ಬೆಂಗಳೂರು, ಫೆ.28: ಬೆಂಗಳೂರು ಕಾಲೇಜು ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಇದೀಗ ಮಹತ್ವದ ವಿಡಿಯೋವೊಂದು ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಹುಡುಗಿಯರ ಜೊತೆಗೆ ಪಾರ್ಟಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ವಿಲ್ಲಾ ಪಾರ್ಟಿಯ ಎಕ್ಸ್‌ಕ್ಲೂಸಿವ್ ದೃಶ್ಯ ಲಭ್ಯವಾಗಿದೆ. ಅಮೃತಹಳ್ಳಿ ವಿಲ್ಲಾ ಪಾರ್ಟಿಯಲ್ಲಿ ಆರೋಪಿ ಡಿಕ್ಸನ್ ಸಂತ್ರಸ್ತೆ ಇದ್ದ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಜೊತೆ ಜೋರಾಗಿ ಮ್ಯೂಸಿಕ್ ಹಾಕಿ ಈ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಐವರು ಯುವತಿಯರು ಹಾಗೂ ಆರೋಪಿಗಳು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಈ ಪಾರ್ಟಿಯ ನಂತರ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾಳೆ. ಯುವತಿಯರನ್ನ ಪುಸಲಾಯಿಸಿ ಅವರ ಜೊತೆಗೆ ಸ್ನೇಹ ಬೆಳೆಸುವುದು ನಂತರ ಅವರನ್ನ ಕರ್ಕೊಂಡು ಬರೋದು ಕುಡಿಸಿ, ಅತ್ಯಾಚಾರ ಮಾಡುವುದು ಎಂದರು. ಇನ್ನು ಈ ಪಾರ್ಟಿಯಲ್ಲಿ ಎಂಟು ಮಂದಿ ಭಾಗವಹಿಸಿದ್ರು ಐದು ಮಂದಿ ಹುಡುಗಿಯರು ಮೂವರು ಹುಡುಗರು ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಈ ಪಾರ್ಟಿಯಲ್ಲಿ ಭಾಗವಹಿಸಿದ್ದ ಅನಿರುದ್ಧ ಇದೀಗ ಪೊಲೀಸರ ವಶದಲ್ಲಿ ಇದ್ದಾನೆ. ಈತ ದಾವಣಗೆರೆಯಲ್ಲಿ ಕಾಂಟ್ರಾಕ್ಟರ್ ಕೆಲಸ ಮಾಡುತ್ತಿರುವುದನ್ನು ಹೇಳಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