ಕಪ್ಪು ಹುಡುಗಿನೇ ನನ್ನಮ್ಮನಿಗೂ ತುಂಬಾ ಇಷ್ಟ: ರಶ್ಮಿಕಾ ಮದುವೆ ಬೆನ್ನಲ್ಲೇ Rakshit Shetty ಮಾತಾಯ್ತು ವೈರಲ್​!

ಕಪ್ಪು ಹುಡುಗಿನೇ ನನ್ನಮ್ಮನಿಗೂ ತುಂಬಾ ಇಷ್ಟ: ರಶ್ಮಿಕಾ ಮದುವೆ ಬೆನ್ನಲ್ಲೇ Rakshit Shetty ಮಾತಾಯ್ತು ವೈರಲ್​!

ಕಪ್ಪು ಹುಡುಗಿನೇ ನನ್ನಮ್ಮನಿಗೂ ತುಂಬಾ ಇಷ್ಟ: ರಶ್ಮಿಕಾ ಮದುವೆ ಬೆನ್ನಲ್ಲೇ Rakshit Shetty ಮಾತಾಯ್ತು ವೈರಲ್​!

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆ ಸುದ್ದಿಯ ನಡುವೆಯೇ, ರಕ್ಷಿತ್ ಶೆಟ್ಟಿ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಸ್ವೀಕರಿಸುವಾಗ,  ಕಪ್ಪು ಹುಡುಗಿ ಬಗ್ಗೆ ಮಾತನಾಡಿದ್ದಾರೆ. ನಟ ಹೇಳಿದ್ದೇನು?

ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ (Rashmika Mandanna and Vijaya Devarakonda) ಇದಾಗಲೇ ಸಪ್ತಪದಿ ತುಳಿದಾಗಿದೆ. ಇಬ್ಬರೂ ಅಧಿಕೃತವಾಗಿ ಗಂಡ-ಹೆಂಡತಿ ಆಗಿದ್ದಾರೆ. ಅವರ ಮದುವೆಯಾದರೂ ಯಾಕೋ ರಕ್ಷಿತ್​ ಶೆಟ್ಟಿ ಅಭಿಮಾನಿಗಳು ಮಾತ್ರ, ರಶ್ಮಿಕಾ ಮತ್ತು ರಕ್ಷಿತ್​ ಅವರ ಸಂಬಂಧವನ್ನು ಬಿಡುವಂತೆ ಕಾಣಿಸುತ್ತಿಲ್ಲ.

ಅಷ್ಟಕ್ಕೂ ರಶ್ಮಿಕಾ ಮಂದಣ್ಣ, ಕನ್ನಡ ಚಿತ್ರರಂಗದಲ್ಲಿ ನೆಲೆಯೂರಲು ಕಾರಣವಾಗಿರೋ ರಕ್ಷಿತ್​ ಶೆಟ್ಟಿ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡು ಕೊನೆಗೆ ಸಕತ್​ ಫೇಮಸ್​ ಆದ ಮೇಲೆ ಮದುವೆ ಮುರಿದಿರುವ ವಿಷಯ ಎಲ್ಲರಿಗೂ ತಿಳಿದದ್ದೇ. ಆದರೆ ಇವರಿಬ್ಬರ ನಡುವೆ ನಿಜವಾಗಿಯೂ ಆಗಿದ್ದೇನು ಎನ್ನುವುದು ಮಾತ್ರ ನಿಗೂಢ.

2018ರಲ್ಲಿ ನಡೆದಿರುವ ಈ ಘಟನೆಯನ್ನು ರಕ್ಷಿತ್​ ಶೆಟ್ಟಿ (Rakshit Shetty and Rashmika Mandannas engagement) ಮರೆತಿದ್ದರೂ, ಮೊದಲ ಪ್ರೀತಿಯನ್ನು ಮರೆಯುವುದು ಅಷ್ಟು ಸುಲಭವಲ್ಲ ಎನ್ನುವುದು ಬ್ರೇಕಪ್​ ಆಗಿರೋರಿಗೆ ತಿಳಿದಿರುವ ಕಾರಣದಿಂದ ರಕ್ಷಿತ್​ ಅವರ ಹಳೆಯ ವಿಡಿಯೋಗಳನ್ನು ಹುಡುಕಿ ಹುಡುಕಿ ಹಾಕುತ್ತಿದ್ದಾರೆ.

ಇದೀಗ ಇನ್ನೊಂದು ವಿಡಿಯೋ ವೈರಲ್​ ಆಗುತ್ತಿದೆ. ಫಿಲ್ಮ್​ಫೇರ್​ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಶೇರ್​ ಮಾಡಿಕೊಳ್ಳಲಾಗಿದೆ. ರಕ್ಷಿತ್​ ಶೆಟ್ಟಿ ಅವರಿಗೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಕ್ಕಾಗಿ ಬೆಸ್ಟ್​ ಆ್ಯಕ್ಟರ್​ ಪ್ರಶಸ್ತಿ ಬಂದ ಸಂದರ್ಭದ ವಿಡಿಯೋ ಇದಾಗಿದೆ.

ಸಾಮಾನ್ಯವಾಗಿ ಫಿಲ್ಮ್​ ಫೇರ್​ ಪ್ರಶಸ್ತಿಗಳಲ್ಲಿ ಕಪ್ಪು ಬಣ್ಣದ ಹುಡುಗಿಯ ಶೀಲ್ಡ್​ ನೀಡಲಾಗುತ್ತದೆ. ಆ ಸಮಯದಲ್ಲಿ ಆ ಪದಕವನ್ನು ಹಿಡಿದು ರಕ್ಷಿತ್​ ಶೆಟ್ಟಿ ಅವರು, ಈ ಕಪ್ಪು ಹುಡುಗಿಯನ್ನು ಕರೆದುಕೊಂಡು ಹೋದಾಗಲೆಲ್ಲಾ ನನ್ನ ಅಮ್ಮನಿಗೆ ತುಂಬಾ ಖುಷಿಯಾಗುತ್ತದೆ ಎಂದಿದ್ದಾರೆ.

ಇದೇ ಕಾರಣಕ್ಕೆ ಈ ಬ್ಲ್ಯಾಕ್ ಹುಡುಗಿ ನನಗೆ ತುಂಬಾ ಇಷ್ಟ. ಅಮ್ಮನಿಗಂತೂ ತುಂಬಾ ಇಷ್ಟ. ಆದ್ದರಿಂದ ಅವಾರ್ಡ್​ ಕೊಟ್ಟವರಿಗೆ ತುಂಬಾ ಧನ್ಯವಾದ ಎಂದಿದ್ದಾರೆ.

Source link

Leave a Reply

Your email address will not be published. Required fields are marked *