Headlines

ಸೌದಿ ಅರೇಬಿಯಾ, ಬಹರೇನ್‌, ಕತಾರ್‌ ದೇಶಗಳ ರಾಜಧಾನಿ, ದುಬೈ ಮೇಲೂ ಕ್ಷಿಪಣಿ ಮಳೆ ಸುರಿಸಿದ ಇರಾನ್‌! | Iran Missile Attack Riyadh Dubai Doha Manama Us Bases Middle East War 2026 San

ಸೌದಿ ಅರೇಬಿಯಾ, ಬಹರೇನ್‌, ಕತಾರ್‌ ದೇಶಗಳ ರಾಜಧಾನಿ, ದುಬೈ ಮೇಲೂ ಕ್ಷಿಪಣಿ ಮಳೆ ಸುರಿಸಿದ ಇರಾನ್‌! | Iran Missile Attack Riyadh Dubai Doha Manama Us Bases Middle East War 2026 San



ಸೌದಿ ಅರೇಬಿಯಾ, ಬಹರೇನ್‌, ಕತಾರ್‌ ದೇಶಗಳ ರಾಜಧಾನಿ, ದುಬೈ ಮೇಲೂ ಕ್ಷಿಪಣಿ ಮಳೆ ಸುರಿಸಿದ ಇರಾನ್‌! | Iran Missile Attack Riyadh Dubai Doha Manama Us Bases Middle East War 2026 San

ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್, ಗಲ್ಫ್ ವಲಯದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಿಂದಾಗಿ ಸೌದಿ ಅರೇಬಿಯಾದ ರಿಯಾದ್ ಮತ್ತು ಯುಎಇಯ ದುಬೈನಂತಹ ಪ್ರಮುಖ ನಗರಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿದೆ.

ದುಬೈ/ರಿಯಾದ್/ಟೆಹ್ರಾನ್: ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್ ಈಗ ಇಡೀ ಗಲ್ಫ್ ವಲಯದ ಮೇಲೆ ತನ್ನ ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್‌ನಲ್ಲಿ ಭೀಕರ ಸ್ಫೋಟಗಳು ಸಂಭವಿಸುತ್ತಿವೆ. ಭಾರತೀಯರು ಹೆಚ್ಚಾಗಿ ವಾಸಿಸುವ ಗಲ್ಫ್‌ ಪ್ರದೇಶಗಳಾದ ದುಬೈ, ಅಬುಧಾಬಿಯಲ್ಲೂ ಭೀಕರ ದಾಳಿ ನಡೆಸಿದೆ. ಸೌದಿ ಅರೇಬಿಯಾ ರಾಜಧಾನಿ ರಿಯಾದ್‌, ಬಹರನ್‌ ರಾಜಧಾನಿ ಮನಾಮಾ ಹಾಗೂ ಕತಾರ್‌ ರಾಜಧಾನಿ ದೋಹಾದಲ್ಲೂ ಸ್ಫೋಟದ ಸದ್ದು ಕೇಳಿಬಂದಿದ್ದು, ಇದು ತಾನೇ ನಡೆಸಿರುವ ದಾಳಿ ಎಂದು ಇರಾನ್‌ ಹೇಳಿಕೊಂಡಿದೆ.

ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ಅಟ್ಯಾಕ್

ಇರಾನ್‌ನ ‘ಫಾರ್ಸ್’ (Fars) ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನಾಲ್ಕು ಅತ್ಯಂತ ಪ್ರಮುಖ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ:

ಕತಾರ್: ಅಲ್-ಉದೈದ್ (Al-Udeid) ವಾಯುನೆಲೆ.

ಕುವೈತ್: ಅಲ್-ಸಲೇಮ್ (Al-Salem) ವಾಯುನೆಲೆ.

ಯುಎಇ: ಅಲ್-ಧಫ್ರಾ (Al-Dhafra) ವಾಯುನೆಲೆ.

ಬಹ್ರೇನ್: ಅಮೆರಿಕದ 5ನೇ ನೌಕಾಪಡೆ ನೆಲೆ.

