
ದುರ್ಗಾ ಸಪ್ತಶತಿಯನ್ನು ಶ್ರವಣ ಮಾಡಿ. ಕೌಟುಂಬಿಕ ಸಮಸ್ಯೆಗಳು ಕಾಡುತ್ತಿದ್ದವು ಅದರಿಂದ ಹೊರಬರುವಂಥ ಮಾರ್ಗೋಪಾಯ ಗೋಚರವಾಗಲಿವೆ. ಇನ್ನು ವ್ಯವಹಾರದಲ್ಲಿ ಹಿನ್ನಡೆ ಕಾಣುತ್ತಿದೆ ಲಾಭದಾಯಕ ಆಗುವಂಥ ಮಾರ್ಗದರ್ಶನ, ಸಲಹೆ ದೊರೆಯುತ್ತವೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಬಹಳ ದಿನಗಳ ನಂತರ ನಿಮ್ಮ ಮನಸ್ಸಿಗೆ ಹತ್ತಿರ ಆದವರನ್ನು ಭೇಟಿ ಆಗುವ ಯೋಗ ಈ ದಿನ ಇದೆ. ಪ್ರೇಮಿಗಳಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ. ಡಯಟ್ ಅಂದರೆ ಆಹಾರ ಪಥ್ಯದ ವಿಚಾರಕ್ಕೆ ಆದ್ಯತೆಯನ್ನು ನೀಡಿದ್ದೇನೆ. ಈ ವಿಚಾರಕ್ಕೆ ಆಹಾರಕ್ಕಾಗಿಯೇ ಭೇಟಿ ಆಗಿ, ಅವರಿಂದ ಸಲಹೆ ಪಡೆಯುವ ಬಗ್ಗೆ ಕೂಡ ಚಿಂತನೆ ನಡೆಸಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಪರೀಕ್ಷೆಗಳು, ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳುವುದು. ಸರ್ಕಾರದ ಪ್ರಾಜೆಕ್ಟ್ ವೊಂದರ ಭಾಗವಾಗಿ ಅಥವಾ ಮುನ್ನಡೆಸುವಂತೆ ಕೇಳಿಕೊಳ್ಳಬಹುದು. ಚಾಲನೆಯನ್ನು ವೃತ್ತಿಯಾಗಿ ಮಾಡುತ್ತಾ ಇರುವವರು ವಾಹನ ಚಾಲನೆ ಮಾಡುವಾಗ ಸಾಮಾನ್ಯವಾಗಿ ತೆಗೆದುಕೊಳ್ಳುವ ಎಚ್ಚರಿಕೆಗಿಂತ ಹೆಚ್ಚಿನ ಜಾಗ್ರತೆಯನ್ನು ವಹಿಸಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ನಿಮ್ಮ ಬೆನ್ನು ಬಿದ್ದ ವ್ಯಕ್ತಿಯೊಬ್ಬರು ಇಡೀ ದಿನ ಮಾನಸಿಕವಾಗಿ ಕಿರಿಕಿರಿ ಮಾಡಲಿದ್ದಾರೆ. ಮೊದಲ ವಯಸ್ಸಿನಲ್ಲಿ ಹಿರಿಯರು ಅಂತಲೋ ಅಥವಾ ಸಮಸ್ಯೆ ಇರುವವರು ಎಂಬ ಅನುಕಂಪ ತೋರಿಸಿ, ಸಹಾಯದ ಭರವಸೆ ನೀಡುವ ಮಾತುಗಳನ್ನು ಆಡುವುದೇ ಸಮಸ್ಯೆಯಾಗಿ ನಿಮ್ಮನ್ನು ಕಾಡಲಿದೆ. ನಿಮ್ಮಲ್ಲಿ ಈ ದಿನ ಬೆಳ್ಳಿಯಿಂದ ತಯಾರಿಸಿದ ಒಡವೆ, ತಟ್ಟೆ- ಲೋಟಗಳನ್ನು ಖರೀದಿಸುವ ಈ ಯೋಗ ದಿನವಿದೆ.
ಲೇಖನ- ಸ್ವಾತಿ ಎನ್.ಕೆ.