ವಿಜಯ್-ರಶ್ಮಿಕಾ ಮದುವೆ ಉಡುಗೆ ವಿನ್ಯಾಸ ಮಾಡಿದ್ಯಾರು? ಉಡುಗೆಯ ಬೆಲೆ ಎಷ್ಟು?

ವಿಜಯ್-ರಶ್ಮಿಕಾ ಮದುವೆ ಉಡುಗೆ ವಿನ್ಯಾಸ ಮಾಡಿದ್ಯಾರು? ಉಡುಗೆಯ ಬೆಲೆ ಎಷ್ಟು?


ವಿಜಯ್ ದೇವರಕೊಂಡ (ವಿಜಯ್ ದೇವರಕೊಂಡ) ಮತ್ತು ರಶ್ಮಿಕಾ ಮಂದಣ್ಣ ಮದುವೆ ಅದ್ಧೂರಿಯಾಗಿ ನಡೆದಿದೆ. ಇಬ್ಬರ ಮದುವೆಯ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಸಮಯದಲ್ಲಿ ಇಬ್ಬರೂ ಧರಿಸಿದ್ದ ಉಡುಗೆಗಳ ಬಗ್ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಬ್ಬರ ಉಡುಗೆಗೆ ಡಿವೈನ್ ಲುಕ್ (ದೈವೀಕಳೆ) ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಂದಹಾಗೆ ಈ ಇಬ್ಬರ ಮದುವೆಯ ಉಡುಗೆಗಳನ್ನು ವಿನ್ಯಾಸ ಮಾಡಿರುವ ವಿನ್ಯಾಸಕಿ ಒಬ್ಬರೇ ಅದುವೇ ಡಿಸೈನರ್‌ಗಳ ಡಿಸೈನರ್ ಎನಿಸಿಕೊಂಡಿರುವ ಅನಾಮಿಕಾ ಖನ್ನಾ.

ಅನಾಮಿಕಾ ಖನ್ನಾ, ಭಾರತದ ಹಾಲಿವುಡ್ನ ಸ್ಟಾರ್ ನಟ-ನಟಿಯರು ಮತ್ತು ಪಾಪ್ ತಾರೆಗಳೊಟ್ಟಿಗೆ ಕೆಲಸ ಮಾಡುತ್ತಾರೆ. ಅವರು ವಿನ್ಯಾಸಗೊಳಿಸಿದ ಉಡುಗೆಯನ್ನು ಶಕಿರಾ, ಜೆನಿಫರ್ ಲೋಪೆಜ್, ಓಪ್ರಾ ವಿನ್ಫ್ರೆ, ಕೆಲ್ಲಿ ರೋಲ್ಯಾಂಡ್, ಬಿಯಾನ್ಸೆ, ಕರ್ದಾಶಿಯನ್ಸ್ ಇನ್ನೂ ಕೆಲವು ಉಟ್ಟಿದ್ದಾರೆ. ಅಂಬಾನಿ ಮದುವೆಗೆ ಬಂದ ವಿದೇಶಿ ಸೆಲೆಬ್ರಿಟಿಗಳು ಅನಾಮಿಕಾ ವಿನ್ಯಾಸ ಮಾಡಿದ ಉಡುಗೆಯನ್ನೇ ತೊಟ್ಟಿದ್ದರು. ಇದೆ, ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್, ಹಳದಿ ಶಾಸ್ತ್ರದ ಉಡುಗೆಯನ್ನು ವಿನ್ಯಾಸ ಮಾಡಿದ್ದು ಸಹ ಅನಾಮಿಕಾ ಅವರೇ. ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮೆಟ್ ಗಾಲಾದ ರೆಡ್ ಕಾರ್ಪೆಟ್ ಮೇಲೆ ಅನಾಮಿಕಾ ವಿನ್ಯಾಸ ಮಾಡಿದ ಉಡುಗೆ ತೊಟ್ಟೆ ನಡೆದಿದ್ದರು.

ಅನಾಮಿಕಾ ಖನ್ನಾ, ಭಾರತದ ಖ್ಯಾತ ವಸ್ತ್ರ ವಿನ್ಯಾಸಕಿಯರಲ್ಲಿ ಒಬ್ಬರು. ಪಶ್ಚಿಮ ಬಂಗಾಳ ಮೂಲಕ ಅನಾಮಿಕ ಮೂಲತಃ ಭರತನಾಟ್ಯ ಕಲಾವಿದೆ ಜೊತೆಗೆ ಚಿತ್ರಕಲಾ ನಿಪುಣೆ ಸಹ. ಅವರು ಫ್ಯಾಷನ್ ಡಿಸೈನ್ ಅನ್ನು ಶಾಸ್ತ್ರೀಯವಾಗಿ ಕಲಿತವರಲ್ಲ. ಆದರೆ ಅವರು ಆಸಕ್ತಿಯಿಂದ ವಸ್ತ್ರವಿನ್ಯಾಸದ ಕಡೆಗೆ ಬಂದವರು. ವಿನ್ಯಾಸಗಳನ್ನು ಅಭ್ಯಾಸ ಮಾಡುತ್ತಾ, ಸ್ವಂತ ಕಲಿಕೆಯ ಮೂಲಕ ಫ್ಯಾಷನ್ ಡಿಸೈನರ್ ಆದವರು ಅನಾಮಿಕಾ ಖನ್ನಾ.

