ದಳಪತಿ ವಿಜಯ್​​ಗೆ ನಟಿಯ ಜೊತೆ ಅಫೇರ್; ತ್ರಿಶಾ ಮೇಲೆ ಗೂಬೆ ಕೂರಿಸಿದ ನೆಟ್ಟಿಗರು

ದಳಪತಿ ವಿಜಯ್​​ಗೆ ನಟಿಯ ಜೊತೆ ಅಫೇರ್; ತ್ರಿಶಾ ಮೇಲೆ ಗೂಬೆ ಕೂರಿಸಿದ ನೆಟ್ಟಿಗರು


ದಳಪತಿ ವಿಜಯ್ (ವಿಜಯ್) ಅವರ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಗೆ ಬೇರೆ ನಟಿಯ ಜೊತೆ ಸಂಬಂಧವಿದೆ ಎಂದು ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ವಿಜಯ್ ಹಾಗೂ ಸಂಗೀತಾ ಹಲವು ವರ್ಷಗಳಿಂದ ದೂರವೇ ವಾಸವಾಗಿದ್ದಾರೆ. ಈಗ ಅವರು ಏಕಾಏಕಿ ಕೌಟುಂಬಿಕ ನ್ಯಾಯಲಕ್ಕೆ ಅರ್ಜಿ ಸಲ್ಲಿಸಿ ಡಿವೋರ್ಸ್ ಕೇಳಿದ್ದಾರೆ. ಈ ನಟಿ ತ್ರಿಶಾ ಮೇಲೆ ಎಲ್ಲರೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ವಿಜಯ್ ಹಾಗೂ ಸಂಗೀತಾ ಅವರು 1999ರ ಆಗಸ್ಟ್ 25ರಂದು ವಿವಾಹ ಆದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜೇಸನ್ ಸಂಜಯ್ ಹಾಗೂ ದಿವ್ಯಾ ಶಾಶಾ ಎಂಬುದು ಮಕ್ಕಳ ಹೆಸರು. ಸಂಗೀತಾ ಅವರು ಲಂಡನ್ ಮೂಲದ ಉದ್ಯಮಿಯ ಮಗಳು. 1996ರಲ್ಲಿ ರಿಲೀಸ್ ಆದ ವಿಜಯ್ ನಟನೆಯ ‘ಪೂವೆ ಉನಕ್ಕಗ’ ಸಿನಿಮಾ ನೋಡಿ ಸಂಗೀತಾ ಇಂಪ್ರೆಸ್ ಆದರು. ಅವರು ಲಂಡನ್ ಅಲ್ಲಿ ಕುಳಿತುಕೊಂಡೇ ವಿಜಯ್ ಗೆ ಪತ್ರ ಬರೆಯುತ್ತಿದ್ದರು. ಆ ಬಳಿಕ ಇವರ ಮಧ್ಯೆ ಪ್ರೀತಿ ಮೂಡಿತು. ಈಗ ವಿಜಯ್ ಹಾಗೂ ಸಂಗೀತಾ ಸಂಬಂಧ ವಿಚ್ಛೇದನಕ್ಕೆ ಬಂದು ನಿಂತಿದೆ.

ಬೇರೆ ಆಗುತ್ತಿರುವುದಕ್ಕೆ ಕಾರಣ ಏನು ಎಂದು ಸಂಗೀತಾ ಅವರೇ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ವಿಜಯ್ ಗೆ ನಟಿಯ ಜೊತೆ ಅನೈತಿಕ ಸಂಬಂಧವಿದೆ ಎಂದು ಅವರು ಆರೋಪಿಸಿದ್ದಾರೆ. ಇದು ತ್ರಿಶಾ ಇರಬಹುದು ಎಂದು ಎಲ್ಲರೂ ಇದ್ದಾರೆ. ಈ ಬಗ್ಗೆ ಸಾಕಷ್ಟು ಮೀಮ್‌ಗಳು ಹರಿದಾಡಿವೆ.

ಇದನ್ನೂ ಓದಿ: ಡೇಟಿಂಗ್ ವದಂತಿ; ಎಲ್ಲರಿಗೂ ಗೊಂದಲ ಮೂಡಿಸಿದ ತ್ರಿಶಾ ಕೃಷ್ಣನ್

ವಿಜಯ್ ಹಾಗೂ ತ್ರಿಶಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಕೆಮಿಸ್ಟ್ರಿ ತೆರೆಮೇಲೆ ಗಮನ ಸೆಳೆದಿದೆ. ಇತ್ತೀಚಿನ ದಿನಗಳಲ್ಲಿ ರಿಲೀಸ್ ಆದ ‘ಲಿಯೋ’ ಸಿನಿಮಾದಲ್ಲೂ ವಿಜಯ್ ಹಾಗೂ ತ್ರಿಶಾ ಒಟ್ಟಾಗಿ ನಟಿಸಿದ್ದಾರೆ. ಇವರ ಗೆಳೆತನವನ್ನು ಕೆಲವರು ತಪ್ಪಾಗಿ ಭಾವಿಸಿದ್ದಾರೆ. ಈ ಕಾರಣದಿಂದಲೇ ಸಂಗೀತಾ ಆರೋಪದ ಬಳಿಕ ಎಲ್ಲರೂ ತ್ರಿಶಾ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *