
ರೈಲ್ವೇ ಯೋಜನೆಗಳಿಗೆ ಕೇಂದ್ರ ಸರ್ಕಾರ ₹58,000 ಕೋಟಿ ನೀಡಿದ್ದು, ಬೆಂಗಳೂರು- ತುಮಕೂರು- ಚಿತ್ರದುರ್ಗ-ದಾವಣಗೆರೆ, ದಾವಣಗೆರೆ- ರಾಯದುರ್ಗ, ರಾಯದುರ್ಗ- ತುಮಕೂರು, ತಾಳಗುಪ್ಪ ರೈಲ್ವೆ ಮಾರ್ಗಗಗಳ ಅಭಿವೃದ್ದಿಗೆ ₹7800 ಕೋಟಿ ನೀಡಿರುವುದಾಗಿ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು
ದಾವಣಗೆರೆ : ರೈಲ್ವೇ ಯೋಜನೆಗಳಿಗೆ ಕೇಂದ್ರ ಸರ್ಕಾರ ₹58,000 ಕೋಟಿ ನೀಡಿದ್ದು, ಬೆಂಗಳೂರು- ತುಮಕೂರು- ಚಿತ್ರದುರ್ಗ-ದಾವಣಗೆರೆ, ದಾವಣಗೆರೆ- ರಾಯದುರ್ಗ, ರಾಯದುರ್ಗ- ತುಮಕೂರು, ತಾಳಗುಪ್ಪ ರೈಲ್ವೆ ಮಾರ್ಗಗಗಳ ಅಭಿವೃದ್ದಿಗೆ ₹7800 ಕೋಟಿ ನೀಡಿರುವುದಾಗಿ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ದಾವಣಗೆರೆ-ತೋಣಹುಣಸೆ-ಆನಗೋಡು ರೈಲ್ವೇ ಮಾರ್ಗ ಪರಿಶೀಲಿಸಿದ ವಿ.ಸೋಮಣ್ಣ
ತಾಲೂಕಿನ ತೋಳಹುಣಸೆ, ಅನಗೋಡು ಗ್ರಾಮಗಳಲ್ಲಿ ಗುರುವಾರ ದಾವಣಗೆರೆ-ತೋಣಹುಣಸೆ-ಆನಗೋಡು ರೈಲ್ವೇ ಮಾರ್ಗ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ರೈಲ್ವೆ ಮಾರ್ಗ, ಬೆಂಗಳೂರು- ತುಮಕೂರು ಮಾರ್ಗ, ರಾಯದುರ್ಗ- ತುಮಕೂರು ಮಾರ್ಗ, ತಾಳಗುಪ್ಪ ರೈಲ್ವೆ ಮಾರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ತುಮಕೂರು- ಚಿತ್ರದುರ್ಗ- ದಾವಣಗೆರೆ ರೈಲ್ವೇ ಮಾರ್ಗದಲ್ಲಿ 2 ಸಾವಿರ ಎಕರೆಗೂ ಅಧಿಕ ಜಾಗದಲ್ಲಿ 246 ಎಕರೆ ಹೊರತುಪಡಿಸಿದರೆ, ಉಳಿದಿದ್ದು ಸಮಸ್ಯೆ ಇಲ್ಲ ಎಂದರು.
2-3 ತಿಂಗಳಲ್ಲೇ ಎಲ್ಲಾ ಪ್ರಕ್ರಿಯೆ ಮುಗಿಸುತ್ತೇವೆ
211 ಎಕರೆ ಒಂದೇ ಕಡೆ ಇದ್ದು, 11 ಎಕರೆ ಚಿತ್ರದುರ್ಗದಲ್ಲಿ, ಉಳಿದ ಜಾಗ ಬೇರೆ ಬೇರೆ ಕಡೆ ಇದೆ. ಇನ್ನು 2-3 ತಿಂಗಳಲ್ಲೇ ಎಲ್ಲಾ ಪ್ರಕ್ರಿಯೆ ಮುಗಿಸುತ್ತೇವೆ ಎಂದು ಅವರು ಹೇಳಿದರು.
ಕಳೆದ 3 ದಿನದ ರಾಜ್ಯದ ಹಳೆ ರೈಲ್ವೇ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇನೆ. ದಾವಣಗೆರೆ-ಚಿತ್ರದುರ್ಗ-ತುಮಕೂರು ಒಂದೇ ನಾಣ್ಯದ ಮುಖಗಳಾಗಿದ್ದು, ಎಲ್ಲವೂ ಅಭಿವೃದ್ಧಿಯಾಗಬೇಕು.
ನೇರ ಮಾರ್ಗದಿಂದ ಜನರ ಅಮೂಲ್ಯವಾದ ಎರಡೂ ಗಂಟೆ ಉಳಿತಾಯವಾಗುತ್ತದೆ. ಬೆಂಗಳೂರು-ದಾವಣರೆ ಮಧ್ಯೆ ಅಂತರ ಕಡಿಮೆಯಾಗುತ್ತದೆ. ಉತ್ತರ ಕರ್ನಾಟಕ-ಬೆಂಗಳೂರು ಮಧ್ಯೆ ಇರುವ ಅಂತರ ಸಹ ಕಡಿಮೆಯಾದಂತಾಗುತ್ತದೆ. ದಾವಣಗೆರೆಯಿಂದ ಪರಿಶೀಲನೆ ನಡೆಸಿದ್ದೇವೆ. ಚಿತ್ರದುರ್ಗ, ಶಿರಾದಲ್ಲಿ ಇವತ್ತೇ ಸಭೆ ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದರು.