ಫೆಬ್ರವರಿ, ಫೆ.27: ಪ್ರತಿಯೊಬ್ಬ ಮಗನಿಗೂ ತನ್ನ ಪೋಷಕರ ಆಸೆಗಳನ್ನು ಪೂರೈಸಬೇಕೆಂಬ ಹಂಬಲವಿದೆ. ಅಂತಹದ್ದೇ ಒಂದು ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದೆ ಮನೀಶ್ ಎಂಬ ಯುವಕ ಹಂಚಿಕೊಂಡ ವಿಡಿಯೋ. ತಮ್ಮ ತಾಯಿಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದ ಮನೀಶ್, ಅವರ ಮುಖದಲ್ಲಿನ ಮುಗ್ಧ ಸಂತೋಷವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಮನೀಶ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಇಡೀ ಕುಟುಂಬದಲ್ಲೇ ವಿಮಾನ ಪ್ರಯಾಣ ಮಾಡಿದ ಮೊದಲ ಮಹಿಳೆ ಇವರ ತಾಯಿ. ವಿಮಾನ ಏರುವ ಮೊದಲಿನ ಕುತೂಹಲದಿಂದ ಹಿಡಿದು, ಆಕಾಶದಲ್ಲಿ ಹಾರುವಾಗ ಕಿಟಕಿಯ ಮೂಲಕ ಹೊರಗಿನ ಪ್ರಪಂಚವನ್ನು ನೋಡಿ ಬೆರಗಾಗುವ ಕ್ಷಣಗಳು ವಿಡಿಯೋದಲ್ಲಿವೆ.
ವಿಡಿಯೋದಲ್ಲೇನಿದೆ?
ವಿಮಾನದೊಳಗೆ ಕುಳಿತ ತಾಯಿ ಅತ್ಯಂತ ಉತ್ಸಾಹದಿಂದ ಸುತ್ತಮುತ್ತಲಿನ ಸೌಂದರ್ಯವನ್ನು ಗಮನಿಸುತ್ತಿಲ್ಲ. ವಿಮಾನದಲ್ಲಿ ಆಹಾರವನ್ನು ನೀಡುವ ಸವಿಯುವಾಗ ಅವರು ತೋರುವ ನಾಚಿಕೆ ಮತ್ತು ನಗು ನೋಡುಗರ ಮನ ಗೆಲ್ಲುತ್ತಿದೆ. ಮಗ ಮನೀಶ್ ಅವರು ತಮ್ಮ ತಾಯಿಯ ಬಗ್ಗೆ ಪ್ರೀತಿಯಿಂದ ವಿಡಿಯೋ ಮಾಡಿದ್ದಾರೆ.
ಇದನ್ನೂ ಓದಿ: ಬೆಡ್ ರೂಮ್‌ನಲ್ಲಿ ಹೆಂಡತಿ ಜತೆ ಮತ್ತೊಬ್ಬ ಗಂಡಸನ್ನು ನೋಡಿ ತಪ್ಪಿಸಿಕೊಂಡ ಪತಿ: ಕ್ಷಮಿಸು ಎಂದು ಗೋಳಾಡಿದ ಪತ್ನಿ
ಇಲ್ಲಿದೆ ನೋಡಿ ವಿಡಿಯೋ:
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹೇಳಿದ್ದೇನು?
ಮನೀಶ್ ಅವರು ಹಂಚಿಕೊಂಡಿರುವ ವಿಡಿಯೋದ ಬಗ್ಗೆ ನೆಟ್ಟಗರು ಕೂಡ ಕಮೆಂಟ್ ಮಾಡಿದ್ದಾರೆ. ಈ ಮಗ ತನ್ನ ತಾಯಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನಾವು ಜೀವನದಲ್ಲಿ ಏನೇ ಸಾಧಿಸಿದರೂ, ನಮ್ಮ ಪೋಷಕರ ಮುಖದಲ್ಲಿ ಇಂತಹ ನಗು ನೋಡುವುದೇ ಅಂತಿಮ ಯಶಸ್ಸು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ವಿಡಿಯೋವನ್ನು ನೋಡಿ. ಈ ವಿಡಿಯೋ ಕೇವಲ ಪ್ರವಾಸದ ಕಥೆಯಲ್ಲ, ಬದಲಾಗಿ ತಾಯಿ-ಮಗನ ನಡುವಿನ ಅವಿನಾಭಾವ ಸಂಬಂಧಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