ಇಸ್ರೇಲ್ ಪ್ರವಾಸದ ವೇಳೆ ಪ್ರಧಾನಿ ಮೋದಿ, ಅಲ್ಲಿನ ಜನಪ್ರಿಯ ‘ಫೌಡಾ’ ಸೀರೀಸ್ ನಟರನ್ನು ಭೇಟಿಯಾಗಿದ್ದಾರೆ. ಅವರೊಂದಿಗೆ ಸೆಲ್ಫಿ ತೆಗೆದು, ‘ಇಲ್ಲಿ ಯಾವುದೇ ಅಂಡರ್‌ಕವರ್ ಆಪರೇಷನ್ ಬೇಕಾಗಿಲ್ಲ’ ಎಂದು ತಮಾಷೆ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇಸ್ರೇಲ್ ಪ್ರವಾಸದ ವೇಳೆ, ಅಲ್ಲಿನ ಜನಪ್ರಿಯ ಸೀರೀಸ್ ‘ಫೌಡಾ’ದ ನಟರನ್ನು ಭೇಟಿಯಾಗಿದ್ದಾರೆ. ಅವರೊಂದಿಗೆ ತೆಗೆದ ಸೆಲ್ಫಿಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಭೇಟಿಗೆ ಯಾವುದೇ ಅಂಡರ್‌ಕವರ್ ಕೆಲಸ ಬೇಕಾಗಿಲ್ಲ, ಒಂದು ಸೆಲ್ಫಿ ಸಾಕು ಎಂದು ಮೋದಿ ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಇಸ್ರೇಲ್ ಸಂಸತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ಇತಿಹಾಸ! ಮೋದಿ ಅಪ್ಪುಗೆಗೆ ನೆತನ್ಯಾಹು ಫಿದಾ
Scroll to load tweet…
ಇದನ್ನೂ ಓದಿ: PM Modi Israel Visit: ಮತ್ತಷ್ಟು ಗಟ್ಟಿಯಾಗಲಿದೆ ಭಾರತ-ಇಸ್ರೇಲ್ ದೋಸ್ತಿ; ಮೋದಿ ಪ್ರವಾಸದ ಸಂಪೂರ್ಣ ಮಾಹಿತಿ
ಮೋದಿ ಅವರ ಈ ಪೋಸ್ಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅನೇಕರು ಈ ಕ್ಷಣವನ್ನು ರಾಜತಾಂತ್ರಿಕತೆ ಮತ್ತು ಜನಪ್ರಿಯ ಸಂಸ್ಕೃತಿಯ ಅದ್ಭುತ ಮಿಶ್ರಣ ಎಂದು ಬಣ್ಣಿಸಿದ್ದಾರೆ.
