India vs Zimbabwe ಟಿ20 ವಿಶ್ವಕಪ್: ಶಿವಂ ದುಬೆ ಮಹಾ ಎಡವಟ್ಟು, ಗೆದ್ದರೂ ಭಾರತಕ್ಕೆ ನೆಮ್ಮದಿಯಿಲ್ಲ! | India Misses Chance To Overtake West Indies In Super 8 Despite 72 Run Win Over Zimbabwe Kvn

India vs Zimbabwe ಟಿ20 ವಿಶ್ವಕಪ್: ಶಿವಂ ದುಬೆ ಮಹಾ ಎಡವಟ್ಟು, ಗೆದ್ದರೂ ಭಾರತಕ್ಕೆ ನೆಮ್ಮದಿಯಿಲ್ಲ! | India Misses Chance To Overtake West Indies In Super 8 Despite 72 Run Win Over Zimbabwe Kvn



India vs Zimbabwe ಟಿ20 ವಿಶ್ವಕಪ್: ಶಿವಂ ದುಬೆ ಮಹಾ ಎಡವಟ್ಟು, ಗೆದ್ದರೂ ಭಾರತಕ್ಕೆ ನೆಮ್ಮದಿಯಿಲ್ಲ! | India Misses Chance To Overtake West Indies In Super 8 Despite 72 Run Win Over Zimbabwe Kvn

ಜಿಂಬಾಬ್ವೆ ವಿರುದ್ಧ 72 ರನ್‌ಗಳ ಭರ್ಜರಿ ಜಯದ ಹೊರತಾಗಿಯೂ, ಶಿವಂ ದುಬೆ ಅವರ ದುಬಾರಿ ಬೌಲಿಂಗ್‌ನಿಂದಾಗಿ ಭಾರತದ ನೆಟ್ ರನ್‌ರೇಟ್ (NRR) ಸುಧಾರಿಸಲಿಲ್ಲ. ಇದರಿಂದಾಗಿ, ವೆಸ್ಟ್ ಇಂಡೀಸ್ ತಂಡವನ್ನು ಹಿಂದಿಕ್ಕಲು ಭಾರತಕ್ಕೆ ಸಾಧ್ಯವಾಗಲಿಲ್ಲ.  

ಚೆನ್ನೈ: ಜಿಂಬಾಬ್ವೆ ವಿರುದ್ಧ 72 ರನ್‌ಗಳ ಭರ್ಜರಿ ಜಯ ಸಾಧಿಸಿದರೂ, ಸೂಪರ್ 8 ಪಾಯಿಂಟ್ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಹಿಂದಿಕ್ಕಲು ಭಾರತಕ್ಕೆ ಸಾಧ್ಯವಾಗಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಹೀನಾಯ ಸೋಲಿನಿಂದಾಗಿ ಟೀಂ ಇಂಡಿಯಾದ ನೆಟ್ ರನ್‌ರೇಟ್ (NRR) ಪಾತಾಳಕ್ಕೆ ಕುಸಿದಿತ್ತು.

ಜಿಂಬಾಬ್ವೆ ವಿರುದ್ಧ ವಿಶ್ವಕಪ್ ಇತಿಹಾಸದಲ್ಲೇ ಎರಡನೇ ಅತಿದೊಡ್ಡ ಮೊತ್ತ ಕಲೆಹಾಕಿದರೂ, ಭಾರತಕ್ಕೆ 100ಕ್ಕೂ ಹೆಚ್ಚು ರನ್‌ಗಳ ಅಂತರದ ಗೆಲುವು ಸಾಧಿಸಲು ಆಗಲಿಲ್ಲ. ಕ್ರಿಕ್‌ಇನ್ಫೋ ವರದಿ ಪ್ರಕಾರ, ಭಾರತ ಒಂದು ವೇಳೆ 108 ರನ್‌ಗಳಿಗಿಂತ ಹೆಚ್ಚಿನ ಅಂತರದಲ್ಲಿ ಗೆದ್ದಿದ್ದರೆ, ವೆಸ್ಟ್ ಇಂಡೀಸ್‌ನ ನೆಟ್ ರನ್‌ರೇಟ್ ಅನ್ನು ಮೀರಿಸಬಹುದಿತ್ತು. ಅಂದರೆ, ಜಿಂಬಾಬ್ವೆಯನ್ನು 148 ರನ್‌ಗಳಿಗೆ ಕಟ್ಟಿಹಾಕಿದ್ದರೆ ಭಾರತಕ್ಕೆ ಈ ಅವಕಾಶವಿತ್ತು. ಆದರೆ, ಶಿವಂ ದುಬೆ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ರಿಯಾನ್ ಬೆನೆಟ್, ಜಿಂಬಾಬ್ವೆ ಸ್ಕೋರ್ ಅನ್ನು 184ಕ್ಕೆ ಏರಿಸಿದರು. ಇದರಿಂದಾಗಿ ನೆಟ್ ರನ್‌ರೇಟ್‌ನಲ್ಲಿ ವಿಂಡೀಸ್ ಅನ್ನು ಹಿಂದಿಕ್ಕುವ ಅವಕಾಶ ಭಾರತದ ಕೈತಪ್ಪಿ ಹೋಯಿತು.

ಶಿವಂ ದುಬೆ ಮಾಡಿದ ಮಹಾ ಎಡವಟ್ಟು

ಭಾರತದ 100+ ರನ್‌ಗಳ ಗೆಲುವಿಗೆ ಅಡ್ಡಗಾಲಾಗಿದ್ದೇ ಶಿವಂ ದುಬೆ ಅವರ ಎರಡು ಓವರ್‌ಗಳು. ದುಬೆ ತಮ್ಮ ಎರಡು ಓವರ್‌ಗಳಲ್ಲಿ ಬರೋಬ್ಬರಿ 46 ರನ್ ಬಿಟ್ಟುಕೊಟ್ಟರು. ಇದರಲ್ಲಿ ಎರಡು ನೋ ಬಾಲ್ ಮತ್ತು ನಾಲ್ಕು ವೈಡ್‌ಗಳು ಸೇರಿದ್ದವು. ಮೊದಲ ಓವರ್‌ನಲ್ಲಿ 26 ಮತ್ತು ಎರಡನೇ ಓವರ್‌ನಲ್ಲಿ 20 ರನ್ ನೀಡಿದ ದುಬೆ, ವಿಶ್ವಕಪ್ ಪಂದ್ಯವೊಂದರ ಮೊದಲ ಎರಡು ಓವರ್‌ಗಳಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ ಎಂಬ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರ ತಲಾ ಒಂದು ಓವರ್ ಬಾಕಿ ಇದ್ದರೂ, ನಾಯಕ ಸೂರ್ಯಕುಮಾರ್ ಯಾದವ್ ಕೊನೆಯ ಓವರ್ ಅನ್ನು ಶಿವಂ ದುಬೆಗೆ ನೀಡಿದ್ದು ದೊಡ್ಡ ಪ್ರಮಾದವಾಯಿತು. ಕೊನೆಯ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಹಿಡಿದ ಅದ್ಭುತ ಕ್ಯಾಚ್‌ನಿಂದ ಒಂದು ವಿಕೆಟ್ ಸಿಕ್ಕರೂ, ದುಬೆ 20 ರನ್ ಬಿಟ್ಟುಕೊಟ್ಟರು. ಈ 72 ರನ್‌ಗಳ ಗೆಲುವಿನೊಂದಿಗೆ, ಎರಡು ಪಂದ್ಯಗಳಲ್ಲಿ ಒಂದು ಜಯ ಸಾಧಿಸಿರುವ ಭಾರತದ ನೆಟ್ ರನ್‌ರೇಟ್ ಈಗಲೂ -0.100 ಆಗಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ವಿರುದ್ಧ ಸೋತರೂ ವೆಸ್ಟ್ ಇಂಡೀಸ್ +1.791 ರಷ್ಟು ಉತ್ತಮ ನೆಟ್ ರನ್‌ರೇಟ್ ಹೊಂದಿದೆ.

ಭಾರತ ತನ್ನ ಕೊನೆಯ ಸೂಪರ್ 8 ಪಂದ್ಯದಲ್ಲಿ ಭಾನುವಾರ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಭಾರತ ಮತ್ತು ವೆಸ್ಟ್ ಇಂಡೀಸ್ ಎರಡೂ ತಂಡಗಳಿಗೆ ಕ್ವಾರ್ಟರ್ ಫೈನಲ್‌ನಂತಿದೆ. ಇದರಲ್ಲಿ ಗೆದ್ದ ತಂಡ ದಕ್ಷಿಣ ಆಫ್ರಿಕಾ ನಂತರ ಎರಡನೇ ಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಒಂದು ವೇಳೆ ಮಳೆ ಅಥವಾ ಇತರೆ ಕಾರಣಗಳಿಂದ ಪಂದ್ಯ ರದ್ದಾಗಿ ಅಂಕಗಳನ್ನು ಹಂಚಿಕೊಂಡರೆ, ಉತ್ತಮ ನೆಟ್ ರನ್‌ರೇಟ್ ಹೊಂದಿರುವ ವೆಸ್ಟ್ ಇಂಡೀಸ್ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ.

ಭಾರತ-ಜಿಂಬಾಬ್ವೆ ಮ್ಯಾಚ್ ಹೇಗಿತ್ತು?

ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಅಭಿಷೇಕ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 256 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡವು 6 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿತು. ಆರಂಭಿಕ ಬ್ಯಾಟರ್ ಬ್ರಿಯನ್ ಬೆನ್ನೆಟ್ ಅಜೇಯ 97 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.



Source link

Leave a Reply

Your email address will not be published. Required fields are marked *