ರಾಮನಗರ, ಫೆಬ್ರವರಿ 28: ಗುರುಗಳು ಧ್ಯಾನದಿಂದ ಎದ್ದಿಲ್ಲ, ಎದ್ದ ತಕ್ಷಣ ಡೇಟ್ ಹೇಳುತ್ತಾರೆ. ಅವರು ಕೊಟ್ಟ ದಿನಾಂಕದೊಳಗೆ ಡಿಕೆ ಶಿವಕುಮಾರ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ಮತ್ತೊಮ್ಮೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬೆಜ್ಜರಹಳ್ಳಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, ನಾನು ನಿಜವಾಗಿಯೂ ಹೇಳುತ್ತಿದ್ದೇನೆ, ನಾನು ಸುಳ್ಳು ಹೇಳುತ್ತಿಲ್ಲ. ಗುರುಗಳು ಧ್ಯಾನದಿಂದ ಎದ್ದ ತಕ್ಷಣ ಒಂದು ಡೇಟ್ ಕೊಡುತ್ತಾರೆ. ಆ ದಿನಾಂಕವೇ ಅಂತಿಮಕ್ಕೆ. ಗುರುಗಳು ಹೇಳಿದಂತೆ ಆಗಿಲ್ಲ ಅಂದರೆ ನನಗೆ ರಾಜಕಾರಣ ಬೇಡ. ಆ ಮೂಲಕ ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಇಕ್ಬಾಲ್ ಹುಸೇನ್ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.