ಐಪಿಎಲ್ 2026 ಕಾಯುತ್ತಿರುವ ಅಭಿಮಾನಿಗಳಿಗೆ ಶಾಕ್, ಟೂರ್ನಿ ಆರಂಭದಲ್ಲೇ ಎದುರಾಯ್ತ ವಿಘ್ನ?

ಐಪಿಎಲ್ 2026 ಕಾಯುತ್ತಿರುವ ಅಭಿಮಾನಿಗಳಿಗೆ ಶಾಕ್, ಟೂರ್ನಿ ಆರಂಭದಲ್ಲೇ ಎದುರಾಯ್ತ ವಿಘ್ನ?

ಐಪಿಎಲ್ 2026 ಕಾಯುತ್ತಿರುವ ಅಭಿಮಾನಿಗಳಿಗೆ ಶಾಕ್, ಟೂರ್ನಿ ಆರಂಭದಲ್ಲೇ ಎದುರಾಯ್ತ ವಿಘ್ನ?

ಐಪಿಎಲ್ 2026 ಕಾಯುತ್ತಿರುವ ಅಭಿಮಾನಿಗಳಿಗೆ ಶಾಕ್, ಟೂರ್ನಿ ಆರಂಭದಲ್ಲೇ ಎದುರಾಯ್ತ ವಿಘ್ನ? ಬದಲಾವಣೆಗಳೊಂದಿಗೆ ತಂಡಗಳು ಕಣಕ್ಕಿಳಿಯುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಮೊದಲು ಸೂಚಿಸಿದ್ದ ದಿನಾಂಕದಲ್ಲಿ ಟೂರ್ನಿ ಆರಂಭಗೊಳ್ಳುತ್ತಿಲ್ಲ.

ಐಪಿಎಲ್ 2026ರ ಟೂರ್ನಿಗೆ ಫ್ರಾಂಚೈಸಿಗಳು ತಯಾರಿ ಆರಂಭಿಸಿ ಹಲವು ದಿನಗಳೇ ಉರುಳಿದೆ. ಹರಾಜಿನಲ್ಲಿ ಉತ್ತಮ ಆಟಗಾರರ ಖರೀದಿಸಿ ಈಗಾಗಲೇ ಕ್ಯಾಂಪ್ ಆರಂಭಿಸಿದೆ. ಹರಾಜಿನಲ್ಲೇ 2026ರ ಐಪಿಎಲ್ ಟೂರ್ನಿ ಆರಂಭ ಹಾಗೂ ಫೈನಲ್ ದಿನಾಂಕ ಕುರಿತು ಬಿಸಿಸಿಐ ಸೂಚನೆ ನೀಡಿತ್ತು. ಆದರೆ ಇದೀಗ ಆರಂಭದಲ್ಲೇ ಕೆಲ ವಿಘ್ನಗಳು ಎದುರಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಕ್ರಿಕ್‌ಬಝ್ ವರದಿ ಪ್ರಕಾರ ಐಪಿಎಲ್ ಹರಾಜು ವೇಳೆ ಫ್ರಾಂಚೈಸಿಗಳಿಗೆ ಐಪಿಎಲ್ ಆರಂಭದ ಕುರಿತು ಸೂಚನೆ ನೀಡಿತ್ತು. ಮಾರ್ಚ್ 26ರಿಂದ ಐಪಪಿಎಲ್ ಆರಂಭಗೊಳ್ಳಲಿದೆ ಎಂದಿತ್ತು. ಇನ್ನು ಮೇ 31 ರಂದು ಫೈನಲ್ ಪಂದ್ಯದ ಮೂಲಕ ಅಂತ್ಯಗೊಳ್ಳಲಿದೆ ಎಂದು ಬಿಸಿಸಿಐ ಹೇಳಿತ್ತು. ಆದರೆ ಇದೀಗ ವರದಿ ಪ್ರಕಾರ, ಐಪಿಎಲ್ ಆರಂಭ ವಿಳಂಬವಾಗುತ್ತಿದೆ.

ಇಎಸ್‌ಪಿಯನ್ ಕ್ರಿಕ್‌ಇನ್ಫೋ ವರದಿ ಪ್ರಕಾರ ಈ ಬಾರಿಯ ಐಪಿಎಲ್ ಟೂರ್ನಿ ಮಾರ್ಚ್ 28 ರಿಂದ ಆರಂಭಗೊಳ್ಳಲಿದೆ ಎಂದಿದೆ. ಬಿಸಿಸಿಐ ಸೂಚಸಿದ ದಿನಾಂಕಕ್ಕಿಂತ ಎರಡು ದಿನ ವಿಳಂಭವಾಗಿ ಟೂರ್ನಿ ನಡೆಯಲಿದೆ ಎಂದು ವರದಿಯಾಗಿದೆ. ಈ ಕುರಿತು ಬಿಸಿಸಿಐ ಅಧಿಕೃತವಾಗಿ ಫ್ರಾಂಚೈಸಿಗಳಿಗೆ ಮಾಹಿತಿ ಇನ್ನು ರವಾನಿಸಿಲ್ಲ ಎಂದು ಹೇಳಲಾಗುತ್ತಿದೆ.

ಐಪಿಎಲ್ ಟೂರ್ನಿ ವಿಳಂಬವಾಗಿ ಆರಂಭಗೊಳ್ಳಲು ಪ್ರಮುಖ ಕಾರಣವೊಂದಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಕಾರಣದಿಂದ ವೇಳಾಪಟ್ಟಿಯಲ್ಲೂ ಕೆಲ ಬದಲಾವಣೆಗಳು ನಡೆಯಲಿದೆ. ಇದೇ ಕಾರಣದಿಂದ ಟೂರ್ನಿ ಎರಡು ದಿನವಿಳಂಬವಾಗುತ್ತಿದೆ ಎಂದು ವರದಿಯಾಗಿದೆ.

ವಿಧಾನಸಭಾ ಚುನಾವಣೆಗಳ ದಿನಾಂಕವನ್ನು ಮಾರ್ಚ್ ತಿಂಗಳಲ್ಲಿ ಚನಾವಣಾ ಆಯೋಗ ಘೋಷಣೆ ಮಾಡಲಿದೆ. ಈ ಘೋಷಣೆ ಬಳಿಕ ಈ ಬಾರಿಯ ಐಪಿಎಲ್ 2026 ಟೂರ್ನಿ ವೇಳಾಪಟ್ಟಿ ಘೋಷಣೆಯಾಗಲಿದೆ. ಚುನಾವಣಾ ರಾಜ್ಯಗಳಲ್ಲಿ ನಿಗದಿತ ದಿನಗಳಲ್ಲಿ ಬೇರೆ ರಾಜ್ಯಗಳಲ್ಲಿ ಪಂದ್ಯ ಆಯೋಜನೆ ಮಾಡಲಾಗುತ್ತದೆ.

ಚುನಾವಣೆ ಘೋಷಣೆ ಬೆನ್ನಲ್ಲೇ ಐಪಿಎಲ್ ವೇಳಾಪಟ್ಟಿ

Source link

Leave a Reply

Your email address will not be published. Required fields are marked *