ರಿಯಾದ್ ಮತ್ತು ದುಬೈನಲ್ಲಿ ನಡುಕ

ರಾಜಧಾನಿ ರಿಯಾದ್‌ನಲ್ಲಿ ಭೀಕರ ಸ್ಫೋಟಗಳು ಸಂಭವಿಸಿವೆ ಎಂದು ಎಎಫ್‌ಪಿ (AFP) ವರದಿ ಮಾಡಿದೆ. : ಅಬುಧಾಬಿ ಮಾತ್ರವಲ್ಲದೆ ಈಗ ಪ್ರವಾಸಿಗರ ಸ್ವರ್ಗ ದುಬೈನಲ್ಲೂ ಸರಣಿ ಸ್ಫೋಟಗಳ ವರದಿಯಾಗುತ್ತಿವೆ. ಅಬುಧಾಬಿಯ ವಾಯುಪ್ರದೇಶವನ್ನು ಈಗಾಗಲೇ ಬಂದ್ ಮಾಡಲಾಗಿದೆ. ರಾಜಧಾನಿ ಮನಮಾದಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ಬೆನ್ನಲ್ಲೇ ಮತ್ತೊಂದು ಭೀಕರ ಸ್ಫೋಟದ ಸದ್ದು ಕೇಳಿಬಂದಿದೆ.

ಕತಾರ್‌ನಲ್ಲಿ ಕ್ಷಿಪಣಿ ಹೊಡೆದುರುಳಿಸಿದ ಸೇನೆ

ಕತಾರ್ ರಾಜಧಾನಿ ದೋಹಾದಲ್ಲಿ ಹಲವು ಸ್ಫೋಟದ ಸದ್ದುಗಳು ಕೇಳಿಬಂದಿವೆ. ಆದರೆ, ಇರಾನ್‌ನಿಂದ ಬಂದ ಎಲ್ಲಾ ಕ್ಷಿಪಣಿಗಳನ್ನು ತನ್ನ ರಕ್ಷಣಾ ವ್ಯವಸ್ಥೆಯ ಮೂಲಕ ಯಶಸ್ವಿಯಾಗಿ ಹೊಡೆದುರುಳಿಸಿರುವುದಾಗಿ ಕತಾರ್ ರಕ್ಷಣಾ ಸಚಿವಾಲಯ ತಿಳಿಸಿದೆ. “ನಮ್ಮ ಭದ್ರತಾ ಯೋಜನೆಯಂತೆ ತಕ್ಷಣವೇ ಕ್ರಮ ಕೈಗೊಂಡು ನಾಗರಿಕರ ರಕ್ಷಣೆ ಮಾಡಲಾಗಿದೆ” ಎಂದು ಕತಾರ್ ಹೇಳಿದೆ.

ವಿಮಾನ ರದ್ದು ಮಾಡಿದ ಟರ್ಕಿಶ್‌ ಏರ್‌ಲೈನ್ಸ್‌

ಟರ್ಕಿಶ್ ಏರ್ಲೈನ್ಸ್ ಮಾರ್ಚ್ 2 ರವರೆಗೆ ಲೆಬನಾನ್, ಸಿರಿಯಾ, ಇರಾಕ್, ಇರಾನ್ ಮತ್ತು ಜೋರ್ಡಾನ್ ಗೆ ವಿಮಾನಗಳನ್ನು ರದ್ದುಗೊಳಿಸಿರವುದಾಗಿ ತಿಳಿಸಿದೆ.

ಇರಾನ್‌ನ ಉರ್ಮಿಯಾದಲ್ಲಿ ಇಸ್ರೇಲ್ ದಾಳಿ

ಇತ್ತ ಪಶ್ಚಿಮ ಇರಾನ್‌ನ ಉರ್ಮಿಯಾ (Urmia) ನಗರದ ಮೇಲೆ ಇಸ್ರೇಲ್ ಸೇನೆ ದಾಳಿ ಆರಂಭಿಸಿದೆ. ದಾಳಿಗೂ ಮುನ್ನ ಇಸ್ರೇಲ್ ಸೇನೆಯ ವಕ್ತಾರರು ಇರಾನ್‌ನ ಮಿಲಿಟರಿ ಸ್ಥಾವರಗಳ ಸಮೀಪವಿರುವ ಎಲ್ಲಾ ನಿವಾಸಿಗಳಿಗೆ ತಕ್ಷಣವೇ ಜಾಗ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ.



Source link

Leave a Reply

Your email address will not be published. Required fields are marked *