ತಾನು ಕೆಲಸ ಮಾಡಿದ ಆಫೀಸಿಗೇ 91 ಲಕ್ಷ ರೂ. ಕನ್ನ! ಆರೋಪಿ ಕ್ಯಾಶಿಯರ್ ಅಂದರ್

ತಾನು ಕೆಲಸ ಮಾಡಿದ ಆಫೀಸಿಗೇ 91 ಲಕ್ಷ ರೂ. ಕನ್ನ! ಆರೋಪಿ ಕ್ಯಾಶಿಯರ್ ಅಂದರ್


ಬೆಂಗಳೂರು, ಫೆಬ್ರವರಿ 27: ಸದಾಶಿವನಗರದ ಬಿಲ್ಡರ್ ನರಸಿಂಹ ಅವರ ಕಚೇರಿಯಲ್ಲಿ ನಡೆದ 91.76 ಲಕ್ಷ ರೂಪಾಯಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರದಲ್ಲಿರುವ ಆರೋಪಿಗಳನ್ನು ಬಂಧಿಸಿದ್ದಾರೆ. ಕಚೇರಿಯ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಧನಂಜಯ್ ಮತ್ತು ಅವನ ಸ್ನೇಹಿತ ಪ್ರವೀಣ್ ಈ ಕೃತ್ಯ ಎಸಗಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ, ಕಳ್ಳತನವಾದ ಒಟ್ಟು 91,76,000 ರೂಪಾಯಿಗಳ ಸುಮಾರು 81,66,000 ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ. ಇನ್ನೂ ಇಬ್ಬರು ಆರೋಪಿಗಳನ್ನು ಪತ್ತೆ ಮಾಡಬೇಕಿದ್ದು, ಅವರ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ತಾಂತ್ರಿಕ ಆಧಾರಗಳ ಮೇಲೆ ತನಿಖೆ ನಡೆಸಿ, ಬಹುಬೇಗ ಹಣವನ್ನು ವಸೂಲಿ ಮಾಡಿದ ಸದಾಶಿವನಗರ ಪೊಲೀಸ್ ತಂಡದ ಕಾರ್ಯಕ್ಕೆ ಸೀಮಂತ್ ಕುಮಾರ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *