ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ | Who Is Mallikarjun Mutya Viral Video Turns Popular Godman Into Absconding Figure Police Launch Search Videoshow

ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ | Who Is Mallikarjun Mutya Viral Video Turns Popular Godman Into Absconding Figure Police Launch Search Videoshow


 ಅವರು ಆ ಭಾಗದ ದೇವಮಾನವ ಅನ್ನಿಸಿಕೊಂಡವರು.. ಏನೇ ಕಷ್ಟ ಬಂದರೂ ಆ ದೇವಮಾನವನನ್ನ ನೆನಪಿಸಿಕೊಂಡ್ರೆ ಸಾಕು.. ಕಷ್ಟವೆಲ್ಲಾ ದೂರವಾಗುತ್ತೆ ಅಂತ ನಂಬ್ತಾರೆ.. ವಾಹನ, ಮನೆ, ಸೈಟು ಏನ್​ ತಗೊಂಡ್ರು ಮೊದಲು ಆತನದ್ದೇ ಮೂಜೆ.. ಕಷ್ಟ ಸುಖಗಳಿಗೂ ಅವರೇ ಪರಿಹಾರ.. ಆದ್ರೆ ಇವತ್ತು ಇದೇ ದೇವಮಾನವ ಅಪ್​ಸ್ಕಾಂಡ್​​ ಆಗಿದ್ದಾರೆ.. ಪೊಲೀಸರು ಆತನಿಗಾಗಿ ಇನ್ನಿಲ್ಲದಂತೆ ಹುಡುಕಾಡುತ್ತಿದ್ದಾರೆ.. ಯಸ್​​.. ನಾವು ಮಾತನ್ನಾಡುತ್ತಿರೋದು ಮಲ್ಲಿಕಾರ್ಜುನ ಮುತ್ಯಾ ಬಗ್ಗೆ.. ಈತನದ್ದೇ ಒಂದು ವಿಡಿಯೋ ವೈರಲ್​ ಆಗಿ ಇವತ್ತು ಅವರು ಭೂಗತನ್ನಾಗೋದಕ್ಕೆ ಕಾರಣವಾಗಿಬಿಟ್ಟಿದೆ.. ಅಷ್ಟಕ್ಕೂ ಯಾವುದು ಆ ವಿಡಿಯೋ..? ಆ ಮುತ್ಯಾನ ಹಿನ್ನಲೆಯಾದ್ರೂ ಏನು..? ಅನ್ನೋ ಕಂಪ್ಲೀಟ್​​ ಡಿಟೇಲ್ಸ್ ಇಲ್ಲಿದೆ.

ಕಳೆದೆರಡು ವರ್ಷದಿಂದ.. ಇಂಥಹ ವಿಡಿಯೋಗಳು ಸಖತ್​​ ವೈರಲ್​ ಆಗಿದ್ವು.. ಬಿಲ್ಡಪ್​​ ಸಾಂಗ್ಸ್​​.. ದೇವರ ಹಾಡುಗಳನ್ನ ಹಾಕೊಂಡು ಒಬ್ಬ ಯುವಕ ಓಡಾಡೋ ರೀಲ್ಸ್​​ಗಳವು.. ಆ ವಿಡಿಯೋವನ್ನ ನೋಡಿದ್ದ ದಕ್ಷಿಣ ಭಾಗದ ಜನ ನೆಗ್ಲೆಕ್ಟ್​​ ಮಾಡಿದ್ರು.. ಆದ್ರೆ ಉತ್ತರ ಕರ್ನಾಟಕದ ಜನ ಮಾತ್ರ ಒಂದು ಕ್ಷಣ ಆ ಯುವಕನನ್ನ ನೆನಪಿಸಿಕೊಂಡು ನಮ್ಮ ಕಷ್ಟಗಳನ್ನ ದೂರ ಮಾಡು ಮುತ್ಯಾ ಅಂತ ಪ್ರಾರ್ಥಿಸಿದ್ರು.. ಅಷ್ಟು ಭಕ್ತಿ.. ನಂಬಿಕೆ ಆ ಯುವಕನ ಮೇಲೆ.. ಅಂದಹಾಗೆ ಆತನ ಹೆಸರು ಮಲ್ಲಿಕಾರ್ಜುನ ಮುತ್ಯಾ.



Source link

Leave a Reply

Your email address will not be published. Required fields are marked *