ವಿಜಯಪುರ, ಫೆಬ್ರವರಿ 27: ವಿಜಯಪುರದಲ್ಲಿ ಜೆಡಿಎಸ್ ಬೆಳ್ಳಿಹಬ್ಬ ಕಾರ್ಯಕ್ರಮ ನಡೆಯುತ್ತಿರುವಾಗ ಕಾರ್ಯಕರ್ತನೊಬ್ಬ ಪರವಾನಗಿ ಇರುವ ಪಿಸ್ತೂಲ್ ಜೇಬಲ್ಲಿಟ್ಟುಕೊಂಡು ಬಂದಿದ್ದಾರೆ. ಸೊಂಟದಲ್ಲಿ ಪಿಸ್ತೂಲ್ ಇಟ್ಟುಕೊಂಡು ವೇದಿಕೆ ಮುಂಭಾಗ ಬಂದಾಗ, ಭದ್ರತೆಯ ಕಾರಣಕ್ಕೆ ಆತನನ್ನು ಹೊರ ಕಳುಹಿಸಿದ್ದಾರೆ. ಸದ್ಯ ಜೆಡಿಎಸ್ ಕಾರ್ಯಕರ್ತ ಪಿಸ್ತೂಲ್‌ನೊಂದಿಗೆ ಬಂದ ವಿಡಿಯೋ ವೈರಲ್ ಆಗುತ್ತಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