Headlines

Video: ಶ್ವಾನವನ್ನು ಕಂಡೊಡನೆ ತಬ್ಬಿ ಮುದ್ದಾಡಿದ ಗೊರಿಲ್ಲಾ

Video: ಶ್ವಾನವನ್ನು ಕಂಡೊಡನೆ ತಬ್ಬಿ ಮುದ್ದಾಡಿದ ಗೊರಿಲ್ಲಾ


ಈ ಎಲ್ಲ ಬಂಧ ಮೀರಿದ ಸಂಬಂಧವೇ ಈ ಸ್ನೇಹ (ಸ್ನೇಹ) ಪ್ರಪಂಚದಲ್ಲಿ ಸ್ನೇಹಿತರಿಲ್ಲದ ವ್ಯಕ್ತಿಯಿರಲು ಸಾಧ್ಯವೇ ಇಲ್ಲ. ಈ ಸುಂದರವಾದ ಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮೂಕ ಪ್ರಾಣಿಗಳ ನಡುವಿನ ಶುದ್ಧ ಸ್ನೇಹಕ್ಕೆ ಈ ವಿಡಿಯೋನೇ ಸಾಕ್ಷಿ. ತನ್ನ ಬೆಸ್ಟ್ ಫ್ರೆಂಡ್ ಶ್ವಾನವನ್ನು (ನಾಯಿ) ಕಂಡೊಡನೆ ಗೊರಿಲ್ಲಾ ಕುಣಿದಾಡಿದ್ದು, ಓಡಿ ಹೋಗಿ ತಬ್ಬಿಕೊಂಡು ಮುದ್ದಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

Bobby Lloyd ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಗೊರಿಲ್ಲಾ ಹಾಗೂ ಶ್ವಾನವು ಮುಖಾಮುಖಿಯಾಗಿರುವುದು ಕಂಡುಬಂದಿದೆ. ಗೊರಿಲ್ಲವು ಶ್ವಾನವನ್ನು ಕಂಡೊಡನೆ ಕುಣಿದಾಡಿದೆ. ಅಷ್ಟೇ ಅಲ್ಲದೆ, ಶ್ವಾನವನ್ನು ಬಾಚಿ ತಬ್ಬಿಕೊಂಡು ಮುದ್ದಾಡಿದ ದೃಶ್ಯವನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಎತ್ತಿನ ಕಾಲು ಒತ್ತಿ ಸೇವೆ ಮಾಡಿದ ಮುದ್ದು ಮಕ್ಕಳು, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಮಾಡಲಾಗಿದೆ. ಒಬ್ಬ ಬಳಕೆದಾರ, ಸ್ನೇಹಿತರಿಬ್ಬರ ಪುನರ್ಮಿಲನ ಎಂದರೆ, ಮತ್ತೊಬ್ಬರು, ಮೂಕ ಪ್ರಾಣಿಗಳ ಶುದ್ಧ ಪ್ರೀತಿ ಎಂದು ಕಾಮೆಂಟ್ ಮಾಡಿದ್ದಾರೆ. ಇತರರು, ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *