‘ಬಾಡಿಗಾರ್ಡ್’ ಮತ್ತು ‘ಭದ್ರ’ ಚಿತ್ರಗಳ ನಟಿ ಡೈಸಿ ಶಾ, 41ನೇ ವಯಸ್ಸಿನಲ್ಲಿ ಮದುವೆಯಾಗದೆಯೇ ತಾಯಿಯಾಗಲು ನಿರ್ಧರಿಸಿದ್ದಾರೆ. ಇದಕ್ಕಾಗಿ ತಮ್ಮ ಅಂಡಾಣುಗಳನ್ನು ಫ್ರೀಜ್ ಮಾಡಿದ್ದು, ಕುಟುಂಬವನ್ನು ಆರಂಭಿಸಲು ಮದುವೆ ಕಡ್ಡಾಯವಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಕನ್ನಡದಲ್ಲಿ ಜಗ್ಗೇಶ್ ಜೊತೆ ಬಾಡಿಗಾರ್ಡ್, ಪ್ರಜ್ವಲ್ ದೇವರಾಜ್ ಜೊತೆ ಭದ್ರ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಮದುವೆಯಾಗದೆಯೇ ತಾಯಿಯಾಗಲು ತೀರ್ಮಾನ ಮಾಡಿದ್ದಾರೆ. 41ನೇ ವರ್ಷದಲ್ಲಿರುವ ನಟಿ ತಮ್ಮ ಎಗ್ ಫ್ರೀಜ್ ಮಾಡಲು ನಿರ್ಧಾರ ಮಾಡಿದ್ದಾರೆ.

ತಾಯ್ತನದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ನಟಿ ಡೈಸಿ ಶಾ, 41 ನೇ ವಯಸ್ಸಿನಲ್ಲಿ ತಮ್ಮ ಅಂಡಾಣುಗಳನ್ನು ಫ್ರೀಜ್ ಮಾಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಮದುವೆಗಾಗಿ ಕಾಯುವ ಬದಲು, ಸರಿಯಾದ ಸಮಯ ಬಂದಾಗ ತಾಯಿಯಾಗುವ ಆಯ್ಕೆ ತನಗೆ ಇರಬೇಕು ಎಂಬ ನಂಬಿಕೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದಿದ್ದಾರೆ.

ಇತ್ತೀಚೆಗೆ, ಅನೇಕ ನಟಿಯರು ತಾಯ್ತನದ ನಿರ್ಧಾರವನ್ನು ಮುಂದೂಡಲು ಅಂಡಾಣು ಫ್ರೀಜ್ ಮಾಡುವ ಆಯ್ಕೆಯನ್ನು ಆರಿಸಿಕೊಳ್ಳುತ್ತಿದ್ದಾರೆ. ಈಗ ಡೈಸಿ ಶಾ ಅವರೂ ಕೂಡ ಇದರ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಕುಟುಂಬವನ್ನು ಪ್ರಾರಂಭಿಸಲು ಮದುವೆಯಾಗುವುದು ಕಡ್ಡಾಯ ಎಂದು ನಾನು ಭಾವಿಸುವುದಿಲ್ಲ. ನಾನು ನನ್ನ ಅಂಡಾಣುವನ್ನು ಫ್ರೀಜ್ ಮಾಡಿದ್ದೇನೆ.’ ಎಂದಿದ್ದಾರೆ.

