ಆಸ್ಪತ್ರೆಯಿಂದ ಮನುಷ್ಯನ ಕಾಲನ್ನು ಹೊತ್ತೊಯ್ದ ಬೀದಿ ನಾಯಿ: ವೀಡಿಯೋ ವೈರಲ್ ಆಗ್ತಿದಂಗೆ ತನಿಖೆಗೆ ಆದೇಶ | Human Leg Carried By Dog In Shimla

ಆಸ್ಪತ್ರೆಯಿಂದ ಮನುಷ್ಯನ ಕಾಲನ್ನು ಹೊತ್ತೊಯ್ದ ಬೀದಿ ನಾಯಿ: ವೀಡಿಯೋ ವೈರಲ್ ಆಗ್ತಿದಂಗೆ ತನಿಖೆಗೆ ಆದೇಶ | Human Leg Carried By Dog In Shimla



ಆಸ್ಪತ್ರೆಯಿಂದ ಮನುಷ್ಯನ ಕಾಲನ್ನು ಹೊತ್ತೊಯ್ದ ಬೀದಿ ನಾಯಿ: ವೀಡಿಯೋ ವೈರಲ್ ಆಗ್ತಿದಂಗೆ ತನಿಖೆಗೆ ಆದೇಶ | Human Leg Carried By Dog In Shimla

ಶಿಮ್ಲಾದಲ್ಲಿ ಬೀದಿನಾಯೊಂದು ಕತ್ತರಿಸಿದ ಮಾನವನ ಕಾಲನ್ನು ಹೊತ್ತೊಯ್ಯುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಶಿಮ್ಲಾದ AIMSS ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿಯಲ್ಲಿನ ಲೋಪದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಮನುಷ್ಯನ ಕತ್ತರಿಸಿದ ಕಾಲನ್ನು ಹೊತ್ತೊಯ್ದ ಬೀದಿ ನಾಯಿ:

ಶಿಮ್ಲಾ: ಹಿಮಾಚಲ ಪ್ರದೇಶ ಶಿಮ್ಲಾದಲ್ಲಿ ಬೀದಿನಾಯೊಂದು ಮನುಷ್ಯನ ಕತ್ತರಿಸಲ್ಪಟ್ಟ ಮೊಣಕಾಲಿನ ಕೆಳಗಿನ ಕಾಲನ್ನು ಹೊತ್ತುಕೊಂಡು ಹೋಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಯದ ವಾತಾವರಣ ಸೃಷ್ಟಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಈಗ ತನಿಖೆಗೆ ಆದೇಶಿಸಲಾಗಿದೆ. ಶಿಮ್ಲಾದ ಚಾಮಿಯಾನಾದ ಅಟಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೂಪರ್ ಸ್ಪೆಷಾಲಿಟೀಸ್ (AIMSS)ನಲ್ಲಿ ಬೀದಿ ನಾಯಿಯೊಂದು ಕತ್ತರಿಸಿದ ಮಾನವ ಪಾದವನ್ನು ಹೊತ್ತುಕೊಂಡು ಹೋಗುತ್ತಿರುವುದನ್ನು ತೋರಿಸುವ ಆತಂಕಕಾರಿ ವಿಡಿಯೋವೊಂದು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.ಈ ಘಟನೆಯ ಹಿನ್ನೆಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಕ್ಕೆ ಆದೇಶಿಸಲಾಗಿದೆ.

ಘಟನೆಯ ನಂತರ, ಆಸ್ಪತ್ರೆ ಆಡಳಿತವು ಫೆಬ್ರವರಿ 21 ರ ರಾತ್ರಿ ಕರ್ತವ್ಯದಲ್ಲಿದ್ದ ನೈರ್ಮಲ್ಯ ಕಾರ್ಯಕರ್ತರು ಮತ್ತು ನೈರ್ಮಲ್ಯ ಮೇಲ್ವಿಚಾರಕರಿಗೆ ಸತ್ಯಶೋಧನಾ ವಿಚಾರಣಾ ವರದಿಯ ಆಧಾರದ ಮೇಲೆ ಶೋಕಾಸ್ ನೋಟಿಸ್‌ಗಳನ್ನು ನೀಡಿದ್ದಾರೆ. ಅವರ ಉತ್ತರಗಳನ್ನು ಪರಿಶೀಲಿಸಿದ ನಂತರ ಮುಂದಿನ ಶಿಸ್ತು ಕ್ರಮಗಳನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಕೇರಳ ಸಚಿವೆ ವೀಣಾ ಜಾರ್ಜ್ ಮೇಲೆ ಹಲ್ಲೆ ಪ್ರಕರಣ: ವಿದ್ಯಾರ್ಥಿ ನಾಯಕ ಬಿಥುಲ್ ನಿವಾಸದ ಮೇಲೆ ಸ್ಫೋಟಕ ಎಸೆದ ದುಷ್ಕರ್ಮಿಗಳು

ನೈರ್ಮಲ್ಯ ಗುತ್ತಿಗೆದಾರರಿಗೆ ಬಯೋಮೆಡಿಕಲ್ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಲಾಗಿದೆ. ಆಸ್ಪತ್ರೆ ಆವರಣದಿಂದ ತ್ಯಾಜ್ಯವನ್ನು ಸಮಯಕ್ಕೆ ಸರಿಯಾಗಿ ತೆರವುಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿ ಸಂಸ್ಥೆಗೆ ಸೂಚನೆ ನೀಡಲಾಗಿದೆ.

