ವನೀಝಾ ಜೊತೆ 4ನೇ ಮದುವೆಗೆ ಸಜ್ಜಾದ್ರಾ ಸಾನಿಯಾ ಮಿರ್ಜಾ ಮಾಜಿ ಪತಿ ಮಲ್ಲಿಕ್? ಯಾರೀಕೆ?

ವನೀಝಾ ಜೊತೆ 4ನೇ ಮದುವೆಗೆ ಸಜ್ಜಾದ್ರಾ ಸಾನಿಯಾ ಮಿರ್ಜಾ ಮಾಜಿ ಪತಿ ಮಲ್ಲಿಕ್? ಯಾರೀಕೆ?

ವನೀಝಾ ಜೊತೆ 4ನೇ ಮದುವೆಗೆ ಸಜ್ಜಾದ್ರಾ ಸಾನಿಯಾ ಮಿರ್ಜಾ ಮಾಜಿ ಪತಿ ಮಲ್ಲಿಕ್? ಯಾರೀಕೆ?

ವನೀಝಾ ಜೊತೆ 4ನೇ ಮದುವೆಗೆ ಸಜ್ಜಾದ್ರಾ ಸಾನಿಯಾ ಮಿರ್ಜಾ ಮಾಜಿ ಪತಿ ಮಲ್ಲಿಕ್? ಯಾರೀಕೆ?, ಸದ್ಯ ಸನಾ ಜಾವೇದ್ ಜೊತೆಗಿನ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಮಾಡೆಲ್ ಜೊತೆ ಮಲ್ಲಿಕ್ ಹೆಸರು ಕೇಳಿಬರುತ್ತಿದೆ.

ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಮದುವೆ ಇದೀಗ ಸಾಮಾನ್ಯವಾಗಿ ಬಿಟ್ಟಿದೆ. ಮದುವೆ ಎಷ್ಟೇ ಅದ್ದೂರಿ ಮಾಡಿದರೂ ಕುತೂಹಲ ಕಡಿಮೆಯಾಗಿದೆ. ಕಾರಣ ಶೋಯೆಬ್ ಮಲ್ಲಿಕ್ ಈಗಾಗಲೇ ಮೂರು ಮದುವೆಯಾಗಿದ್ದಾರೆ. ಇದೀಗ ಮೂರನೇ ಸಂಸಾರದಲ್ಲೂ ಬಿರುಗಾಳಿ ಎದ್ದಿದೆ ಅನ್ನೋ ಮಾತು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ನಾಲ್ಕನೇ ಮದುವೆ ಮಾತುಗಳು ಬಲವಾಗಿ ಬೀಸುತ್ತಿದೆ.

ಶೋಯೆಬ್ ಮಲ್ಲಿಕ್ ಹಾಗೂ ಸನಾ ಜಾವೇದ್ ಸಂಸಾರ ನೆಟ್ಟಗಿಲ್ಲ. ಇಬ್ಬರು ದೂರವಾಗಿದ್ದಾರೆ ಅನ್ನೋ ಮಾತುಗಳ ನಡುವೆ ಶೋಯೆಬ್ ಮಲ್ಲಿಕ್ ಹೆಸರು ಪಾಕಿಸ್ತಾನದ ಮಾಡೆಲ್ ಹಾಗೂ ನಟಿ ವನೀಝಾ ಸತ್ತಾರ್ ಜೊತೆ ಥಳುಕು ಹಾಕಿಕೊಂಡಿದೆ. ಈ ಯುವ ನಟಿಯೊಂದಿಗೆ ಶೋಯೆಬ್ ಮಲ್ಲಿಕ್ ಮದುವೆಯಾಗಲಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ.

ಪಾಕಿಸ್ತಾನ ಪ್ರತಿಭಾವಂತ ನಟಿಯಾಗಿ ವನೀಝ್ ಸತ್ತಾರ್ ಗುರುತಿಸಿಕೊಂಡಿದ್ದಾರೆ. ಪಾಕಿಸ್ತಾನದ ಉದಯೋನ್ಮುಖ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಲಾಡ್ಲಿ ಅನ್ನೋ ಪಾಕಿಸ್ತಾನ ಧಾರವಾಹಿಯಲ್ಲಿ ವನೀಝಾ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಈಕೆಯ ಪಾತ್ರ ಪಾಕಿಸ್ತಾನದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಶೋಯೆಬ್ ಮಲ್ಲಿಕ್ ಹಾಗೂ ವನೀಝಾ ಸತ್ತಾರ್ ಮದುವೆ ಶೀಘ್ರದಲ್ಲೇ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿದಾಡುತ್ತಿದೆ. ಫೆ.27ರಂದು ಈ ಜೋಡಿ ರಹಸ್ಯವಾಗಿ ಮದುವೆಯಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳು ವೈರಲ್ ಆಗಿತ್ತು. ಆದರೆ ಅಧಿಕೃತ ಹೇಳಿಕೆ, ಪೋಸ್ಟ್ ಬಹಿರಂಗವಾಗಿಲ್ಲ.

ಶೋಯೆಬ್ ಮಲ್ಲಿಕ್ ಈಗಾಗಲೇ ಮೂರು ಮದುವೆಯಾಗಿದ್ದಾರೆ. ಮೊದಲು ಆಯೇಷಾ ಸಿದ್ದಿಕಿ ಜೊತೆ ಶೋಯೆಬ್ ಮಲ್ಲಿಕ್ ವಿವಾಹವಾಗಿದ್ದರು. ಬಳಿಕ 2010ರಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಜೊತೆ ವಿವಾಹವಾಗಿದ್ದರು. 2024ರಲ್ಲಿ ಅದಿಕೃತವಾಗಿ ಡಿವೋರ್ಸ್ ಪಡೆದಿದ್ದರು. ಇದಾದ ಕೆಲವೇ ದಿನಗಳಲ್ಲಿ ಸನಾ ಜಾವೇದ್ ಜೊತೆ ಶೋಯೆಬ್ ಮಲ್ಲಿಕ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ನಾಲ್ಕನೇ ಮದುವೆ ಸದ್ದು ಜೋರಾಗಿದೆ.

ಕಳೆದ ಕೆಲ ದಿನಗಳಿಂದ ಸನಾ ಜಾವೇದ್ ಜೊತೆಗಿನ ದಾಂಪತ್ಯ ಜೀವನ ಅಂತ್ಯಗೊಂಡಿದೆ ಎಂಬ ಪೋಸ್ಟ್‌ಗಳು ಹರಿದಾಡಿತ್ತು. ಇದೇ ವೇಳೆ ನಾಲ್ಕನೇ ಮದುವೆಗೆ ಸಜ್ಜಾಗುತ್ತಿದ್ದು, ವನೀಝಾ ಜೊತೆ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Source link

Leave a Reply

Your email address will not be published. Required fields are marked *