೆಕಟ್ಟು ಯೋಗ್ಯ ನಿವರ್ಹಣೆ ಒಂದಿಷ್ಟು ಅನುದಾನವನ್ನು ಮೀಸಲು ಇಟ್ಟರೆ ಸರ್ಕಾರದ ಕುಡಿಯುವ ನೀರಿಗಾಗಿ ಒನ್ ಟು ಡಬ್ಬಲ್ ಖರ್ಚು ಮಾಡುವ ಪ್ರಮೇಯ ಕೂಡ ತಪ್ಪುತ್ತೆ. ಈ ಬಗ್ಗೆ ಸರ್ಕಾರ ಸಣ್ಣ ನೀರಾವರಿ ಇಲಾಖೆ ಗಮನ ಹರಿಸಿ ಸೂಕ್ತ ಕ್ರಮಕೈಗೊಂಡರೆ ನೀರಿನ ಸಮಸ್ಯೆಗೆ ಸುಲಭವಾಗಿ ಪರಿಹಾರ ಸಿಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *