Headlines

ವಿದೇಶದಲ್ಲಿ ಧಾರವಾಡದ ಯುವಕನ ಚಮತ್ಕಾರ: ಇದು ಯೋಗದಿಂದ ಬದುಕೇ ಬದಲಾದ ಕಥೆ

ವಿದೇಶದಲ್ಲಿ ಧಾರವಾಡದ ಯುವಕನ ಚಮತ್ಕಾರ: ಇದು ಯೋಗದಿಂದ ಬದುಕೇ ಬದಲಾದ ಕಥೆ


ರಾಘವೇಂದ್ರ ಕ್ಷತ್ರಿಯಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ

ಧಾರವಾಡ, ಫೆಬ್ರವರಿ 27: ಆತ 25 ವರ್ಷದ ಯುವಕ. ತಾನು ಅನಾರೋಗ್ಯಕ್ಕೆ ತುತ್ತಾಗಿದ್ದ ವೇಳೆ ವೈದ್ಯರ ಸಲಹೆ ಕಲಿತ ವಿದ್ಯೆಯೊಂದು ಇದೀಗ ಆತನನ್ನು ದೊಡ್ಡಮಟ್ಟಕ್ಕೆ ಬೆಳೆಸಿದೆ. ಇಡೀ ವಿಶ್ವವೇ ಇದೀಗ ಯೋಗದತ್ತ (ಯೋಗ) ಒಲವು ತೋರಿಸುತ್ತಿರೋವಾಗ ತಾನು ಅನಾರೋಗ್ಯದಿಂದ ಮುಕ್ತವಾಗುವುದರ ಜೊತೆಗೆ ನೂರಾರು ಜನರಿಗೆ ವಿದೇಶದಲ್ಲಿ ಯೋಗವನ್ನೂ ಕಲಿಸುತ್ತಿದ್ದಾರೆ. ಇಂದು ಯೋಗವೇ ಆತನಿಗೆ ಉದ್ಯೋಗವಾಗಿ ಪರಿವರ್ತನೆಯಾಗಿದೆ.

ಕಾಯಿಲೆಗೆ ಯೋಗವೇ ಮದ್ದು

ಧಾರವಾಡ ನಗರದ ಬೂಸಪ್ಪ ವೃತ್ತದ ಬಳಿಯ ನಿವಾಸಿಯಾಗಿರುವ ರಾಘವೇಂದ್ರ ಕ್ಷತ್ರಿಯ ಯೋಗದಲ್ಲಿ ಸಾಧನೆ ಮಾಡಿದ್ದಾರೆ. ಎಂಬಿಎ ಪದವಿ ಪಡೆದಿರುವ ಇವರಿಗೆ 2018ರಲ್ಲಿ ಅನಾರೋಗ್ಯ ಕಾಡಲಾರಂಭಿಸಿತು. ಈ ವೇಳೆ ವೈದ್ಯರಿಗೆ ತೋರಿಸಿದರೂ ಕಾಯಿಲೆ ವಾಸಿಯಾಗುವುದಿಲ್ಲ. ಈ ಸಂದರ್ಭದಲ್ಲಿ ವ್ಯಕ್ತಿ ಯೋಗ ಮಾಡುವಂತೆ ಸಲಹೆ ನೀಡಿ. ಅವತ್ತು ಶುರು ಮಾಡಿದ ಯೋಗ ಇವತ್ತು ರಾಘವೇಂದ್ರನ ಯೋಗಾಯೋಗವೇ ಬದಲಾಗುವಂತೆ ಮಾಡಿತು.

ಇದನ್ನೂ ಓದಿ: ಬೆನ್ನು ನೋವು ಬರುವುದಕ್ಕೆ ಕಾರಣವೇನು? ಯೋಗದ ಮೂಲಕ ಅದನ್ನು ಪರಿಹರಿಸಿಕೊಳ್ಳುವುದು ಹೇಗೆ?

ಮೊದಲು ಒಂದು ವರ್ಷ ಯೋಗ ಮಾಡಿ, ಅದರ ಪರ್ಫೆಕ್ಟ್ ಆದ ನಂತರ ಮತ್ತೆ ಬೇರೆ ಉದ್ಯೋಗಕ್ಕೆ ಸೇರಿದರು. ಆದರೆ ಅವರಿಗೆ ವಿಯಟ್ನಾಂಗೆ ಹೋಗುವ ಅವಕಾಶ ಸಿಕ್ಕಿತು. ಈ ವೇಳೆ ಅಲ್ಲಿಗೆ ಹೋಗಿ ಯೋಗವನ್ನು ಕಲಿಸಿಕೊಡುವುದನ್ನು ಶುರು ಮಾಡಿದರು. ಇವತ್ತು ರಾಘವೇಂದ್ರ ಯಾವ ಪರಿ ಅಲ್ಲಿ ಬೆಳೆದಿದ್ದಾರೆ ಎಂದರೆ ಆರೇಳು ನೂರು ಜನರಿಗೆ ಇವರು ಯೋಗ ಗುರುವಾಗಿದ್ದಾರೆ. ಸದ್ಯಕ್ಕೆ 300 ಜನರು ನಿತ್ಯವೂ ಇವರ ಬಳಿ ಯೋಗ ಕಲಿಯುತ್ತಿದ್ದಾರೆ. ಇದೀಗ ಯೋಗವೇ ಇವರ ಪಾಲಿನ ಉದ್ಯೋಗವಾಗಿದೆ. ವಿಯಟ್ನಾಂನಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಯೋಗಕ್ಕೆ ತುಂಬಾ ಗೌರವವಿದೆ. ಹೀಗಾಗಿ ಇದನ್ನೇ ವೃತ್ತಿ ಮಾಡಿಕೊಂಡಿರುವ ರಾಘವೇಂದ್ರ ಕಳೆದ ಹಲವು ವರ್ಷಗಳಿಂದ ಯೋಗ ಮಾಸ್ಟರ್ ಆಗಿ ವೃತ್ತಿ ಮಾಡುತ್ತಿದ್ದಾರೆ.

ಯೋಗ

ಆರಂಭದ ದಿನಗಳಲ್ಲಿ ರಾಘವೇಂದ್ರ, ಯೋಗ ತನ್ನ ಪಾಲಿಗೆ ಇಷ್ಟೊಂದು ದೊಡ್ಡ ಗೌರವ ತಂದು ಕೊಡುತ್ತೆ ಅಂದುಕೊಂಡಿರಲಿಲ್ಲ. ಆದರೆ ಯಾವಾಗ ಅವರು ವಿಯಟ್ನಾಂನಲ್ಲಿ ಯೋಗ ಕ್ಲಾಸ್ ಮಾಡಿದರೋ ಆಗ ಯೋಗ ಕಲಿಯಲು ಬರುವವರ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ.

ಯೋಗ ಕಲಿಯೋದಕ್ಕೂ ಮುನ್ನ ರಾಘವೇಂದ್ರ ದಹೂತಿ ಯುವಕನಾಗಿದ್ದ. ಸುಮಾರು 85 ಕೆಜಿಯಷ್ಟು ತೂಕವಿದ್ದ ಆತನಿಗೆ ಯೋಗ ಅನ್ನೋದು ದೊಡ್ಡ ಪ್ರಮಾಣದಲ್ಲಿ ಪರಿಣಮಿಸಿತು. ನಿತ್ಯವೂ ಯೋಗ ಮಾಡುವ ಮೂಲಕ ತನ್ನ ದೇಹದ ತೂಕವನ್ನು ಕಡಿಮೆ ಮಾಡಿಕೊಂಡು, ಅದರಿಂದ ಕೊಡುವ ಲಾಭವನ್ನು ಮನದಟ್ಟು ಮಾಡಿಕೊಂಡ ಬಳಿಕ ವಿಯಟ್ನಾಂಗೆ ಹಾರಿದ ರಾಘವೇಂದ್ರ, ಅಲ್ಲಿ ಭಾರತೀಯ ಯೋಗವನ್ನು ಕಲಿಸುತ್ತಿದ್ದಾರೆ.

ರಾಘವೇಂದ್ರ ಕ್ಷತ್ರಿಯ ಧಾರವಾಡಿಗರ ಹೆಮ್ಮೆ

ಇತ್ತೀಚಿನ ದಿನಗಳಲ್ಲಿ ಯೋಗ ವಿಶ್ವ ಮನ್ನಣೆ ಪಡೆದಿದೆ. ಮೋದಿ ಸರ್ಕಾರ ಬಂದ ಬಳಿಕ ವಿಶ್ವಮಾನ್ಯತೆಯನ್ನು ಪಡೆಯುವಲ್ಲಿ ಯೋಗ ಯಶಸ್ವಿಯಾಗಿದೆ. ಆದರೆ ಅದನ್ನು ಕಲಿಸುವವರ ಹೆಚ್ಚಿನವರು ಭಾರತೀಯರೇ ಆಗಿರೋದ್ರಿಂದ ರಾಘವೇಂದ್ರನಂಥ ಶಿಕ್ಷಕರ ಯೋಗಿಗೆ ಬೇಡಿಕೆಯಿದೆ. ನಿತ್ಯವೂ ಐದು ಗಂಟೆಗಳ ಕ್ಲಾಸ್ ನೀಡುವ ರಾಘವೇಂದ್ರನಿಗೆ ಇದೀಗ ಅದೇ ಅನ್ನ ನೀಡುವ ವೃತ್ತಿಯಾಗಿದೆ. ರಾಘವೇಂದ್ರ ಕ್ಷತ್ರಿಯ ತಮ್ಮೂರಿನ ಯುವಕ ಅನ್ನೋದು ಧಾರವಾಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.

ಇದನ್ನೂ ಓದಿ: 1 ನಿಮಿಷದಲ್ಲಿ 10 ಯೋಗದ ಆಸನ: ವಿಶ್ವ ದಾಖಲೆ ಬರೆದ ಹಾಸನದ ಬಾಲಕಿ

ಎಲ್ಲ ರೋಗಗಳಿಗೂ ಯೋಗ ಅನ್ನೋದು ಒಂದು ಮದ್ದು. ಇದು ದೈಹಿಕ ಶಿಸ್ತಿಯ ಜೊತೆಗೆ ಮಾನಸಿಕ ಒತ್ತಡಗಳನ್ನು ಕೂಡ ನಿವಾರಿಸಬಲ್ಲದು. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲ ದೇಶಗಳಲ್ಲಿ ಇದರ ಮಹತ್ವ ಹೆಚ್ಚಾಗುತ್ತಾ ಹೋಗುತ್ತದೆ. ಇಂಥ ದಿನಗಳಲ್ಲಿಯೇ ಧಾರವಾಡದ ಈ ಯುವಕ ಬೇರೆ ದೇಶದ ಯೋಗದ ಬಗ್ಗೆ ಪ್ರಚಾರ ಮಾಡದಿದ್ದರೂ ಯೋಗ ಕಲಿಕೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿರುವುದು ಸಂತಸದ ಸಂಗತಿಯೇ ಸರಿ. ಒಟ್ಟಿನಲ್ಲಿ ತನ್ನ ಆರೋಗ್ಯ ಸುಧಾರಿಸಿಕೊಳ್ಳಲು ಕಲಿತ ವಿದ್ಯೆಯೊಂದು ಇಂದು ಆತನಿಗೆ ಅನ್ನ ನೀಡುವ ಉದ್ಯೋಗವಾಗಿದ್ದು ವಿಚಿತ್ರವೇ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *