Actor Son Arrest ಖ್ಯಾತ ನಟನ ಪುತ್ರ ಸೇರಿ ಮೂವರು ದೇವಸ್ಥಾನ ಆವರಣದಲ್ಲಿ ಗಾಂಜಾ ಸಮೇತ ಅರೆಸ್ಟ್ | Popular Comedy Actor Tini Tom Son Adam Sheem Arrested With Ganja In Kochi

ಖ್ಯಾತ ನಟನ ಪುತ್ರ ಸೇರಿ ಮೂವರು ದೇವಸ್ಥಾನ ಆವರಣದಲ್ಲಿ ಗಾಂಜಾ ಸಮೇತ ಅರೆಸ್ಟ್, ಕಾರ್ತಿಕ್, ಅಮಿತ್ ಜಾರ್ಜ್ ಮತ್ತು ಆಡಮ್ ಶೀಮ್ ಬಂಧಿತ ಯುವಕರು. ಇವರಿಂದ 4 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. 

ಕೊಚ್ಚಿ(ಫೆ.27) ಖ್ಯಾತ ಕಾಮಿಡಿ ನಟನ ಪುತ್ರ ಗಾಂಜಾ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾರೆ. ದೇವಸ್ಥಾನದ ಆವರಣದಲ್ಲೇ ಗಾಂಜಾ ಜೊತೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸ್ ಕಾರ್ಯಾಚರಣೆಯಲ್ಲಿ ಖ್ಯಾತ ನಟನ ಪುತ್ರನ ಜೊತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಹೌದು, ಮಲೆಯಾಳಂ ಸಿನಿಮಾ ಇಂಡಸ್ಟ್ರೀಯ ಖ್ಯಾತ ನಟ, ಕಾಮಿಡಿಯನ್ ಟಿನಿ ಟಾಮ್ ಪುತ್ರ ಆ್ಯಡಮ್ ಶೀಮ್ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಲಾಗಿದೆ. ಕಾರ್ತಿಕ್, ಅಮಿತ್ ಜಾರ್ಜ್ ಮತ್ತು ಆಡಮ್ ಶೀಮ್ ಬಂಧಿತರು.

ತಿರುವಾಂಕುಳ ದೇವಸ್ಥಾನ ಆವರಣದಲ್ಲೇ ಅರೆಸ್ಟ್

ಪೊಲೀಸರು ಆರೋಪಿಗಳಿಂದ ನಾಲ್ಕು ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ತಿಂಗಳ 22ರಂದು ತ್ರಿಪ್ಪೂಣಿತ್ತರಾ ಹಿಲ್ ಪ್ಯಾಲೇಸ್ ಪೊಲೀಸರು ಈ ಮೂವರನ್ನು ಬಂಧಿಸಿದ್ದಾರೆ. ತಿರುವಾಂಕುಳಂನ ದೇವಸ್ಥಾನವೊಂದರ ಬಳಿ ಇವರು ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ಬಳಿಕ ಪೊಲೀಸರು ಮೂವರನ್ನೂ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಕೇರಳದಲ್ಲಿ ಗಾಂಜಾ ಮಾರಾಟ, ಗಾಂಜ ಜೊತೆಗಿನ ಕಳ್ಳವ್ಯವಾರಗಳು ಎಗ್ಗಿಲ್ಲದೆ ನಡೆಯತ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿದ್ದ ಬೆನ್ನಲ್ಲೇ ಈ ಅರೆಸ್ಟ್ ತೀವ್ರ ಕೋಲಾಹಲ ಸೃಷ್ಟಿಯಾಗಿದೆ.

ಕೇರಳ ಸಿನಿಮಾ ಇಂಡಸ್ಟ್ರೀಯಲ್ಲಿ ಡ್ರಗ್ಸ್ ಜಾಲ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ ಅನ್ನೋ ಆರೋಪಕ್ಕೆ ಈ ಘಟನೆ ಪುಷ್ಠಿ ನೀಡಿದೆ. 

Source link

Leave a Reply

Your email address will not be published. Required fields are marked *