Annayya Kannada Serial Episode: ಅಣ್ಣಯ್ಯ ಧಾರಾವಾಹಿಯಲ್ಲಿ ಪರಶು ಹಾಗೂ ರತ್ನ ಮದುವೆ ಶಾಸ್ತ್ರ ನಡೆಯುತ್ತಿದೆ. ಇನ್ನೊಂದು ಕಡೆ ವೀರಭದ್ರನ ಕುತಂತ್ರ ಕೂಡ ನಡೆಯುತ್ತಿದೆ. ಈಗ ಶಿವು ಪಾತ್ರದಿಂದ ನಟ ವಿಕಾಶ್ ಉತ್ತಯ್ಯ ಅವರು ಹೊರಗಡೆ ಬಂದಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ.

ಪರಶು ಸರಿ ಇಲ್ಲ, ಈಗಾಗಲೇ ಒಂದು ಹುಡುಗಿಯನ್ನು ಗರ್ಭಿಣಿ ಮಾಡಿ ಮೋಸ ಮಾಡಿದ್ದನು, ಕೊಲೆಯನ್ನು ಕೂಡ ಮಾಡಿದ್ದನು. ಈ ವಿಷಯ ಶಿವು ಕುಟುಂಬಕ್ಕೆ ಗೊತ್ತಿಲ್ಲ. ಆರಂಭದಲ್ಲಿ ತನ್ನ ಅಣ್ಣನ ಬಗ್ಗೆ ಅನುಮಾನ ಪಟ್ಟಿದ್ದ ಪಾರು, ಈಗ ಅಣ್ಣ ಸರಿ ಹೋಗಿದ್ದಾನೆ ಎಂದು ನಂಬಿದ್ದಾಳೆ.

ಈ ಮದುವೆಯನ್ನು ತಡೆಯಬೇಕು ಎಂದು ಶಾರದಾ ಪ್ರಯತ್ನಪಡುತ್ತಿದ್ದಾಳೆ. ಶಾರದಾಳನ್ನು ಎಲ್ಲರ ಮುಂದೆ ಕಳ್ಳಿಯನ್ನಾಗಿ ಮಾಡಬೇಕು ಎಂದು ವೀರಭದ್ರ ಪ್ರಯತ್ನಪಡುತ್ತಿದ್ದಾನೆ. ಹೀಗಾಗಿ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಇನ್ನೊಂದು ಕಡೆ ರಶ್ಮಿ ಗಂಡ ಜಿಮ್ ಸೀನ, ಪಿಂಕಿಯನ್ನು ಲವ್ ಮಾಡುತ್ತಿದ್ದಾನೆ. ಈ ವಿಷಯ ಈಗ ಸೀನನ ತಂದೆಗೂ ಗೊತ್ತಾಗಿದೆ. ಈ ವಿಷಯ ಶಿವುಗೆ ಗೊತ್ತಾದರೆ ಬೇರೆ ಕಥೆಯೇ ಆಗುವುದು.

ಜಿಮ್ ಸೀನ ಹಾಗೂ ಪಿಂಕಿ ಲವ್ ಮಾಡುತ್ತಿದ್ದಾರೆ. ಈ ವಿಷಯ ಶಿವುಗೆ ಗೊತ್ತಾಗುವ ಹಾಗೆ ಆಯಿತು. ತಾನೇ ಈ ವಿಷಯವನ್ನು ಪಿಂಕಿ ಹೇಳಬೇಕು ಎಂದುಕೊಂಡಿದ್ದಾಳೆ. ಇನ್ನೊಂದು ಕಡೆ ಶಿವು ಧ್ವನಿ ಇರುವ ಇನ್ನೋರ್ವ ವ್ಯಕ್ತಿಯನ್ನು ಪ್ರೋಮೋದಲ್ಲಿ ತೋರಿಸಲಾಗಿದೆ.

ಶಿವು ಪಾತ್ರಧಾರಿ ವಿಕಾಶ್ ಉತ್ತಯ್ಯ ಅವರು ಸೀರಿಯಲ್ ಬಿಟ್ಟರಾ? ಅಥವಾ ಸೋಮೇಗೌಡನೇ ಶಿವು ಪಾತ್ರದಲ್ಲಿ ಬಂದಿದ್ದಾನಾ ಎಂಬ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

Source link
Annayya Serial ಬಿಟ್ರಾ ಶಿವು ಪಾತ್ರಧಾರಿ ನಟ ವಿಕಾಶ್ ಉತ್ತಯ್ಯ? ಹೊಸ ಗೆಟಪ್ ರಹಸ್ಯ ಏನು?