ಇದರಿಂದಾಗಿ ನಾನು ಯಾವಾಗ ಬೇಕಾದರೂ ತಾಯಿಯಾಗಬಹುದು. ನನ್ನ ಸ್ವಂತ ಮಗುವಿಗೆ ಜನ್ಮ ನೀಡುವ ಆಯ್ಕೆ ನನಗಿದೆ.’ ಮದುವೆಯ ಬಗ್ಗೆ ಮಾತನಾಡುತ್ತಾ, ಡೈಸಿ ತನ್ನ ಆಲೋಚನೆಗಳು ಸಾಂಪ್ರದಾಯಿಕ ಚೌಕಟ್ಟಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದರು. ನಾನು ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ. ಸರಿಯಾದ ವ್ಯಕ್ತಿ ನನ್ನ ಜೀವನದಲ್ಲಿ ಬಂದರೆ, ನಾನು ಖಂಡಿತವಾಗಿಯೂ ಅದರ ಬಗ್ಗೆ ಯೋಚಿಸುತ್ತೇನೆ, ಆದರೆ ಸಮಾಜದ ನಿರೀಕ್ಷೆಗಳಿಂದಾಗಿ ತಾನು ಮದುವೆಯಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಡೈಸಿ ತನ್ನ ಜೀವನದಲ್ಲಿ ಈಗ ಸಂಪೂರ್ಣವಾಗಿ ತೃಪ್ತಳಾಗಿದ್ದೇನೆ ಎಂದಿದ್ದಾರೆ. ಜೀವನದಲ್ಲಿ ನಾನು ಬಯಸಿದ್ದನ್ನು ನಾನು ಪಡೆದುಕೊಂಡಿದ್ದೇನೆ. ನನ್ನ ಸ್ವಂತ ಮನೆ ಹೊಂದುವ ನನ್ನ ಕನಸು ನನಸಾಗಿದೆ. ನನ್ನ ಕುಟುಂಬಕ್ಕೆ ಉತ್ತಮ ಜೀವನವನ್ನು ಒದಗಿಸಲು ಸಾಧ್ಯವಾಗುವುದು ದೊಡ್ಡ ವಿಷಯ ಎಂದಿದ್ದಾರೆ.

ಡೈಸಿ ಶಾ ಈ ಹಿಂದೆಯೂ ತನ್ನ ಟಾಕ್ಸಿಕ್ ರಿಲೇಷನ್‌ಷಿಪ್‌ಗಳ ಬಗ್ಗೆ ಬಾಯಿಬಿಟ್ಟಿದ್ದರು. ತನ್ನ ಮಾಜಿ ಬಾಯ್‌ಫ್ರೆಂಡ್ ಒಬ್ಬ ಪುರುಷ ನಟರೊಂದಿಎ ಕೆಲಸ ಮಾಡೋದನ್ನು ತಡೆಯುತ್ತಿದ್ದ ಎಂದು ಹೇಳಿದ್ದರು. ಇತ್ತೀಚಿನ ದಿನಗಳಲ್ಲಿ, ಸಂಬಂಧಗಳಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ. ಕೆಲವೊಮ್ಮೆ ದಂಪತಿಗಳು ಬೇರ್ಪಡುತ್ತಾರೆ ಮತ್ತು ಕೆಲವೊಮ್ಮೆ ಭಯಾನಕ ಘಟನೆಗಳು ಸಂಭವಿಸುತ್ತವೆ. ಇದು ತನ್ನನ್ನು ಚಿಂತೆಗೀಡು ಮಾಡುತ್ತದೆ ಎಂದಿದ್ದಾರೆ.

ನಾನು ಆರ್ಥಿಕವಾಗಿ ಸಬಲಳಾಗಿದ್ದೇನೆ ಎಂದಿರುವ ಡೈಸಿ ಶಾ, ‘ಒಳ್ಳೆಯ ಹಣ ಸಂಪಾದಿಸಿದ್ದೇನೆ. ಆದರೆ, ಶ್ರೀಮಂತ ವ್ಯಕ್ತಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ನನಗೆ ಸಾಧ್ಯವಿಲ್ಲ. ನನ್ನ ಸಂಗಾತಿ ನನ್ನ ಖರ್ಚುಗಳನ್ನು ಭರಿಸಬೇಕೆಂದು ನಾನು ನಿರೀಕ್ಷಿಸುವುದಿಲ್ಲ. ಆದರೆ ಅವನಿಗೆ ತನ್ನದೇ ಆದ ಸ್ಥಿರ ಆದಾಯವಿರುವುದು ಮುಖ್ಯ. ಪ್ರೀತಿ ಮತ್ತು ಹಣ ನನಗೆ ಅಷ್ಟೇ ಮುಖ್ಯ ಎಂದಿದ್ದಾರೆ.

Source link
'ಮಗು ಬೇಕು ಅಂದ್ರೆ ಮದುವೆ ಆಗ್ಲೇಬೇಕಂತಿಲ್ಲ..' ಬಹುದೊಡ್ಡ ನಿರ್ಧಾರ ಮಾಡಿದ ಜಗ್ಗೇಶ್ ಸಿನಿಮಾ ಹೀರೋಯಿನ್!