Spinach benefits for men: ಸೊಪ್ಪುಗಳಲ್ಲಿ ಜೀವಸತ್ವಗಳು ಮತ್ತು ಪೋಷಕಾಂಶಗಳು ಅಧಿಕವಾಗಿರುತ್ತವೆ. ಇವುಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ (Immunity) ಹೆಚ್ಚುತ್ತದೆ. ಅದರಲ್ಲೂ ಪುರುಷರಲ್ಲಿ ಕಂಡುಬರುವ ಕೆಲವು ಆರೋಗ್ಯ ಸಮಸ್ಯೆಗಳಿಗೆ ಇದು ರಾಮಬಾಣ. ಅದರ ವಿವರ ಇಲ್ಲಿದೆ.

ತರಕಾರಿಗಳು ಮತ್ತು ಸೊಪ್ಪುಗಳು ನಮ್ಮನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ವಿಶೇಷವಾಗಿ ಬೇಸಿಗೆಯಲ್ಲಿ ಇವುಗಳನ್ನು ಎಷ್ಟು ಹೆಚ್ಚು ಸೇವಿಸುತ್ತೇವೋ ಅಷ್ಟು ಒಳ್ಳೆಯದು. ಯಾಕೆಂದರೆ ಈ ಸಮಯದಲ್ಲಿ ಬಿಸಿಲಿನಿಂದಾಗಿ ಬೇಗ ಸುಸ್ತಾಗುತ್ತೇವೆ ಮತ್ತು ಯಾವುದೇ ಕೆಲಸ ಮಾಡಲು ಶಕ್ತಿ ಇರುವುದಿಲ್ಲ.

ರಕ್ತಹೀನತೆಗೆ ಮುಕ್ತಿಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶ (Iron) ಹೇರಳವಾಗಿದೆ. ಇದು ಹಿಮೋಗ್ಲೋಬಿನ್ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಇದು ಅಮೃತವಿದ್ದಂತೆ. ಆದ್ದರಿಂದ ವಾರಕ್ಕೊಮ್ಮೆ ಇದನ್ನು ತಪ್ಪದೇ ಸೇವಿಸಬೇಕು.

ಪಾಲಕ್ ಸೊಪ್ಪಿನಲ್ಲಿರುವ ‘ಲುಟೀನ್’ ಎಂಬ ಅಂಶವು ಕಣ್ಣುಗಳನ್ನು ರಕ್ಷಿಸುತ್ತದೆ ಮತ್ತು ದೃಷ್ಟಿಯನ್ನು ಚುರುಕುಗೊಳಿಸುತ್ತದೆ.

ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಅಧಿಕವಾಗಿದೆ. ನಿರಂತರ ಆಯಾಸ ಮತ್ತು ಸುಸ್ತಿನಿಂದ ಬಳಲುತ್ತಿರುವವರು ಪಾಲಕ್ ತಿನ್ನುವುದು ತುಂಬಾ ಒಳ್ಳೆಯದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವಾಗಿಡುತ್ತದೆ.

ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್-ಕೆ ಮೂಳೆಗಳನ್ನು ಬಲಪಡಿಸುತ್ತದೆ. ಪುರುಷರು ಇದನ್ನು ವಾರಕ್ಕೊಮ್ಮೆ ಸೇವಿಸುವುದರಿಂದ ಶರೀರದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ.

ಈ ಮೇಲಿನ ಮಾಹಿತಿಯು ಕೇವಲ ಸಾಮಾನ್ಯ ತಿಳುವಳಿಕೆಗಾಗಿ ಮಾತ್ರ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಗಂಭೀರ ಸಮಸ್ಯೆಗಳಿದ್ದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

Source link
Spinach benefits for men: ಪುರುಷರಿಗೆ ಈ ಸೊಪ್ಪು ಅತ್ಯುತ್ತಮ ಔಷಧ.. ವಾರಕ್ಕೊಮ್ಮೆ ತಿಂದರೆ ಸಾಕು!