ಕೊಲಂಬೊ: ಇಂಗ್ಲೆಂಡ್ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಸೋಲನುಭವಿಸಿದ ನ್ಯೂಜಿಲೆಂಡ್, ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ನೇರವಾಗಿ ಸೆಮಿಫೈನಲ್ ಪ್ರವೇಶಿಸುವ ಅವಕಾಶ ತಪ್ಪಿಸಿಕೊಂಡಿದೆ. ತಂಡ ಈಗ ತನ್ನ ಸೆಮಿಫೈನಲ್ ಸ್ಥಾನಕ್ಕಾಗಿ ಪಾಕಿಸ್ತಾನ-ಶ್ರೀಲಂಕಾ ಪಂದ್ಯವನ್ನು ಅವಲಂಬಿಸಬೇಕಿದೆ. ಮತ್ತೊಂದೆಡೆ ಸೂಪರ್-8 ಹಂತದಲ್ಲಿ ಎಲ್ಲಾ 3 ಪಂದ್ಯಗಳಲ್ಲೂ ಗೆದ್ದ ಇಂಗ್ಲೆಂಡ್, ಅಜೇಯವಾಗಿ ಸೆಮಿಫೈನಲ್ ತಲುಪಿತು.

ಮೊದಲು ಬ್ಯಾಟ್ ಮಾಡಿದ ಕಿವೀಸ್ 7 ವಿಕೆಟ್‌ಗೆ 159 ರನ್ ಕಲೆಹಾಕಿತು. ಪವರ್-ಪ್ಲೇನಲ್ಲಿ ತಂಡ 54 ರನ್ ಗಳಿಸಿದರೂ ಬಳಿಕ ಕುಸಿಯಿತು. ಟಿಮ್ ಸೀಫರ್ಟ್ 35, ಫಿನ್ ಆ್ಯಲೆನ್ 29 ರನ್‌ಗೆ ಔಟಾದರು. ಬಳಿಕ ತಂಡಕ್ಕೆ ನೆರವಾಗಿದ್ದು ಗ್ಲೆನ್ ಫಿಲಿಪ್ಸ್. ಅವರು 28 ಎಸೆತಕ್ಕೆ 39 ರನ್ ಸಿಡಿಸಿದರು.

ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ಒಂದು ಹಂತದಲ್ಲಿ ಸೋಲಿನ ಭೀತಿಯಲ್ಲಿತ್ತು. 2 ರನ್‌ಗೆ 2 ವಿಕೆಟ್ ಕಳೆದುಕೊಂಡ ತಂಡ, ಬಳಿಕ ನಿಧಾನವಾಗಿ ಪುಟಿದೆದ್ದಿತು. ತಂಡಕ್ಕೆ ಕೊನೆ 3 ಓವರ್‌ಗೆ 43 ರನ್ ಬೇಕಿತ್ತು. ವಿಲ್ ಜ್ಯಾಕ್ಸ್-ರಿಹಾನ್ ಅಹ್ಮದ್ ಜೋಡಿ 18ನೇ ಓವರ್‌ನಲ್ಲಿ 22 ಹಾಗೂ 19ನೇ ಓವರ್‌ನಲ್ಲಿ 16 ರನ್ ದೋಚಿ ತಂಡಕ್ಕೆ ಗೆಲುವು ತಂದುಕೊಟ್ಟಿತು. 19.3 ಓವರ್‌ಗಳಲ್ಲಿ ಇಂಗ್ಲೆಂಡ್ ಗೆಲುವಿನ ದಡ ಸೇರಿತು. ಜ್ಯಾಕ್ಸ್ 18 ಎಸೆತಕ್ಕೆ ಔಟಾಗದೆ 32, ರೆಹಾನ್ ಅಹ್ಮದ್ 7 ಎಸೆತಕ್ಕೆ ಔಟಾಗದೆ 19 ರನ್ ಸಿಡಿಸಿದರು.

–64 ರನ್ ಅಥವಾ 13.1 ಓವರ್‌ನಲ್ಲಿ ಚೇಸ್ ಮಾಡಿ ಗೆದ್ರೆ ಪಾಕ್ ಸೆಮಿಗೆ

ಪಲ್ಲೆಕೆಲೆ: ಇಂಗ್ಲೆಂಡ್ ವಿರುದ್ಧ ಕಿವೀಸ್ ಸೋಲುವುದರೊಂದಿಗೆ ಪಾಕಿಸ್ತಾನದ ಸೆಮಿಫೈನಲ್ ಆಸೆ ಜೀವಂತವಾಗಿ ಉಳಿದಿದೆ. ಶನಿವಾರ ಶ್ರೀಲಂಕಾ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಪಾಕ್ ದೊಡ್ಡ ಅಂತರದಲ್ಲಿ ಗೆಲ್ಲಬೇಕಿದ್ದರೆ, ಸೋತರೆ ಹೊರಬೀಳಲಿದೆ.

ಕಿವೀಸ್ 3 ಪಂದ್ಯದಲ್ಲಿ 3 ಅಂಕ ಗಳಿಸಿದ್ದು, +1.390 ನೆಟ್ ರನ್‌ರೇಟ್ ಹೊಂದಿದೆ. ಪಾಕಿಸ್ತಾನ ಬಳಿ 2 ಪಂದ್ಯದಲ್ಲಿ 1 ಅಂಕ ಹಾಗೂ -0.460 ನೆಟ್ ರನ್‌ರೇಟ್ ಇದೆ. ಕಿವೀಸ್‌ನ ಹಿಂದಿಕ್ಕಿ ಪಾಕ್ ಸೆಮೀಸ್ ತಲುಪಬೇಕಿದ್ದರೆ, ಶ್ರೀಲಂಕಾ ವಿರುದ್ಧ ಪಾಕ್ ಮೊದಲು ಬ್ಯಾಟ್ ಮಾಡಿ 64 ರನ್ ಅಂತರದಲ್ಲಿ ಗೆಲ್ಲಬೇಕು ಅಥವಾ ಲಂಕಾ ನೀಡುವ ಗುರಿಯನ್ನು 13.1 ಓವರ್‌ಗಳಲ್ಲಿ ಚೇಸ್ ಮಾಡಬೇಕು. ಹೀಗಾದರೆ ಮಾತ್ರ ಪಾಕ್ ಸೆಮೀಸ್ ತಲುಪಬಹುದು. ಅದಕ್ಕಿಂತ ಕಡಿಮೆ ಅಂತರದಲ್ಲಿ ಗೆದ್ದರೆ ಅಥವಾ ಸೋತರೆ ಪಾಕ್ ಹೊರಬೀಳಲಿದೆ. ಆಗ ಕಿವೀಸ್ ಸೆಮೀಸ್ ತಲುಪಲಿದೆ.

ನಾಳೆ ಭಾರತ-ವಿಂಡೀಸ್ ‘ಕ್ವಾರ್ಟರ್ ಫೈನಲ್’ ಪಂದ್ಯ!

ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧ ವಿಂಡೀಸ್ ಸೋತು, ಜಿಂಬಾಬ್ವೆ ವಿರುದ್ಧ ಭಾರತ ಗೆದ್ದಿರುವುದರಿಂದ 1ನೇ ಗುಂಪಿನ ಸೆಮಿಫೈನಲ್ ಲೆಕ್ಕಾಚಾರ ಸುಲಭವಾಗಿದೆ.

ದ.ಆಫ್ರಿಕಾ 2 ಗೆಲುವಿನೊಂದಿಗೆ ಈಗಾಗಲೇ ಸೆಮೀಸ್ ಸ್ಥಾನ ಖಚಿತಪಡಿಸಿಕೊಂಡಿದ್ದು, ಜಿಂಬಾಬ್ವೆ ಸತತ 2 ಸೋಲಿನೊಂದಿಗೆ ಹೊರಬಿದ್ದಿದೆ. ಮತ್ತೊಂದು ಸ್ಥಾನಕ್ಕೆ ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವೆ ಪೈಪೋಟಿಯಿದೆ. ಅಂದರೆ, ಭಾನುವಾರ ನಡೆಯಲಿರುವ ಭಾರತ-ವಿಂಡೀಸ್ ಪಂದ್ಯ ವರ್ಚುವಲ್ ‘ಕ್ವಾರ್ಟರ್ ಫೈನಲ್’ ಎನಿಸಿಕೊಳ್ಳಲಿದೆ.

ಅದರಲ್ಲಿ ಗೆದ್ದ ತಂಡ ಸೆಮಿಫೈನಲ್ ತಲುಪಲಿದ್ದು, ಸೋತ ತಂಡ ಹೊರಬೀಳಲಿದೆ. ಒಂದು ವೇಳೆ ಆ ಪಂದ್ಯ ಮಳೆಯಿಂದ ರದ್ದುಗೊಂಡರೆ ಉಭಯ ತಂಡಗಳು ತಲಾ 1 ಅಂಕ ಗಳಿಸಲಿದ್ದು, ನೆಟ್ ರನ್‌ರೇಟ್ ಆಧಾರದಲ್ಲಿ ಭಾರತವನ್ನು ಹಿಂದಿಕ್ಕಿ ವಿಂಡೀಸ್ ಸೆಮಿಫೈನಲ್‌ಗೇರಲಿದೆ. ವಿಂಡೀಸ್ +1.791, ಭಾರತ 000 ನೆಟ್ ರನ್‌ರೇಟ್ ಹೊಂದಿದೆ.

Source link
ಇಂಗ್ಲೆಂಡ್ ಎದುರು ಕಿವೀಸ್ ಸೋಲುತ್ತಿದ್ದಂತೆಯೇ ತಲೆ ಕೆಳಗಾದ ಸೆಮೀಸ್ ಲೆಕ್ಕಾಚಾರ! ಪಾಕ್ ಸೆಮೀಸ್‌ಗೇರುತ್ತಾ?