ಶಾಸಕರ ಡಿನ್ನರ್ ಮೀಟಿಂಗ್ ಬಗ್ಗೆ ಮೌನ ಮುರಿದ ಡಿಕೆ ಶಿವಕುಮಾರ್: ಹೇಳಿದ್ದೇನು ನೋಡಿ!

ಶಾಸಕರ ಡಿನ್ನರ್ ಮೀಟಿಂಗ್ ಬಗ್ಗೆ ಮೌನ ಮುರಿದ ಡಿಕೆ ಶಿವಕುಮಾರ್: ಹೇಳಿದ್ದೇನು ನೋಡಿ!


ಬೆಂಗಳೂರು, ಫೆಬ್ರವರಿ 27: ಮಾಗಡಿ ಶಾಸಕ ಎಚ್‌ಎಸ್‌ಸಿ ಬಾಲಕೃಷ್ಣ ಜನ್ಮದಿನಾಚರಣೆಯ ನೆಪದಲ್ಲಿ ಗುರುವಾರ ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಡಿಕೆಶಿ ಶಿವಕುಮಾರ್ ಬೆಂಬಲಿಗರು ಡಿನ್ನರ್ ಸಭೆ ನಡೆಸುತ್ತಿರುವ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಇದು ಯಾವುದೇ ಶಕ್ತಿ ಪ್ರದರ್ಶನವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೆಲವು ವಿಶ್ರಾಂತಿಗೆ, ವಿದೇಶ ಪ್ರಯಾಣಕ್ಕೆ, ಇನ್ನು ಕೆಲವರು ದೆಹಲಿಗೆ ತೆರಳುತ್ತಾರೆ. ಎಲ್ಲಾ ಅವರ ವೈಯಕ್ತಿಕ ವಿಚಾರಗಳು, ಪಕ್ಷಕ್ಕೂ ಇವುಗಳಿಗೂ ಸಂಬಂಧವಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.

ಸಿಪಿ ಯೋಗೇಶ್ವರ್ ಮತ್ತು ಬಾಲಕೃಷ್ಣ ಅವರು ಡಿಸಿಎಂ ಡಿಕೆಶಿ ಸಿಎಂ ಆಗಬೇಕು ಎಂದು ಹೇಳಿರುವ ಪ್ರಶ್ನೆಗೆ ಉತ್ತರಿಸಿ, ‘ಹೊಸ ಶಾಸಕರಿಗೆ ಮಂತ್ರಿಯಾಗುವ ಆಸೆ ಇರುವುದು ಸಹಜ. ನಾನು, ಪರಮೇಶ್ವರ, ಹೆಚ್.ಕೆ. ಪಾಟೀಲ್, ಮಹದೇವಪ್ಪ, ಸಿದ್ದರಾಮಯ್ಯ ಮುಂತಾದ ಹಿರಿಯ ನಾಯಕರು ಚಿಕ್ಕ ವಯಸ್ಸಿನಲ್ಲೇ ಮಂತ್ರಿಗಳಾಗಿದ್ದವರು. ಹೀಗಾಗಿ, ಹೊಸಬರಲ್ಲಿ ಮಂತ್ರಿ ಸ್ಥಾನದ ಆಕಾಂಕ್ಷೆಗಳು. ನಮ್ಮನ್ನೂ ಮಂತ್ರಿ ಮಾಡಿ ಎಂದು ಕೇಳುತ್ತಾರೆ. ಇದು ಸಹಜ’ ಎಂದರು.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *