Headlines

Hutti Gold Mines:ಹಟ್ಟಿ ಗೋಲ್ಡ್ ಮೈನ್ ಎದುರು ಸ್ಫೋಟಕಗಳ ರಾಶಿ! ಸಿಸಿಟಿವಿಯಲ್ಲಿ ಸೆರೆಯಾಯ್ತು ‘ನಂಬರ್ ಪ್ಲೇಟ್’ ಇಲ್ಲದ ನಿಗೂಢ ಬೈಕ್!

Hutti Gold Mines:ಹಟ್ಟಿ ಗೋಲ್ಡ್ ಮೈನ್ ಎದುರು ಸ್ಫೋಟಕಗಳ ರಾಶಿ! ಸಿಸಿಟಿವಿಯಲ್ಲಿ ಸೆರೆಯಾಯ್ತು ‘ನಂಬರ್ ಪ್ಲೇಟ್’ ಇಲ್ಲದ ನಿಗೂಢ ಬೈಕ್!

Hutti Gold Mines:ಹಟ್ಟಿ ಗೋಲ್ಡ್ ಮೈನ್ ಎದುರು ಸ್ಫೋಟಕಗಳ ರಾಶಿ! ಸಿಸಿಟಿವಿಯಲ್ಲಿ ಸೆರೆಯಾಯ್ತು ‘ನಂಬರ್ ಪ್ಲೇಟ್’ ಇಲ್ಲದ ನಿಗೂಢ ಬೈಕ್!

ಇತಿಹಾಸ ಪ್ರಸಿದ್ಧ ಹಟ್ಟಿ ಚಿನ್ನದ ಗಣಿ ಕಂಪನಿಯ ಮುಂಭಾಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ಹಟ್ಟಿ, ಸ್ಫೋಟಕಗಳು ತಂದಿದ್ದು ಎಲ್ಲಿಂದ? ಯಾರು? ಪತ್ತೆಗೆ ಮುಂದಾಗಿರುವ ರಾಯಚೂರು ಪೊಲೀಸರು, ಇಲ್ಲಿದೆ ಸಂಪೂರ್ಣ ವರದಿ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಇತಿಹಾಸ ಪ್ರಸಿದ್ಧ ಹಟ್ಟಿ ಚಿನ್ನದ ಗಣಿ ಕಂಪನಿಯ ಮುಂಭಾಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ಹಟ್ಟಿ ಕಂಪನಿಯ ಭದ್ರತಾ ಸಿಬ್ಬಂದಿಯು ರಸ್ತೆಯಲ್ಲಿ ಬಿದ್ದಿದ್ದ ಸ್ಫೋಟಕಗಳನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸರು ದಾಖಲಿಸಿಕೊಂಡಿರುವ ದೂರಿನ ಪ್ರಕಾರ, ಸ್ಥಳದಲ್ಲಿ ‘ಐಡಿಯಲ್ ಪವರ್’ ಕಂಪನಿಗೆ ಸೇರಿದ ಒಟ್ಟು 16 ಸ್ಫೋಟಕ ವಸ್ತುಗಳು (ಕಾಟ್ರಿಜ್‌ಗಳು) ಪತ್ತೆಯಾಗಿವೆ. ಸಾಮಾನ್ಯವಾಗಿ ಗಣಿಗಾರಿಕೆ ಅಥವಾ ಬಂಡೆಗಳನ್ನು ಸ್ಫೋಟಿಸಲು ಬಳಸುವ ಈ ವಸ್ತುಗಳು ಸಾರ್ವಜನಿಕ ರಸ್ತೆಯಲ್ಲಿ ಅನಾಥವಾಗಿ ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈ ಕುರಿತು ರಾಯಚೂರು ಎಸ್ ಪಿ ಅರುಣಾಂಗ್ಷು ಗಿರಿ ಅವರು ಸ್ಪಷ್ಟನೆ ನೀಡಿದ್ದು, ಸ್ಫೋಟಕ ವಸ್ತುಗಳ ಸಾಗಾಣಿಕೆ ನಿಯಮಗಳ ತೀವ್ರ ಉಲ್ಲಂಘನೆ ಇಲ್ಲಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಘಟನೆಯ ಕುರಿತು ಪೊಲೀಸರು ಹಟ್ಟಿ ಕಂಪನಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸ್ಫೋಟಕಗಳು ಅಲ್ಲಿಗೆ ಹೇಗೆ ಬಂದವು ಎಂಬ ಸುಳಿವು ಸಿಕ್ಕಿದೆ. ಬೆಳಗ್ಗೆ 8:30 ರಿಂದ 8:45ರ ಸುಮಾರಿನಲ್ಲಿ ಬೈಕ್‌ನಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬನ ಸೈಡ್ ಬ್ಯಾಗ್‌ನಿಂದ ಈ ವಸ್ತುಗಳು ಆಕಸ್ಮಿಕವಾಗಿ ರಸ್ತೆಗೆ ಬಿದ್ದಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ.

ಆದರೆ, ಅಚ್ಚರಿಯ ವಿಷಯವೆಂದರೆ ಆ ಬೈಕ್‌ಗೆ ಯಾವುದೇ ನೋಂದಣಿ ಸಂಖ್ಯೆ (Number Plate) ಇರಲಿಲ್ಲ. ಇದು ಪೊಲೀಸರ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದ್ದು, ಅಪರಿಚಿತ ವ್ಯಕ್ತಿ ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಎಲ್ಲಿಗೆ ಸಾಗಿಸುತ್ತಿದ್ದ ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ.

ಸದ್ಯ ರಾಯಚೂರು ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ನಿಯಮಬಾಹಿರವಾಗಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಆ ಅಪರಿಚಿತ ವ್ಯಕ್ತಿಯ ಪತ್ತೆಗಾಗಿ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ ದೃಶ್ಯಗಳನ್ನು ಕೂಡ ಜಾಲಾಡಲಾಗುತ್ತಿದೆ.

ಗಣಿಗಾರಿಕೆ ಪ್ರದೇಶವಾಗಿರುವುದರಿಂದ ಇವುಗಳ ದುರ್ಬಳಕೆ ಆಗುವ ಸಾಧ್ಯತೆಗಳ ಬಗ್ಗೆಯೂ ನಿಗಾ ಇರಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Source link

Leave a Reply

Your email address will not be published. Required fields are marked *