ಟಿ20 ವಿಶ್ವಕಪ್: ಇಂದು ಇಂಗ್ಲೆಂಡ್‌ ವಿರುದ್ಧ ಗೆದ್ದರೆ ಕಿವೀಸ್‌ ಸೆಮಿಗೆ, ಪಾಕ್‌ ಮನೆಗೆ! | T20 World Cup Super 8 England Vs New Zealand Clash To Decide Pakistan Semifinal Fate Kvn

ಟಿ20 ವಿಶ್ವಕಪ್: ಇಂದು ಇಂಗ್ಲೆಂಡ್‌ ವಿರುದ್ಧ ಗೆದ್ದರೆ ಕಿವೀಸ್‌ ಸೆಮಿಗೆ, ಪಾಕ್‌ ಮನೆಗೆ! | T20 World Cup Super 8 England Vs New Zealand Clash To Decide Pakistan Semifinal Fate Kvn



ಟಿ20 ವಿಶ್ವಕಪ್: ಇಂದು ಇಂಗ್ಲೆಂಡ್‌ ವಿರುದ್ಧ ಗೆದ್ದರೆ ಕಿವೀಸ್‌ ಸೆಮಿಗೆ, ಪಾಕ್‌ ಮನೆಗೆ! | T20 World Cup Super 8 England Vs New Zealand Clash To Decide Pakistan Semifinal Fate Kvn

ಟಿ20 ವಿಶ್ವಕಪ್‌ನ ಸೂಪರ್‌-8 ಹಂತದ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ಮುಖಾಮುಖಿಯಾಗಲಿವೆ. ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿರುವ ಇಂಗ್ಲೆಂಡ್ ವಿರುದ್ಧದ ಈ ಪಂದ್ಯದ ಫಲಿತಾಂಶವು, ನ್ಯೂಜಿಲೆಂಡ್‌ ಹಾಗೂ ಪಾಕಿಸ್ತಾನದ ಸೆಮಿಫೈನಲ್‌ ಭವಿಷ್ಯವನ್ನು ನಿರ್ಧರಿಸಲಿದೆ.  

ಕೊಲಂಬೊ: ಈ ಬಾರಿ ಟಿ20 ವಿಶ್ವಕಪ್‌ನ ಸೂಪರ್‌-8 ಹಂತದ ಮಹತ್ವದ ಪಂದ್ಯದಲ್ಲಿ ಶುಕ್ರವಾರ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ಮುಖಾಮುಖಿಯಾಗಲಿವೆ. ಈ ಪಂದ್ಯ ನ್ಯೂಜಿಲೆಂಡ್‌ ಹಾಗೂ ಪಾಕಿಸ್ತಾನದ ಸೆಮಿಫೈನಲ್‌ ಭವಿಷ್ಯವನ್ನು ನಿರ್ಧರಿಸಲಿದೆ.

ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ಧ ಗೆದ್ದಿರುವ ಇಂಗ್ಲೆಂಡ್‌ ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿದೆ. ಪಾಕ್‌ ವಿರುದ್ಧ ಪಂದ್ಯ ರದ್ದುಗೊಂಡು, ಶ್ರೀಲಂಕಾ ವಿರುದ್ಧ ಗೆದ್ದಿರುವ ನ್ಯೂಜಿಲೆಂಡ್‌ 3 ಅಂಕ ಸಂಪಾದಿಸಿದೆ. ಇಂಗ್ಲೆಂಡ್‌ ವಿರುದ್ಧವೂ ಗೆದ್ದರೆ ಕಿವೀಸ್‌ನ ಸೆಮೀಸ್‌ ಸ್ಥಾನ ಖಚಿತವಾಗಲಿದೆ. ಆಗ ಪಾಕಿಸ್ತಾನ ಟೂರ್ನಿಯಿಂದ ಹೊರಬೀಳಲಿದೆ.

ಕಿವೀಸ್ ಸಣ್ಣ ಅಂತರದಲ್ಲಿ ಸೋತರೂ ಸೆಮೀಸ್ ಪ್ರವೇಶಿಸಬಹುದು!

ಒಂದು ವೇಳೆ ಕಿವೀಸ್‌ ಸೋತರೂ, ತನ್ನ ನೆಟ್‌ ರನ್‌ರೇಟ್‌ ಪಾಕ್‌ಗಿಂತ ಕಡಿಮೆಯಾಗದಂತೆ ನೋಡಿಕೊಳ್ಳಬೇಕಿದೆ. ಅಂದರೆ, ಕಿವೀಸ್ ಸಣ್ಣ ಅಂತರದಲ್ಲಿ ಸೋತರೂ ಸೆಮೀಸ್ ಪ್ರವೇಶಿಸಬಹುದು. ಕಿವೀಸ್‌ ಈಗ +3.050, ಪಾಕ್‌ -0.461 ನೆಟ್‌ ರನ್‌ರೇಟ್‌ ಹೊಂದಿದೆ. ಕಿವೀಸ್‌ ದೊಡ್ಡ ಅಂತರದಲ್ಲಿ ಸೋತರಷ್ಟೇ ಪಾಕ್‌ನ ಸೆಮೀಸ್‌ ಆಸೆ ಜೀವಂತವಾಗಿರಲಿದೆ.

ಕೊನೆ ಪಂದ್ಯದಲ್ಲಿ ಲಂಕಾವನ್ನು ದೊಡ್ಡ ಅಂತರದಲ್ಲಿ ಸೋಲಿಸಿ, ನೆಟ್‌ ರನ್‌ರೇಟ್‌ನಲ್ಲಿ ಕಿವೀಸ್‌ನ ಹಿಂದಿಕ್ಕಿದರೆ ಮಾತ್ರ ಪಾಕ್‌ ಸೆಮೀಸ್ ತಲುಪಲಿದೆ. ಪಾಕ್‌ ಈಗ 2 ಪಂದ್ಯದಲ್ಲಿ ಕೇವಲ 1 ಅಂಕ ಗಳಿಸಿದೆ.

ಇನ್ನು, ಇಂಗ್ಲೆಂಡ್‌-ನ್ಯೂಜಿಲೆಂಡ್‌ ಪಂದ್ಯ ಮಳೆಯಿಂದ ರದ್ದಾದರೂ ಕಿವೀಸ್‌ 4 ಅಂಕದೊಂದಿಗೆ ಸೆಮೀಸ್‌ ತಲುಪಲಿದ್ದು, ಪಾಕಿಸ್ತಾನ ಹೊರಬೀಳಲಿದೆ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ

ವಿಂಡೀಸ್‌ನ ಮಣಿಸಿದ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ಗೆ ಲಗ್ಗೆ

ಅಹಮದಾಬಾದ್‌: ವಿಂಡೀಸ್‌ ವಿರುದ್ಧ 9 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿದ ದ.ಆಫ್ರಿಕಾ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ತಲುಪಿದೆ. ದ.ಆಫ್ರಿಕಾ ಸೂಪರ್‌-8 ಹಂತದಲ್ಲಿ ಸತತ 2 ಗೆಲುವು ಸಾಧಿಸಿತು. ಜಿಂಬಾಬ್ವೆ ವಿರುದ್ಧ ಭಾರತ ಗೆಲ್ಲುವುದರೊಂದಿಗೆ ದ.ಆಫ್ರಿಕಾದ ಸೆಮೀಸ್‌ ಸ್ಥಾನ ಖಚಿತವಾಯಿತು. ತಂಡ ಭಾನುವಾರ ಜಿಂಬಾಬ್ವೆ ವಿರುದ್ಧ ಔಪಚಾರಿಕ ಪಂದ್ಯವಾಡಲಿದೆ.

ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 8 ವಿಕೆಟ್‌ಗೆ 176 ರನ್‌ ರನ್‌ ಗಳಿಸಿತು. 10.2 ಓವರ್‌ಗಳಲ್ಲಿ 83 ರನ್‌ಗೆ 7 ವಿಕೆಟ್‌ ಕಳೆದುಕೊಂಡಿದ್ದ ತಂಡವನ್ನು ಜೇಸನ್‌ ಹೋಲ್ಡರ್‌(49), ಶೆಫರ್ಡ್‌(ಔಟಾಗದೆ 52) ಕಾಪಾಡಿದರು. ಆದರೆ ವಿಂಡೀಸ್‌ ನೀಡಿದ್ದ ದೊಡ್ಡ ಗುರಿಯನ್ನು ದ.ಆಫ್ರಿಕಾ 16.1 ಓವರ್‌ಗಳಲ್ಲೇ 1 ವಿಕೆಟ್‌ ನಷ್ಟದಲ್ಲಿ ಬೆನ್ನತ್ತಿ ಗೆದ್ದಿತು. ಮಾರ್ಕ್‌ರಮ್‌ ಔಟಾಗದೆ 82, ಡಿ ಕಾಕ್‌ 47, ರಿಕೆಲ್ಟನ್‌ ಔಟಾಗದೆ 45 ರನ್‌ ಸಿಡಿಸಿದರು.



Source link

Leave a Reply

Your email address will not be published. Required fields are marked *