Actor Darshan Jail Update ಕೋಡಿಮಠ ಶ್ರೀ ಹೇಳಿದ್ರು ದರ್ಶನ್ ಭವಿಷ್ಯ! ರಾಜಕೀಯದಲ್ಲಿ ಕಾಟೇರನಿಗಿದೆಯಾ ವೈಭೋಗ? | Kodi Math Seer Predicts Actor Darshan Jail Future Hints At Delay And Political Entry Speculation Kvn

Actor Darshan Jail Update ಕೋಡಿಮಠ ಶ್ರೀ ಹೇಳಿದ್ರು ದರ್ಶನ್ ಭವಿಷ್ಯ! ರಾಜಕೀಯದಲ್ಲಿ ಕಾಟೇರನಿಗಿದೆಯಾ ವೈಭೋಗ? | Kodi Math Seer Predicts Actor Darshan Jail Future Hints At Delay And Political Entry Speculation Kvn


ನಟ ದರ್ಶನ್ ಅವರ ಜೈಲು ವಾಸದ ಬಗ್ಗೆ ಹಲವು ಭವಿಷ್ಯಗಳು ಕೇಳಿಬರುತ್ತಿರುವಾಗ, ಇದೀಗ ಕೋಡಿ ಮಠದ ಶ್ರೀಗಳು ಮೊದಲ ಬಾರಿಗೆ ಮಾತನಾಡಿದ್ದಾರೆ. ದರ್ಶನ್ ಮೊದಲು ಜೈಲಿನಿಂದ ಹೊರಬರಲಿ, ನಂತರ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡುತ್ತೇನೆ ಎಂದು ಶ್ರೀಗಳು ಮಾರ್ಮಿಕವಾಗಿ ನುಡಿದಿದ್ದಾರೆ.  

ನಟ ದರ್ಶನ್ ಜೈಲಿಗೆ ಹೋದ ಮೇಲೆ ದಾಸನ ಬಗ್ಗೆ ಭವಿಷ್ಯ ಹೇಳೋರು ಸಾಕಷ್ಟು ಜನ ಹುಟ್ಟಿಕೊಂಡಿದ್ದಾರೆ. ಅವರೆಲ್ಲ ಹೇಳಿದ್ದು ಎಷ್ಡು ನಿಜವಾಗುತ್ತೆ? ಎಷ್ಟು ಸುಳ್ಳಾಗುತ್ತೋ ಅವರಿಗೆ ಮಾತ್ರ ಗೊತ್ತು? ಆದ್ರೆ ಈಗ ದಾಸನ ಮುಂದಿನ ಭವಿಷ್ಯದ ಬಗ್ಗೆ ಕೋಡಿ ಮಠ ಶ್ರೀಗಳು ಮಾತನಾಡಿದ್ದಾರೆ. ಹಾಗಾದ್ರೆ ಕೋಡಿ ಶ್ರೀಗಳ ಕಾಲಜ್ಞಾನದ ಭವಿಷ್ಯದಲ್ಲಿ ದರ್ಶನ್ ಜೈಲು ವಾಸ ಏನಾಗುತ್ತೆ? ಶ್ರೀಗಳ ಪ್ರಕಾರ ದಾಸ ರಾಜಕೀಯಕ್ಕೆ ಬರೋದು ನಿಜ ಆಗುತ್ತಾ? ನೋಡೋಣ ಬನ್ನಿ.

ದರ್ಶನ್ ರಿಲೀಸ್ ಯಾವಾಗ?

ಅಭಿಮಾನಿಗಳ ಪಾಲಿನ ಡಿ-ಬಾಸ್. ಬಾಕ್ಸ್ ಆಫೀಸ್ ಸುಲ್ತಾನ. ಸ್ಯಾಂಡಲ್‌ವುಡ್‌ ದಾಸ ದರ್ಶನ್ ಜೈಲು ಸೇರಿ ವರ್ಷ ಆಗ್ತಾ ಬಂತು. ಲಕ್ಷಾಂತರ ಫ್ಯಾನ್ಸ್ ತಮ್ಮ ನೆಚ್ಚಿನ ನಟನಿಗಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾರೆ. ದೇವಸ್ಥಾನಗಳಲ್ಲಿ ಪೂಜೆ, ಹರಕೆ, ಜಪ ಹೀಗೆ ದಾಸನ ಬಿಡುಗಡೆಗಾಗಿ ಪ್ರಾರ್ಥನೆಗಳು ನಿಂತಿಲ್ಲ. ಆದರೆ, ಆ ದಿನ ಯಾವಾಗ? ಆ ಕ್ಷಣ ಯಾವಾಗ? ಈ ಪ್ರಶ್ನೆಗೆ ಈಗ ಕಾಲಜ್ಞಾನಿ ಕೋಡಿಮಠ ಶ್ರೀಗಳು ಉತ್ತರ ಕೊಟ್ಟಿದ್ದಾರೆ.

ಯೆಸ್, ನಟ ದರ್ಶನ್ ಜೈಲಿನಿಂದ ಹೊರ ಬರಲಿ ಅಂತ ಜಪಿಸುತ್ತಿರೋ ಫ್ಯಾನ್ಸ್​ ಲಕ್ಷಾಂತರ ಮಂದಿ. ಆದ್ರೆ ಆ ದಿನ ಕ್ಷಣ ಯಾವಾಗ ಬರುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಕೆಲ ಕಾಲಜ್ಞಾನಿಗಳು ದಾಸನ ಜೈಲು ವಾಸದ ಅಂತ್ಯದ ಬಗ್ಗೆ ಆಗಾಗ ಮಾತನಾಡಿದ್ದೂ ಇದೆ. ಇದೀಗ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮೊದಲ ಬಾರಿಗೆ ಮಾತನಾಡಿದ್ದಾರೆ.

ರಾಜಕೀಯ ಆಮೇಲೆ ಮೊದಲು ಜೈಲಿನಿಂದ ಬರಲಿ!

ಯೆಸ್, ನಟ ದರ್ಶನ್ ಜೈಲು ವಾಸದ ಅಂತ್ಯ ಯಾವಾಗ ಅನ್ನೋದು ಯಾರಿಗೂ ಊಹಿಸಲಾಗುತ್ತಿಲ್ಲ. ಯಾಕಂದ್ರೆ ಈ ಪ್ರಕರಣದ ವಿಚಾರಣೆ ಇನ್ನು ಟ್ರಯಲ್​ ಹಂತದಲ್ಲೇ ಇದೆ. ಹೀಗಾಗಿ ಪ್ರಕರಣ ನ್ಯಾಯಾಲಯದಲ್ಲಿದೆ. ನಾವು ಮಾತನಾಡೋದು ಸರಿ ಅಲ್ಲ ಎಂದಿರೋ ಶ್ರೀಗಳು, ದರ್ಶನ್ ಮೊದಲು ಜೈಲಿನಿಂದ ಹೊರ ಬರಲಿ ಆ ನಂತರ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡುತ್ತೇನೆ ಅಂತ ಮಾರ್ಮಿಕವಾಗಿ ಹೇಳಿದ್ದಾರೆ.

ನಟ ದರ್ಶನ್ ಮೊದಲು ಜೈಲಿನಿಂದ ಹೊರ ಬರಲಿ ಅಂತ ಕೋಡಿ ಮಠ ಶ್ರೀಗಳು ಹೇಳಿದ್ದನ್ನ ಕೇಳಿದ್ರೆ, ದರ್ಶನ್‌ಗೆ ಸದ್ಯಕ್ಕೆ ಜೈಲಿನಿಂದ ಹೊರ ಬರೋ ಹಾಗೆ ಕಾಣಿಸ್ತಿಲ್ಲ ಅನ್ನಿಸುತ್ತೆ. ಆದ್ರೆ ಕೆಲ ಜ್ಯೋತಿಷಿಗಳು ನಟ ದರ್ಶನ್ ಇನ್ನು ಆರು ತಿಂಗಳಲ್ಲಿ ಹೊರ ಬರುತ್ತಾರೆ ಅಂತ ಹೇಳುತ್ತಲೇ ಬರುತ್ತಿದ್ದಾರೆ. ಆದ್ರೆ ಈಗ ಕೋಡಿ ಶ್ರೀ ಹೇಳಿಕೆ ದಾಸನ ಫ್ಯಾನ್ಸ್​​ಗೆ ಹೊಸ ತಲೆನೋವು ತಂದಿದೆ.

ಜೈಲಿನ ಅಂಧಕಾರದಿಂದ ಹೊರಬಂದು, ಮತ್ತೆ ಬೆಳ್ಳಿ ಪರದೆಯ ಮೇಲೆ ದರ್ಶನ್ ಅಬ್ಬರಿಸುವುದನ್ನು ನೋಡಲು ಡಿ ಬಳಗ ಕಾಯ್ತಾ ಇದೆ. ಹೀಗಾಗಿ ಫ್ಯಾನ್ಸ್​ ಪ್ರಾರ್ಥನೆ ಫಲಿಸುತ್ತಾ? ಕಾನೂನಿನ ಸಂಕೋಲೆ ಕಳಚುವ ಆ ಸುದಿನ ಅತೀ ಶೀಘ್ರದಲ್ಲೇ ಬರಲಿದೆಯೇ ಎಂಬುದು ಸದ್ಯದ ಕುತೂಹಲ.



Source link

Leave a Reply

Your email address will not be published. Required fields are marked *