Headlines

ಹಾಸನ: 9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ

ಹಾಸನ: 9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ


ಹಾಸನ, ಫೆಬ್ರವರಿ 26: ಜಿಲ್ಲೆಯ ಸಕಲೇಶಪುರದಲ್ಲಿರುವ ಕೆನರಾ ಬ್ಯಾಂಕ್ ವಿರುದ್ಧ ಹಳೆ ಗ್ರಾಹಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 15-20 ವರ್ಷಗಳಿಂದ ಬ್ಯಾಂಕಿನ ಗ್ರಾಹಕರು ಮತ್ತು ಬೆಳೆ ಸಾಲಗಳಂತಹ ವ್ಯವಹಾರ ಮಾಡುತ್ತಿರುವ ರೈತನಿಗೆ, ಬ್ಯಾಂಕ್‌ನಿಂದ 9 ರೂಪಾಯಿ 34 ಪೈಸೆ ಬಾಕಿ ಸಾಲ ಪಾವತಿಸುವಂತೆ ಬೆನ್ನುಬಿದ್ದಿದೆ. ಇದೀಗ ಹತ್ತು ರೂ ಲೋನ್ ಕಟ್ಟಿರುವ ಗ್ರಾಹಕ ಚೊಕ್ಕಣ್ಣ ಗೌಡ 66 ಪೈಸೆ ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ನಿನ್ನೆ ಏಕಾಏಕಿ ಕರೆ ಮಾಡಿ 9 ರೂ 34 ಪೈಸೆ ಸಾಲ ಕ್ಲಿಯರ್ ಮಾಡಲು ಬ್ಯಾಂಕ್ ಸಿಬ್ಬಂದಿ ಸೂಚಿಸಿದ್ದಾರೆ. ಈ ಬೆನ್ನಲ್ಲೇ ಚೊಕ್ಕಣ್ಣ ಗೌಡ 10 ರೂ ಹಣ ಕೊಟ್ಟು ಸಾಲ ಕ್ಲಿಯರ್ ಮಾಡಿದ್ದಾರೆ. ರಸಿದಿಯಲ್ಲಿ 9 ರೂ 34 ಪೈಸೆ ಭಾಗ 66 ಪೈಸೆ ವಾಪಸ್ ಕೊಟ್ಟಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸಾವಿರಾರು ಕೋಟಿ ಸಾಲ ಮಾಡಿ ಬಿಟ್ಟವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಸಾಲ ಮಾಡಿ ವಾಪಸ್ ಕಟ್ಟುವ ಬಡವರಿಗೆ ತೊಂದರೆ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *