Headlines

Video: ಟ್ರಿಪ್‌ಗೆ ಹೊರಟ ಯುವತಿ ವಿಮಾನ ಹತ್ತುತ್ತಿದ್ದಂತೆ ರಜೆ ಕ್ಯಾನ್ಸಲ್ ಮಾಡಿದ ಬಾಸ್

Video: ಟ್ರಿಪ್‌ಗೆ ಹೊರಟ ಯುವತಿ ವಿಮಾನ ಹತ್ತುತ್ತಿದ್ದಂತೆ ರಜೆ ಕ್ಯಾನ್ಸಲ್ ಮಾಡಿದ ಬಾಸ್


ಉಳಿದಿಲ್ಲದೇ ದುಡಿಯುವ ಉದ್ಯೋಗಿಗಳಿಗೆ (ನೌಕರರು) ಒಂದೇ ಒಂದು ದಿನ ಕೊಟ್ಟರೆ ಸಾಕು ಎನ್ನುವಂತಾಗುತ್ತದೆ. ರಜೆ ಸಿಕ್ಕೊಡನೆ ಟ್ರಿಪ್ ಮಾಡ್ತಾರೆ. ರಜೆಯ ವಿಚಾರವಾಗಿ ಜೆನ್ ಝೆಡ್ ತಲೆಮಾರಿನ ಯುವತಿಯ ಪೋಸ್ಟ್ ವೈರಲ್ ಆಗಿದೆ. ಹೌದು, ರಜೆ ಎಂದು ಟ್ರಿಪ್‌ಗೆ ಹೊರಟ ಯುವತಿಯೂ ವಿಮಾನ ಹತ್ತುವಷ್ಟರಲ್ಲಿ ಬಾಸ್ ರಜೆ ಕ್ಯಾನ್ಸಲ್ ಸಂದೇಶ ಕಳುಹಿಸಿ ಶಾಕ್ ನೀಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಘರ್ ಕೆ ಕಲೇಶ್ (ಘರ್ಕೆಕಲೇಶ್) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಜೆನ್ ಜಿ ಉದ್ಯೋಗಿಯೂ ರಜೆ ಕ್ಯಾನ್ಸಲ್ ಆದ ಬಗ್ಗೆ ವಿವರಿಸಲಾಗಿದೆ. ರಜೆಯಂದು ವಿಯೆಟ್ನಾಂಗೆ ಹೊರಟ ಸಿಮ್ರಾನ್ ಬಾಸ್ ನಿರ್ಣಾಯಕ ಕೆಲಸಕ್ಕಾಗಿ ರಜೆಯನ್ನು ತಕ್ಷಣವೇ ರದ್ದುಗೊಳಿಸಿದರು. ಹೀಗಾಗಿ ಈ ಉದ್ಯೋಗಿ ನಾನು ಕಂಪನಿಗಾಗಿ ಅಲ್ಲ, ಮುಕ್ತವಾಗಿ ಬದುಕಲು ಕೆಲಸ ಮಾಡುತ್ತೇನೆ. ಯೋಜನೆಯನ್ನು ರದ್ದುಗೊಳಿಸುತ್ತೇನೆ. ಆದರೆ ನನ್ನ ಲ್ಯಾಪ್‌ಟಾಪ್ 10 ಆಫ್ ಆಗಿರುತ್ತದೆ ಎಂದು ಹೇಳಲಾಗಿದೆ ಶೀರ್ಷಿಕೆಯಲ್ಲಿ ಉಲ್ಲೇಖಿಸಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಜೆನ್ ಝೆಡ್ ಉದ್ಯೋಗಿ ಸಿಮ್ರಾನ್ ತನ್ನ ಈ ಟ್ರಿಪ್ ಪ್ಲ್ಯಾನ್ ಬಗ್ಗೆ ಒಂದು ವಾರ ಮೊದಲೇ ತನ್ನ ಮ್ಯಾನೇಜರ್‌ಗೆ ತಿಳಿಸಿದ್ದೆ. ಆದರೆ ಸಮಯದಲ್ಲಿ ಯಾವುದೇ ಆಕ್ಷೇಪಣೆ ಇರಲಿಲ್ಲ. ವಿಮಾನ ನಿಲ್ದಾಣದಲ್ಲಿದ್ದಾಗ, ತುರ್ತು ನಿಯೋಜನೆಯ ಕಾರಣದಿಂದ ರಜೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ರು. ಇದು ನಿಜವಾದ ಸಂವಹನ ವೈಫಲ್ಯ. ನೌಕರರ ವೈಯಕ್ತಿಕ ಸಮಯದ ಬಗ್ಗೆ ಕಂಪನಿಯ ಬಾಸ್‌ಗಳಿಗೆ ಇರುವ ಗೌರವದ ಕೊರತೆಯಿದೆ. ಕೆಲಸದಲ್ಲಿ ತುರ್ತು ಪರಿಸ್ಥಿತಿಗಳು ಸಂಭವಿಸಿದ್ರೂ, ವೈಯಕ್ತಿಕ ಬದ್ಧತೆಗಳನ್ನು ಪದೇ ಪದೇ ಮೀರಬಾರದು. ತನ್ನ ವೈಯಕ್ತಿಕ ಜೀವನ ಹಾಗೂ ಪ್ರಯಾಣವನ್ನು ಆನಂದಿಸಲು ತಾನು ಕೆಲಸ ಮಾಡುತ್ತೇನೆ. ಕೊನೆಯ ಕ್ಷಣದ ಬೇಡಿಕೆಗಳಿಗೆ ನೌಕರರು ಯಾವಾಗಲೂ ಲಭ್ಯವಿರಬೇಕು ಎಂಬ ನಿಯಮಗಳು ನಾನು ಒಪ್ಪುವುದಿಲ್ಲ ಹೀಗಾಗಿ ಬಾಸ್ ಏನು ಬೇಕಾದರೂ ಮಾಡಲಿ ಐ ಡಾಂಟ್ ಕೇರ್.

ಇದನ್ನೂ ಓದಿ: ಬೆಂಗಳೂರಿನಲ್ಲಿ 38 ಲಕ್ಷ ರೂ ಆಫರ್, ದುಬೈನಲ್ಲಿ ತಿಂಗಳಿಗೆ 5 ಲಕ್ಷ ರೂ ಸಂಬಳ; ವೃತ್ತಿ ಆಯ್ಕೆಯ ಬಗ್ಗೆ ಸಲಹೆ ಕೇಳಿದ ಟೆಕ್ಕಿ

ಈ ಪೋಸ್ಟ್ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಸೇರಿಸಿದ್ದು, ಒಬ್ಬ ಬಳಕೆದಾರ ವೈಯುಕ್ತಿಕ ಜೀವನಕ್ಕಿಂತ ಮುಖ್ಯ ದುಡಿಮೆನಾ ಪ್ರಶ್ನೆಯನ್ನು ಮಾಡಲಾಗಿದೆ. ಇತರರು, ಬಾಸ್ ಗಳ ಈ ವರ್ತನೆಗಳು ಅತೀವವಾಗಿ ಅನಿಸುತ್ತದೆ ಎಂದು ಕಾಮೆಂಟ್ ಮಾಡಿದೆ. ಮತ್ತೊಬ್ಬರು, ಈ ನಡವಳಿಕೆ ಸ್ವೀಕಾರಾರ್ಹವೇ? ಎಂದು ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *