Headlines

ಅಮುಕು ಡುಮುಕು ನಿಜಕ್ಕೂ ಪೆಟ್ರೋಲ್ ಕುಡಿದರಾ? ಸಿನಿಮಾ ಪ್ರಚಾರಕ್ಕೆ ಚೀಪ್ ಗಿಮಿಕ್

ಅಮುಕು ಡುಮುಕು ನಿಜಕ್ಕೂ ಪೆಟ್ರೋಲ್ ಕುಡಿದರಾ? ಸಿನಿಮಾ ಪ್ರಚಾರಕ್ಕೆ ಚೀಪ್ ಗಿಮಿಕ್


ಅಮುಕು ಡುಮುಕು ಎಂಬ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಿರಬಾರದು. ಸೋಶಿಯಲ್ ಮೀಡಿಯಾದಲ್ಲಿ ಈ ಸಾಕಷ್ಟು ಜನಪ್ರಿಯತೆಯನ್ನು ಪಡೆದರು. ಜೀ ಕನ್ನಡದ ರಿಯಾಲಿಟಿ ಶೋಗೆ ಅತಿಥಿಯಾಗೂ ತೆರಳಿದ್ದರು. ಈಗ ಆ ವ್ಯಕ್ತಿ ಮಾಡಿಕೊಂಡ ಒಂದು ಎಡವಟ್ಟು ಚರ್ಚೆಗೆ ಕಾರಣ ಆಗಿದೆ. ಸಿನಿಮಾ ಪ್ರಚಾರಕ್ಕಾಗಿ ಅವರು ಪೆಟ್ರೋಲ್ ಕುಡಿದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂಬ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದ ಅಸಲಿಯತ್ತು ಹೊರ ಬಂದಿದೆ.

ಅಮುಕು ಡುಮುಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದ ಈ ವ್ಯಕ್ತಿಯ ಹೆಸರು ಮಂಜು. ಸೋಶಿಯಲ್ ಮೀಡಿಯಾದಲ್ಲಿ ವಿವಿಧ ವಿಡಿಯೋಗಳನ್ನು ಹಾಕಿಕೊಂಡು ವೈರಲ್ ಆಗುತ್ತಾ ಇರುತ್ತಾರೆ. ಈಗ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ಸೂರಿ ಅಣ್ಣ ಸಿನಿಮಾ ಗೆಲ್ಲಬೇಕು ಎಂದು ಪೆಟ್ರೋಲ್ ಕುಡಿದರು. ಆ ಬಳಿಕ ಅವರು ಒಡ್ಡಾಡಿದರು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ವಿಡಿಯೋ ಸಾಕಷ್ಟು ಹರಿದಾಡಿತು. ಮಂಜುಗೆ ಪೂರ್ತಿಯಾಗಿ ಹುಚ್ಚು ಹಿಡಿದಿದೆ ಎಂದು ಹೇಳಲಾಯಿತು. ಸೋಶಿಯಲ್ ಮೀಡಿಯಾ ಜನಪ್ರಿಯತೆ ಹಾಗೂ ಸಿನಿಮಾ ಜನಪ್ರಿಯತೆಗೆ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು ಎಂದೆಲ್ಲ ಮಾತನಾಡಿಕೊಳ್ಳಲಾಯಿತು. ಈ ವಿಷಯಕ್ಕೆ ಮಂಜು ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಅಸಲಿಗೆ ಅದು ಪೆಟ್ರೋಲ್ ಆಗಿಯೇ ಇರಲಿಲ್ಲವಂತೆ.

‘ಅಣ್ಣ ನಿಂಗೆ ಯಾರು ಏನೇ ಅನ್ನಲ್ಲಿ, ನಿಮ್ಮ ಸಿನಿಮಾ ಗೆಲ್ಲಬೇಕು. ಸಲಗ ಸೂರಿ ಅಣ್ಣನ ಸಿನಿಮಾ ಗೆಲ್ಲಬೇಕು’ ಎನ್ನುತ್ತಾ ಪೆಟ್ರೋಲ್ ಕುಡಿದರು. ಸೂರಿ ಅಣ್ಣನನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದೃಶ್ಯ ಇತ್ತು.

ಇದನ್ನೂ ಓದಿ: ಮದುವೆಯಲ್ಲಿ ರಶ್ಮಿಕಾ ಮಂದಣ್ಣ ಬಯಸಿದ ವಿಜಯ್ ದೇವರಕೊಂಡ

ಇದಕ್ಕೂ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಬಿಂದು ಜೀರಾಗೆ ಜೇನು ತುಪ್ಪ ಬೆರೆಸಿದ್ದರು ಮಂಜು. ಆಗ ಪೆಟ್ರೋಲ್ ಕಲರ್ ಗೆ ಅದು ತಿರುಗಿತ್ತು. ಈ ರೀತಿಯಲ್ಲಿ ಮಾಡಿ ಅವರು ಪೆಟ್ರೋಲ್ ಕುಡಿದಿದ್ದರು. ಇದು ಸಿನಿಮಾ ಪ್ರಚಾರ ಅಲ್ಲ ಎಂದಿದ್ದರು.

ಮತ್ತಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *