Headlines

World NGO Day 2026: ವಿಶ್ವ ಎನ್‌ಜಿಒ ದಿನವನ್ನು ಆಚರಿಸುವುದೇಕೆ ಗೊತ್ತಾ? ಇದರ ಹಿನ್ನೆಲೆಯನ್ನು ತಿಳಿಯಿರಿ

World NGO Day 2026: ವಿಶ್ವ ಎನ್‌ಜಿಒ ದಿನವನ್ನು ಆಚರಿಸುವುದೇಕೆ ಗೊತ್ತಾ? ಇದರ ಹಿನ್ನೆಲೆಯನ್ನು ತಿಳಿಯಿರಿ


ಎನ್ಜಿಒ (NGO) ಅಂದರೆ ಸರ್ಕಾರೇತರ ಸಂಸ್ಥೆಗಳು. ಇವು ಸಾಮಾಜಿಕ, ಮಾನವೀಯ, ಶೈಕ್ಷಣಿಕ ಪರಿಸರ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಸ್ವಯಂಪ್ರೇರಿತವಾಗಿ ಕಾರ್ಯನಿರ್ವಹಿಸುವ ಲಾಭರಹಿತ ನಾಗರಿಕ ಸಂಸ್ಥೆ. ದೊಡ್ಡ ಪ್ರಮಾಣದಲ್ಲಿ ಅಥವಾ ಸ್ಥಳೀಯ ಮಟ್ಟದಲ್ಲಿ ಎನ್‌ಜಿಒಗಳು ಸಮಾಜಗಳನ್ನು ಅಭಿವೃದ್ಧಿಪಡಿಸುವಲ್ಲಿ, ಸಮುದಾಯಗಳನ್ನು ಸುಧಾರಿಸುವಲ್ಲಿ ಮತ್ತು ನಾಗರಿಕ ಭಾಗವಹಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜೊತೆಗೆ ಇವು ಸರ್ಕಾರ ಮತ್ತು ಸಮಾಜದ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಪ್ರಪಂಚದಾದ್ಯಂತ ಇರುವ ಈ ಸರ್ಕಾರೇತರ ಸಂಸ್ಥೆಗಳ ಸಾಮಾಜಿಕ ಕಾರ್ಯಗಳನ್ನು ಗುರುತಿಸಲು, ಬೆಂಬಲಿಸಲು, ಗೌರವಿಸಲು ಪ್ರತಿವರ್ಷ ಫೆಬ್ರವರಿ 27 ರಂದು ವಿಶ್ವ ಎನ್ಜಿಒ ದಿನವನ್ನು ಆಚರಿಸುವುದಿಲ್ಲ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ವಿಶ್ವ ಎನ್‌ಜಿಯೊ ದಿನದ ಇತಿಹಾಸವೇನು?

ವಿಶ್ವ ಎನ್ಜಿಯೋ ದಿನವನ್ನು ಪ್ರತಿ ವರ್ಷ ಫೆಬ್ರವರಿ 27 ರಂದು ಆಚರಿಸಲಾಗುತ್ತದೆ. 2010 ರಲ್ಲಿ ಬಾಲ್ಟಿಕ್ ಪೂರ್ವ ರಾಜ್ಯಗಳಲ್ಲಿ ಬಾಲ್ಟಿಕ್ ಸೀ NGO ಫೋರಮ್ನ ಪ್ರತಿನಿಧಿಯಿಂದ NGO ದಿನವನ್ನು ಘೋಷಿಸಲಾಯಿತು. ನಂತರದಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಫೆಬ್ರವರಿ ಮೊದಲ ವಾರವನ್ನು ವಿಶ್ವ ಜಿಯೋ ವೀಕ್ ಎನ್ ಎಂದು ಘೋಷಿಸಲಾಯಿತು. ಫೆಬ್ರವರಿ 27, 2014 ರಂದು ಮೊದಲ ಬಾರಿಗೆ ವಿಶ್ವ ಜಿಯೋ ದಿನವನ್ನು ಆಚರಿಸಲು ಎನ್. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರುತ್ತಿದೆ. ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ, ಮಾನವ ಹಕ್ಕುಗಳಿಗಾಗಿ ಪ್ರತಿಪಾದಿಸುವಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಎನ್ಜಿಒಗಳು ವಹಿಸುವ ಪ್ರಮುಖ ಪಾತ್ರವನ್ನು ಗುರುತಿಸಿ ಗೌರವಿಸುವುದೇ ಈ ದಿನದ ಮುಖ್ಯ ಉದ್ದೇಶ.

ಇದನ್ನೂ ಓದಿ: ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ-ಪ್ರತಿ ದಿನಾಚರಣೆಗಳಿವು

ವಿಶ್ವ ಎನ್‌ಜಿಯೊ ದಿನದ ಮಹತ್ವವೇನು?

  • ಸಾಮಾಜಿಕ, ಪರಿಸರ ಮತ್ತು ಮಾನವೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರೇತರ ಸಂಸ್ಥೆಗಳು ವಹಿಸುವ ಪ್ರಮುಖ ಪಾತ್ರವನ್ನು ಗುರುತಿಸಲು ಮತ್ತು ಆಚರಿಸಲು ವಿಶ್ವ ಸರ್ಕಾರೇತರ ಸಂಸ್ಥೆಗಳ ದಿನವನ್ನು ಆಚರಿಸುವುದಿಲ್ಲ.
  • ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ, ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ, ಕೈಲಾಗದವರಿಗೆ ಸಹಾಯ ಮಾಡುವಲ್ಲಿ ಮತ್ತು ಪ್ರಪಂಚದಾದ್ಯಂತ ಸಕಾರಾತ್ಮಕ ಬದಲಾವಣೆಯನ್ನು ತರುವಲ್ಲಿ NGOಗಳು ವಹಿಸುವ ನಿರ್ಣಾಯಕ ಪಾತ್ರವನ್ನು ಈ ದಿನ ಸ್ಮರಿಸುತ್ತವೆ.
  • ಈ ವಿಶೇಷ ದಿನದ ಆಚರಣೆಯ ಉದ್ದೇಶವು ಜನರು ಎನ್‌ಜಿಒಗಳಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದು ಮತ್ತು ಎನ್‌ಜಿಒಗಳು ಮತ್ತು ಖಾಸಗಿ-ಸಾರ್ವಜನಿಕ ವಲಯಗಳ ನಡುವೆ ಹೆಚ್ಚಿನ ಸಹಜೀವನವನ್ನು ಪ್ರೋತ್ಸಾಹಿಸುವುದು.
  • ಒಟ್ಟಾರೆಯಾಗಿ ಸಾಮಾಜಿಕ ಸಮಸ್ಯೆಗಳನ್ನು ತಡೆಗಟ್ಟಲು ಮುಂದೆ ಬಂದು ಪ್ರಯತ್ನಿಸಿದ ಪ್ರತಿಯೊಬ್ಬ ಎನ್ಜಿಯೊವನ್ನು ಗೌರವಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 9:45 am, ಶುಕ್ರ, 27 ಫೆಬ್ರವರಿ 26



Source link

Leave a Reply

Your email address will not be published. Required fields are marked *