Photos: ರಶ್ಮಿಕಾ ಮಂದಣ್ಣರನ್ನೇ ಯಾಕೆ ಮದುವೆಯಾದೆ? ವಿವಾಹವಾಗಿ ಕ್ಲಾರಿಟಿ ಕೊಟ್ಟ Vijay Deverakonda

Photos: ರಶ್ಮಿಕಾ ಮಂದಣ್ಣರನ್ನೇ ಯಾಕೆ ಮದುವೆಯಾದೆ? ವಿವಾಹವಾಗಿ ಕ್ಲಾರಿಟಿ ಕೊಟ್ಟ Vijay Deverakonda

Photos: ರಶ್ಮಿಕಾ ಮಂದಣ್ಣರನ್ನೇ ಯಾಕೆ ಮದುವೆಯಾದೆ? ವಿವಾಹವಾಗಿ ಕ್ಲಾರಿಟಿ ಕೊಟ್ಟ Vijay Deverakonda

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಅವರ ಏಳು ವರ್ಷಗಳ ಸ್ನೇಹ, ಪ್ರೀತಿ ಈಗ ದಾಂಪತ್ಯ ಜೀವನದ ತಿರುವು ಪಡೆದಿದೆ. ಇವರಿಬ್ಬರು ಫೆಬ್ರವರಿ 27ರಂದು ಮದುವೆ ಆಗಿದ್ದಾರೆ. ರಶ್ಮಿಕಾ ಮಂದಣ್ಣರನ್ನು ಯಾಕೆ ಮದುವೆ ಆದೆ ಎಂದು ವಿಜಯ್‌ ದೇವರಕೊಂಡ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಅಂದಹಾಗೆ ವಿಜಯ್‌ ದೇವರಕೊಂಡ ಅವರು ಯಾಕೆ ರಶ್ಮಿಕಾ ಮಂದಣ್ಣರನ್ನು ಪ್ರೀತಿ ಮಾಡಿದೆ? ಮದುವೆ ಆದೆ ಎಂಬ ಬಗ್ಗೆ ಕೂಡ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಒಂದು ದಿನ, ನನಗೆ ರಶ್ಮಿಕಾ ಮಂದಣ್ಣ ನೆನಪು ವಿಪರೀತವಾಗಿ ಕಾಡಿತು. ಅವಳು ನನ್ನ ಜೊತೆಯಲ್ಲೇ ಇದ್ದಿದ್ದರೆ ಈ ದಿನ ಇನ್ನೂ ಚೆನ್ನಾಗಿರುತ್ತಿತ್ತು ಎನ್ನುವಷ್ಟು ಅವಳ ನೆನಪಾಯಿತು.

ರಶ್ಮಿಕಾ ಮಂದಣ್ಣ ಎದುರು ಕುಳಿತಿದ್ದರೆ, ನಾನು ಊಟ ಮಾಡುವ ಊಟ ಇನ್ನಷ್ಟು ತೃಪ್ತಿ ನೀಡುತ್ತಿತ್ತು ಅನ್ನಿಸಿತು. ಅವಳು ನನ್ನ ಜೊತೆಗಿದ್ದರೆ, ಜಿಮ್‌ನಲ್ಲಿ ಕಸರತ್ತು ಮಾಡುವುದು ಶಿಕ್ಷೆಯಂತೆ ಅನ್ನಿಸದೆ ಇನ್ನೂ ಮಜವಾಗಿರುತ್ತಿತ್ತು ಎನಿಸಿತು.

ನಾನು ಎಲ್ಲೇ ಇರಲಿ, ನನ್ನಲ್ಲಿ ಒಂದು ಶಾಂತಿ ಮತ್ತು "ಮನೆ"ಯ ಭಾವನೆ ಮೂಡಲು ಅವಳು ಬೇಕೇ ಬೇಕು ಎಂದು ನನಗೆ ಅನ್ನಿಸಿತು. ಅದಕ್ಕಾಗಿಯೇ, ನನ್ನ ಅತ್ಯಂತ ಪ್ರಿಯ ಗೆಳತಿಯನ್ನೇ… ನನ್ನ ಹೆಂಡತಿಯನ್ನಾಗಿಸಿಕೊಂಡೆ.

ರಾಜ ಹಾಗೂ ರಾಣಿ ಕಾಸ್ಟ್ಯೂಮ್‌ನಲ್ಲಿ ಮದುವೆ ಆಗಿದ್ದಾರೆ. ಆರಂಭದಲ್ಲಿ ತೆಲುಗು ಸಂಪ್ರದಾಯದಂತೆ ಮದುವೆ ಆಗಿದೆ.

ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಪ್ರೀತಿಸಿ ಮದುವೆ ಆಗಿದ್ದಾರೆ.

ಗೀತ ಗೋವಿಂದಂ ಸಿನಿಮಾ ಮೂಲಕ ಇವರಿಬ್ಬರು ಪರಿಚಯ ಆದರು. ಅಲ್ಲಿಂದ ಸ್ನೇಹ, ಪ್ರೀತಿ ಶುರುವಾಯ್ತು

ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಅವರು ಉದಯಪುರದಲ್ಲಿ ಮದುವೆ ಆಗಿದ್ದಾರೆ.

ಬಹಳ ಪ್ರೈವೇಟ್‌ ಆಗಿ ಈ ಮದುವೆ ನಡೆದಿದೆ. ಕುಟುಂಬಸ್ಥರು, ಸ್ನೇಹಿತರು ಮಾತ್ರ ಈ ಮದುವೆಯಲ್ಲಿ ಭಾಗಿ ಆಗಿದ್ದರು.

ಮಾರ್ಚ್‌ 3 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯುವುದು.

Source link

Leave a Reply

Your email address will not be published. Required fields are marked *