ಇದನ್ನೂ ಓದಿ:ಫೋಟೋ ಗ್ಯಾಲರಿ: ಮದುವೆ ಫೋಟೋ ಜೊತೆ ರಶ್ಮಿಕಾ ಮಂದಣ್ಣ ಎಮೋಷನಲ್ ಮಾತು

1990 ರಲ್ಲಿ ತಮ್ಮ ಜನಪ್ರಿಯ ಫ್ಯಾಷನ್ ಬ್ರ್ಯಾಂಡ್ ಪ್ರಾರಂಭವಾದ ಅನಾಮಿಕಾ ಬ್ರಾಂಡ್ ಖನ್ನಾ, ಫ್ಯಾಷನ್ ವೀಕ್ ನಲ್ಲಿ ಕಲೆಕ್ಷನ್ ನಲ್ಲಿ ಇರಿಸಿದ್ದು ಭಾರತದ ಮೊದಲ ಮಹಿಳಾ ಡಿಸೈನರ್ ಎನಿಸಿಕೊಂಡಿದೆ. ಪ್ರಸ್ತುತ ಬ್ಯೂಸಿನೆಸ್ ಆಫ್ ಫ್ಯಾಷನ್ (ಬಿಒಎಫ್) 500 ನಲ್ಲಿ ಸಹ ಅನಾಮಿಕಾ ಖನ್ನಾ ಕಾಣಿಸಿಕೊಂಡಿದ್ದಾರೆ. ಇವರ ವಿನ್ಯಾಸಗಳು ಅಪರೂಪದ್ದಾಗಿದ್ದು, ಭಾರತೀಯ ವಿನ್ಯಾಸಗಳನ್ನು ವಿದೇಶಿ ಉಡುಗೆ ಮಾದರಿಗಳ ಜೊತೆಗೆ ಬ್ಲೆಂಡ್ ಮಾಡಿ ಪ್ರೆಸೆಂಟ್ ಮಾಡುವ ಅಪರೂಪದ ಸ್ಟೈಲ್ ಅನ್ನು ಹೊಂದಿದೆ. ಇದೇ ಕಾರಣಕ್ಕೆ ಅವರ ವಿನ್ಯಾಸಗಳು ಬಹಳ ಜನಪ್ರಿಯವಾಗಿವೆ.

‘ವಾರಣಾಸಿ’ ಈವೆಂಟ್‌ನಲ್ಲಿ ಪ್ರಿಯಾಂಕಾ ಧರಿಸಿದ್ದ ಉಡುಗೆಯನ್ನು ಅನಾಮಿಕಾ ಅವರೇ ವಿನ್ಯಾಸ ಮಾಡಿದ್ದರು. ದೀಪಿಕಾ ಪಡುಕೋಣೆ, ಸೋನಂ ಕಪೂರ್, ಆಲಿಯಾ ಭಟ್, ಜಾನ್ಹವಿ ಕಪೂರ್ ಇನ್ನೂ ಹಲವು ಬಾಲಿವುಡ್ ಸೆಲೆಬ್ರಿಟಿಗಳ ಮೆಚ್ಚಿನ ವಿನ್ಯಾಸಕಿ ಅನಾಮಿಕಾ ಖನ್ನಾ. ಖ್ಯಾತ ವಿದೇಶಿ ಫ್ಯಾಷನ್ ಬ್ರ್ಯಾಂಡ್ ಆಗಿರುವ ಎಚ್ ಆಂಡ್ ಎಂ (ಎಚ್ ಎನ್ ಎಂ) ಮತ್ತು ಸ್ಯಾಕ್ಸ್ ಫಿಫ್ತ್ ಅವೆನ್ಯೂ ಜೊತೆಗೆ ಅವರು ಪಾರ್ಟನ್ ಆಗಿದ್ದು, ತಮ್ಮ ವಿನ್ಯಾಸಗಳನ್ನು ಅವರೊಟ್ಟಿಗೆ ಹಂಚಿಕೊಳ್ಳುತ್ತಾರೆ.

ಅನಾಮಿಕಾ ಖನ್ನಾ ಭಾರತದ ದುಬಾರಿ ವಿನ್ಯಾಸಕಿ. ಅವರ ಸಾಮಾನ್ಯ ವಿನ್ಯಾಸಗಳು ಸಹ 1 ಲಕ್ಷದಿಂದ 3 ಲಕ್ಷದವರೆಗೆ ಮಾರಾಟ ಆಗುತ್ತವೆ. ಇನ್ನು ಅವರ ವಿಶೇಷ ವಿನ್ಯಾಸದ ಉಡುಗೆಗಳಿಗೆ 50 ಲಕ್ಷದವರೆಗೆ ಬೆಲೆ ಇದೆ. ಕೋಟಿ ಬೆಲೆಯ ಉಡುಗೆಗಳು ಸಹ ಅವರ ಕಲೆಕ್ಷನ್‌ನಲ್ಲಿವೆ ಎನ್ನದಿದ್ದರೆ. ಅನಾಮಿಕಾ ಅವರದ್ದು ಏಕ-ಒಕೆ ಹೆಸರಿನ ಬ್ರ್ಯಾಂಡ್ ಇದೆ. ಕೊಲ್ಕತ್ತ, ಹೈದರಾಬಾದ್, ಮುಂಬೈ, ದೆಹಲಿಗಳಲ್ಲಿ ಅನಾಮಿಕಾ ನಟ. ಈಗ ವಿಜಯ್ ಮತ್ತು ರಶ್ಮಿಕಾ ಉಡುಗೆಯ ಬೆಲೆ ಇಲ್ಲದಿದ್ದರೂ ಆಭರಣಗಳು, ಕೇವಲ ಉಡುಗೆಗೆ 50 ಲಕ್ಷ ರೂಪಾಯಿಗಳು ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *