ಹೋಳಿಕಾ ದಹನದ ನಂತ್ರ ಅದ್ರ ಭಸ್ಮವನ್ನು ಧೂಳು ಅಂತ ನಿರ್ಲಕ್ಷ್ಯ ಮಾಡ್ಬೇಡಿ. ಅದನ್ನು ಮನೆಗೆ ತಂದ್ರೆ ನಿಮ್ಮ ಅನೇಕ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಯಾವ ಸಮಸ್ಯೆಗೆ ಭಸ್ಮ ಪರಿಹಾರ ನೀಡುತ್ತೆ ಎಂಬ ಮಾಹಿತಿ ಇಲ್ಲಿದೆ.

ಹೋಳಿಕಾ ದಹನ ಸಾಮಾನ್ಯವಾಗಿ ಬಣ್ಣಗಳ ಹೋಳಿಗೆ ಒಂದು ದಿನ ಮೊದಲು ಹುಣ್ಣಿಮೆ ದಿನ ನಡೆಯುತ್ತದೆ. ಈ ಬಾರಿ ಗ್ರಹಣ ಬಂದಿರೋದ್ರಿಂದ ಹೋಳಿಕಾ ದಹನವನ್ನು ಬಣ್ಣದ ಹೋಳಿಗೆ ಎರಡು ದಿನ ಮೊದಲು ಮಾಡಲಾಗ್ತಿದೆ. ಅಂದ್ರೆ ಮಾರ್ಚ್ 2 ರಂದು ಹೋಳಿಕಾ ದಹನ ನಡೆಯಲಿದೆ. ಮಾರ್ಚ್ 2 ಮತ್ತು ಮೂರು ಎರಡೂ ದಿನ ಹುಣ್ಣಿಮೆ ಇದೆ. ಮಾರ್ಚ್ 3 ಕ್ಕಿಂತ ಮಾರ್ಚ್ 2, ಹೋಳಿಕಾ ದಹನಕ್ಕೆ ಒಳ್ಳೆಯದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

ಹೋಳಿಕಾ ದಹನ ಸಾಂಸ್ಕೃತಿಕ ಮತ್ತ ಧಾರ್ಮಿಕ ಮಹತ್ವವನ್ನು ಹೊಂದಿದೆ. ಒಳ್ಳೆಯದು ಕೆಟ್ಟದ್ದನ್ನು ಗೆಲ್ಲುತ್ತದೆ ಎಂಬುದು ಹೋಳಿಕಾ ದಹನದ ಸಂಕೇತವಾಗಿದೆ. ಹೋಳಿಕಾ ದಹನದ ನಂತ್ರ ಅದ್ರ ಭಸ್ಮಕ್ಕೂ ಮಹತ್ವದ ಸ್ಥಾನವಿದೆ. ಭಸ್ಮವನ್ನು ಅತ್ಯಂತ ಪವಿತ್ರವೆಂದು ನಂಬಲಾಗಿದೆ. ಅನೇಕ ಸಮಸ್ಯೆಗಳಿಗೆ ಈ ಭಸ್ಮ ಪರಿಹಾರ ನೀಡುತ್ತದೆ.

ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹೋಳಿಕಾ ದಹನದ ಭಸ್ಮ ಪರಿಹಾರ ನೀಡಬಲ್ಲದು. ಎಷ್ಟೇ ದುಡಿದ್ರೂ ಕೈನಲ್ಲಿ ಹಣ ನಿಲ್ತಿಲ್ಲ, ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗ್ತಿಲ್ಲ ಎನ್ನುವವರು ಹೋಳಿಕಾ ದಹನದ ಭಸ್ಮವನ್ನು ಮನೆಗೆ ತೆಗೆದುಕೊಂಡು ಬನ್ನಿ. ಅದನ್ನು ಒಂದು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ, ಅದನ್ನು ಹಣ ಇಡುವ ಜಾಗದಲ್ಲಿ ಇಡಿ. ಇದ್ರಿಂದ ಆರ್ಥಿಕ ತೊಂದ್ರೆಗೆ ಮುಕ್ತಿ ಸಿಗಲಿದೆ. ಮನೆಯಲ್ಲಿ ಸಮೃದ್ಧಿ ನೆಲೆಸಲಿದೆ.

ಮನೆಯಲ್ಲಿ ಸದಾ ಜಗಳ, ಗಲಾಟೆ ನಡೆಯುತ್ತಿದ್ದರೆ. ಕುಟುಂಬಸ್ಥರ ಮಧ್ಯೆ ಭಿನ್ನಾಭಿಪ್ರಾಯವಿದ್ದರೆ. ಅದಕ್ಕೆ ಹೋಳಿಕಾ ದಹನದ ಭಸ್ಮ ಪರಿಹಾರ ನೀಡಬಲ್ಲದು. ನೀವು ಹೋಳಿಕಾ ದಹನದ ಭಸ್ಮವನ್ನು ಮನೆಯ ಮುಖ್ಯ ದ್ವಾರಕ್ಕೆ ಹಾಕಬೇಕು. ಇದ್ರಿಂದ ಮನೆಯಲ್ಲಿರುವ ದುಷ್ಟ ಶಕ್ತಿಯ ನಷ್ಟವಾಗುತ್ತದೆ. ಮನೆಯಲ್ಲಿ ಸದಾ ನೆಮ್ಮದಿ, ಶಾಂತಿ ನೆಲೆಸಿರುತ್ತದೆ.

ಅಂಗಡಿ ಅಥವಾ ಬ್ಯುಸಿನೆಸ್ ಮಾಡ್ತಿರುವವರಿಗೂ ಹೋಳಿಕಾ ದಹದನ ಭಸ್ಮ ಉಜ್ವಲ ಭವಿಷ್ಯಕ್ಕೆ ನೆರವಾಗಲಿದೆ. ಭಸ್ಮ, ಲಾಭದ ಹಾದಿಯನ್ನು ತೋರಿಸಲಿದೆ. ನೀವು ಅಂಗಡಿ ಅಥವಾ ಕಚೇರಿ ಹೊಂದಿದ್ದರೆ, ಹೋಳಿಕಾ ದಹನದ ಭಸ್ಮವನ್ನು ಆ ಜಾಗದಲ್ಲಿ ರಹಸ್ಯವಾಗಿ ಇಡಬೇಕು. ನೀವು ಹಣ ಇಡುವ ಜಾಗದಲ್ಲೂ ಇದನ್ನು ಇಡಬಹುದು. ಇದು ನಿಮ್ಮೆಲ್ಲ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳಲು ನೆರವಾಗಲಿದೆ.

ನಿಮ್ಮ ಜಾತಕದಲ್ಲಿ ಗ್ರಹ ದೋಷವಿದ್ದಲ್ಲಿ ನೀವು ಹೋಳಿಕಾ ದಹನದ ಭಸ್ಮವನ್ನು ಬಳಸಿ ದೋಷ ನಿವಾರಣೆ ಮಾಡ್ಕೊಳ್ಳಬಹುದು. ಹೋಳಿಕಾ ದಹನದ ಭಸ್ಮವನ್ನು ಶಿವಲಿಂಗಕ್ಕೆ ಅರ್ಪಿಸಬೇಕು. ಅಲ್ದೆ, ನೀವು ಸ್ನಾನ ಮಾಡುವ ನೀರಿಗೆ ಈ ಭಸ್ಮವನ್ನು ಹಾಕಿ ಸ್ನಾನ ಮಾಡಬೇಕು. ಇದ್ರಿಂದ ಗ್ರಹ ದೋಷ ನಿವಾರಣೆಯಾಗಲಿದೆ.

ಅನಾರೋಗ್ಯದಿಂದ ಬಳಲುತ್ತಿರುವವರು ಈ ಭಸ್ಮವನ್ನು ಬಳಸಬೇಕು. ನೀವು ಹೋಳಿಕಾ ದಹನದ ಭಸ್ಮವನ್ನು ತಂದು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಏಳು ಸುತ್ತು ಸುತ್ತಿ ನಿವಾಳಿಸಿ ಮೂರು ರಸ್ತೆ ಸೇರುವ ಜಾಗಕ್ಕೆ ಹಾಕಬೇಕು. ಇಷ್ಟಲ್ದೆ ಈ ಭಸ್ಮವನ್ನು ರೋಗಿಗೆ ತಿಲಕದ ರೂಪದಲ್ಲಿ ಹಚ್ಚಬೇಕು. ಇದು ರೋಗವನ್ನು ಕಡಿಮೆ ಮಾಡಿ, ದುಷ್ಟ ಶಕ್ತಿಯಿಂದ ದೂರವಿಡುತ್ತದೆ.

ನಿಮಗೆ ದೃಷ್ಟಿ ಬಿದ್ದಿದ್ದರೆ ನೀವು ಹೋಳಿಕಾ ದಹನದ ಭಸ್ಮವನ್ನು ಬಳಸಬಹುದು. ಶನಿ, ರಾಹು ಮತ್ತು ಕೇತು ದೋಷವಿರುವವರು ಕೂಡ ನಕಾರಾತ್ಮಕ ಶಕ್ತಿಯಿಂದ ದೂರ ಇರಲು ಭಸ್ಮ ಬಳಸಬಹುದು. ಹೋಳಿಕಾ ದಹನದ ಭಸ್ಮಕ್ಕೆ ಸಾಸಿವೆ ಮತ್ತು ಉಪ್ಪನ್ನು ಸೇರಿಸಿ, ಅದನ್ನ ರಹಸ್ಯ ಸ್ಥಳದಲ್ಲಿ ಇಡಬೇಕು. ಇಷ್ಟಲ್ದೆ ಕೆಟ್ಟ ದೃಷ್ಟಿ ಬಿದ್ದಿದೆ ಎಂದಾದ್ರೆ ದೃಷ್ಟಿ ಬಿದ್ದವರ ತಲೆಯ ಮೇಲೆ ಏಳು ಬಾರಿ ಭಸ್ಮವನ್ನು ನಿವಾಳಿಸಿ ಅದನ್ನು ಮೂರು ರಸ್ತೆ ಸೇರುವ ಜಾಗಕ್ಕೆ ಹಾಕಬೇಕು.

Source link
Holika Dahan : ಹೋಳಿಕಾ ದಹನದ ಭಸ್ಮದಲ್ಲಿದೆ ಮಹಾನ್ ಶಕ್ತಿ, ಮನೆಯ ಈ ಜಾಗದಲ್ಲಿಟ್ರೆ ಹಣದ ಹೊಳೆ