ನವಂಬರ್, 28: ಇರಾನ್ ಯುದ್ಧ (ಇರಾನ್ ಯುದ್ಧ) ಆರಂಭವಾಗಿದೆ. ಇಸ್ರೇಲ್ ರಕ್ಷಣಾ ಸಚಿವರು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಇರಾನ್ ಮೇಲೆ ದಾಳಿ ನಡೆಸಿದ್ದೇವೆ ಎಂದು ಘೋಷಿಸಿದ್ದಾರೆ. ಇಷ್ಟು ದಿನ ಇಸ್ರೇಲ್‌ಗೆ ಬಾಹ್ಯ ಬೆಂಬಲ ನೀಡುತ್ತಿದ್ದ ಅಮೆರಿಕ ಇದೀಗ ನೇರವಾಗಿ ಅಖಾಡಕ್ಕಿಳಿದಿದೆ. ಹೀಗಾಗಿ, ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಯುದ್ಧ ಆರಂಭವಾಗಿದೆ. ಇದು ಈಗಾಗಲೇ ಮೂರನೇ ಯುದ್ಧವಾಗಿದೆ. ರಷ್ಯಾ ಮತ್ತು ಉಕ್ರೇನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಯುದ್ಧ ನಡೆಯಲಿರುವಾಗಲೇ ಇರಾನ್ ಮೇಲಿನ ಯುದ್ಧ ಕೂಡ ಆರಂಭವಾಗಿದೆ.
ವಿಶೇಷವೆಂದರೆ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಭಾರತ ರಷ್ಯಾದ ಪರವಾಗಿ ಅಮೆರಿಕ ಉಕ್ರೇನ್ ಪರವಾಗಿದೆ. ಹಾಗೆಂದು ಭಾರತವೇನೂ ತಾನು ಉಕ್ರೇನ್ ವಿರುದ್ಧವೆಂದು ಹೇಳಿಕೊಂಡಿಲ್ಲ. ಭಾರತ ಕೂಡ ಉಕ್ರೇನ್ ಜೊತೆಗೆ ಉತ್ತಮ ಸಂಬಂಧ ಹೊಂದಿದೆ, ಶಾಂತಿಯುತವಾದ ಮಾತುಕತೆಯ ಮೂಲಕ ಪರಿಹಾರವನ್ನು ಕರೆ ನೀಡಲಾಗುತ್ತಿದೆ. ಆದರೂ ಉಕ್ರೇನ್‌ಗೆ ರಷ್ಯಾದ ನಾಯಕ ಪುಟಿನ್ ಜೊತೆ ಮೋದಿ ಹೆಚ್ಚು ಆಪ್ತ ಸಂಬಂಧ ಹೊಂದಿದ್ದರು. ಇದೆ ಭಾರತ ಅಮೆರಿಕದ ಕೆಂಗಣ್ಣಿಗೆ ತುತ್ತಾಗಿತ್ತು.
ಇದನ್ನೂ ಓದಿ: ನನ್ನನ್ನು ಕೊಲೆ ಮಾಡಿದ್ರೆ, ಇರಾನ್ ವಿಶ್ವದ ಭೂಪಟದಿಂದಲೇ ಅಮೆರಿಕ ಅಳಿಸಿ ಹಾಕುತ್ತೆ: ಟ್ರಂಪ್
ಇನ್ನು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಯುದ್ಧದಲ್ಲೂ ಭಾರತ ಅಫ್ಘಾನಿಸ್ತಾನದ ಪರವಾಗಿದೆ. ಅಮೆರಿಕ ಪಾಕಿಸ್ತಾನದ ಪರವಾಗಿದೆ. ಇದನ್ನೂ ಕೂಡ ಭಾರತ ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೂ ಅಫ್ಘಾನಿಸ್ತಾನದ ನಾಯಕರ ಜೊತೆ ಪ್ರಧಾನಿ ಮೋದಿ ಉತ್ತಮ ಸಂಬಂಧ, ಟ್ರಂಪ್ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದಾರೆ. ಈ ಎರಡೂ ಯುದ್ಧಗಳಲ್ಲಿ ಭಾರತ ವಿಶ್ವದ ದೊಡ್ಡಣ್ಣನಾದ ಅಮೆರಿಕದ ವಿರುದ್ಧ ನಿಂತಿದೆ. ಆದರೆ, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಲ್ಲಿ ಭಾರತ ಮತ್ತು ಅಮೆರಿಕವೆರಡೂ ಒಟ್ಟಾಗಿ ಇಸ್ರೇಲ್ಗೆ ಬೆಂಬಲ ನೀಡುತ್ತಿವೆ. ಇರಾನ್ ಪರವಾಗಿರುವ ದೇಶಗಳ ಸಂಖ್ಯೆ ಬಹಳ ಕಡಿಮೆಯಿದೆ.
ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ನಾವು ಇರಾನ್ ಮೇಲೆ ಯುದ್ಧ ಸಾರಿದ್ದೇವೆ. ಅಮೆರಿಕನ್ನರನ್ನು ರಕ್ಷಿಸುವುದು ನಮ್ಮ ಉದ್ದೇಶ. ಹೀಗಾಗಿ ಇರಾನ್‌ನಲ್ಲಿ ಅಮೆರಿಕದ ಪ್ರಮುಖ ಯುದ್ಧ ಕಾರ್ಯಾಚರಣೆಗಳನ್ನು ನಡೆಸಲಾಗಿದೆ’ ಎಂದು ದೃಢಪಡಿಸಿದ್ದಾರೆ. ಹೀಗಾಗಿ, ಇರಾನ್ ಅಮೆರಿಕ ಮತ್ತು ಇಸ್ರೇಲ್ ಎರಡೂ ದೇಶಗಳ ದಾಳಿಯನ್ನು ಎದುರಿಸಬೇಕಾದ ಇಕ್ಕಟ್ಟಿಗೆ ಸಿಲುಕಿದೆ.
ಇದನ್ನೂ ಓದಿ: ಹತ್ತು ದಿನ ಟೈಂ ಕೊಡ್ತೀನಿ, ಹೇಳಿದ್ದು ಕೇಳದೆ ಇದ್ರೆ ಯುದ್ಧ ಗ್ಯಾರಂಟಿ, ಇರಾನ್ ಗೆ ಗಡುವು ಕೊಟ್ಟ ಟ್ರಂಪ್
“ಸ್ವಲ್ಪ ಸಮಯದ ಹಿಂದೆ, ಯುನೈಟೆಡ್ ಸ್ಟೇಟ್ಸ್ ಸೈನ್ಯವು ಇರಾನ್‌ನಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು. ಇರಾನ್ ಆಡಳಿತದ ಬೆದರಿಕೆಗಳನ್ನು ತೆಗೆದುಹಾಕುವ ಮೂಲಕ ಅಮೆರಿಕದ ಜನರನ್ನು ರಕ್ಷಿಸುವುದು ನಮ್ಮ ಉದ್ದೇಶವಾಗಿದೆ. ಇನ್ನೂ, ಅಮೆರಿಕದ ಹಿತಾಸಕ್ತಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಟೆಹ್ರಾನ್ ಅಭಿಯಾನವನ್ನು ನಡೆಸುತ್ತಿದೆ. ನಾವು ಇನ್ನು ಮುಂದೆ ಅದನ್ನು ಸಹಿಸುವುದಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ.
#ವೀಕ್ಷಿಸಿ | ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಾರೆ, “… ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್, ಸಶಸ್ತ್ರ ಪಡೆಗಳು ಮತ್ತು ಎಲ್ಲಾ ಪೊಲೀಸರಿಗೆ, ನಾನು ಇಂದು ರಾತ್ರಿ ಹೇಳುತ್ತೇನೆ, ನೀವು ನಿಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು ಮತ್ತು ಸಂಪೂರ್ಣ ವಿನಾಯಿತಿ ಹೊಂದಿರಬೇಕು ಅಥವಾ ಪರ್ಯಾಯವಾಗಿ, ನಿಶ್ಚಿತ ಮರಣವನ್ನು ಎದುರಿಸಬೇಕು. ಆದ್ದರಿಂದ, ನಿಮ್ಮ … pic.twitter.com/2QejC7UT6J
– ANI (@ANI) ಫೆಬ್ರವರಿ 28, 2026
ಅತ್ತ ಪಾಕಿಸ್ತಾನ ಮತ್ತು ಅಮೆರಿಕದ ನಡುವೆಯೂ ಯುದ್ಧ ಜೋರಾಗಿದೆ. ಹೀಗಾಗಿ, ವಿವಿಧ ದೇಶಗಳ ನಾಯಕರು ಮಧ್ಯಸ್ಥಿಕೆ ವಹಿಸಲು ಮುಂದೆ ಬಂದಿದ್ದು, ಯುದ್ಧವನ್ನು ನಿಲ್ಲಿಸಲು ಮನವಿ ಮಾಡಲಾಗಿದೆ. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಗಾರರ ಸಂಘರ್ಷವನ್ನು ಕೊನೆಗೊಳಿಸಲು ಮಾತುಕತೆಗೆ ಮುಕ್ತವಾಗಿದ್ದೇವೆ ಎಂದು ಹೇಳಿದ್ದಾರೆ. ಆದರೆ ಪಾಕಿಸ್ತಾನ ಇದೀಗ ತಾವು ಯಾವುದೇ ಮಾತುಕತೆಗೆ ಸಿದ್ಧವಿಲ್ಲ. ಅಫ್ಘಾನಿಸ್ತಾನ ಭಯೋತ್ಪಾದನೆಯನ್ನು ಆಶ್ರಯಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ. “ತಾಲಿಬಾನ್ ಜೊತೆ ಯಾವುದೇ ಮಾತುಕತೆ ಇಲ್ಲ. ಅಫ್ಘಾನಿಸ್ತಾನದಿಂದ ಭಯೋತ್ಪಾದನೆ ಕೊನೆಗೊಳ್ಳಬೇಕು. ಪಾಕಿಸ್ತಾನದ ನಾಗರಿಕರು ಮತ್ತು ಪ್ರದೇಶವನ್ನು ರಕ್ಷಿಸುವುದು ಪಾಕಿಸ್ತಾನದ ಜವಾಬ್ದಾರಿಯಾಗಿದೆ” ಎಂದು ಪಾಕಿಸ್ತಾನ ಪ್ರಧಾನಿಯ ವಿದೇಶಿ ಮಾಧ್ಯಮ ವಕ್ತಾರ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