ವೈರಲ್ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು, ಆಸ್ಪತ್ರೆ ಆಡಳಿತವು ಮಂಗಳವಾರ ಬೆಳಗ್ಗೆ 3 ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ. ಇದು ಘಟನೆಯಲ್ಲಿ ಉಂಟಾಗಿರುವ ಲೋಪಗಳ ತನಿಖೆ ಮತ್ತು ಜವಾಬ್ದಾರಿಯನ್ನು ಸರಿಪಡಿಸಲು ಸೂಚಿಸಿದೆ. ಫೆಬ್ರವರಿ 19 ರಂದು ಕಾರ್ಡಿಯೋಥೊರಾಸಿಕ್ ಮತ್ತು ನಾಳೀಯ ಶಸ್ತ್ರಚಿಕಿತ್ಸೆ (CTVS) ವಿಭಾಗದ ಅಡಿಯಲ್ಲಿ ರೋಗಿಯೊಬ್ಬರ ಮೊಣಕಾಲಿನ ಕೆಳಭಾಗವನ್ನು ಕತ್ತರಿಸಿರುವುದು ಈ ಸಮಿತಿಯ ತನಿಖೆಯಲ್ಲಿ ತಿಳಿದು ಬಂದಿದೆ. ಕತ್ತರಿಸಿದ ಅಂಗವನ್ನು ಪ್ಯಾಕ್ ಮಾಡಿ ಬಯೋಮೆಡಿಕಲ್ ತ್ಯಾಜ್ಯ ಸಂಕೀರ್ಣದಲ್ಲಿ ವಿಲೇವಾರಿಗಾಗಿ ಹಾಕಲಾಗಿತ್ತು.

ಇದನ್ನೂ ಓದಿ: ತನ್ನ ತಾಯಿಯ ಸಾವು ಜೀವನದ ಅತ್ಯಂತ ನೋವಿನ ಕ್ಷಣ : ಮೋಹನ್‌ಲಾಲ್ ಜೊತೆ ಮನಸ್ಸು ಬಿಚ್ಚಿ ಮಾತನಾಡಿದ ಕೇರಳ ಸಿಎಂ

ಆದರೆ, ಫೆಬ್ರವರಿ 1 ರ ರಾತ್ರಿ, ನೈರ್ಮಲ್ಯ ಕಾರ್ಮಿಕರು ತ್ಯಾಜ್ಯವನ್ನು ಸಂಗ್ರಹಿಸುವಾಗ ಸಂಕೀರ್ಣದ ಬಾಗಿಲು ತೆರೆದು ಗಮನಿಸದೆ ಬಿಟ್ಟಿದ್ದು, ಇದೇ ಈ ಸಮಯದಲ್ಲಿ, ಬೀದಿ ನಾಯಿಯೊಂದು ಮಾನವ ಅಂಗವನ್ನು ಕದ್ದಿದೆ ಎಂದು ಶಂಕಿಸಲಾಗಿದೆ. ಪ್ರಯತ್ನಗಳ ಹೊರತಾಗಿಯೂ ಕಾಣೆಯಾದ ದೇಹದ ಭಾಗವನ್ನು ಪತ್ತೆಹಚ್ಚಲು ತಂಡಕ್ಕೆ ಸಾಧ್ಯವಾಗಲಿಲ್ಲ. ಫೆಬ್ರವರಿ 24 ರಂದು ನಾಯಿಯೊಂದು ಅದನ್ನು ಬಾಯಿಯಲ್ಲಿ ಹೊತ್ತುಕೊಂಡು ಹೋಗುವುದನ್ನು ನೋಡಲಾಯಿತು, ಮತ್ತು ಭದ್ರತಾ ಸಿಬ್ಬಂದಿ ಮಾನವ ಪಾದವನ್ನು ನಾಯಿಯಿಂದ ಪಡೆಯಲು ಪ್ರಯತ್ನಿಸಿದಾಗ, ನಾಯಿ ಆಕ್ರಮಣಕಾರಿಯಾಗಿ ಓಡಿ ಹೋಗಿದೆ ಎಂದು ವರದಿಯಾಗಿದೆ.



Source link

Leave a Reply

Your email address will not be published. Required fields are marked *